ಆಪರೇಷನ್‌ ಹಾಕೈ | ಅಮೆರಿಕ ಏರ್‌ಸ್ಟ್ರೈಕ್‌ – ಸಿರಿಯಾದಲ್ಲಿ 36 ಐಸಿಸ್‌ ಉಗ್ರರ ನೆಲೆಗಳು ಉಡೀಸ್‌

2 Min Read

– 90ಕ್ಕೂ ಬಾಂಬ್‌ ಹಾಕಿದ ಅಮೆರಿಕ

ವಾಷಿಂಗ್ಟನ್‌: ಇಸ್ಲಾಮಿಕ್ ಸ್ಟೇಟ್‌ ಗುಂಪಿನ (ISIS) ವಿರುದ್ಧ ಪ್ರತೀಕಾರಕ್ಕೆ ಮುಂದಾಗಿರುವ ಅಮೆರಿಕ ಮತ್ತೆ ʻಆಪರೇಷನ್‌ ಹಾಕೈʼ (Operation Hawkeye) ಕಾರ್ಯಾಚರಣೆ ಆರಂಭಿಸಿದೆ. ಶನಿವಾರ ರಾತ್ರಿ ಸಿರಿಯಾದಂದ್ಯಂತ ಇರುವ ಐಸಿಸ್ ಉಗ್ರರ ವಿರುದ್ಧ ಅಮೆರಿಕ ಮತ್ತೊಮ್ಮೆ ವಾಯುದಾಳಿ ನಡೆಸಿದ್ದು, 30 ಕ್ಕೂ ಹೆಚ್ಚು ನೆಲೆಗಳನ್ನು ಧ್ವಂಸಗೊಳಿಸಿದೆ.

2025ರ ಡಿಸೆಂಬರ್‌ನಲ್ಲಿ ಐಸಿಸ್‌ ಉಗ್ರರ ದಾಳಿಗೆ ಮೂವರು ಅಮೆರಿಕನ್ನರ (Americans) ಹತ್ಯೆಗೆ ಪ್ರತೀಕಾರವಾಗಿ ಅಮೆರಿಕ ಈ ದಾಳಿ ನಡೆಸಿದೆ. ಸುಮಾರು 36 ನೆಲೆಗಳ ಮೇಲೆ ಯುಎಸ್‌ ಯುದ್ಧ ವಿಮಾನಗಳು (US Fighter Jets) ಹಾಗೂ ಡ್ರೋನ್‌ಗಳ ಮೂಲಕ 90ಕ್ಕೂ ಹೆಚ್ಚು ಬಾಂಬ್‌ ದಾಳಿ ನಡೆಸಲಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ತಿಳಿಸಿದ್ದಾರೆ. ಇದನ್ನೂ ಓದಿ: ʻಯುದ್ಧವಲ್ಲ, ಪ್ರತೀಕಾರʼ – ಸಿರಿಯಾದಲ್ಲಿ ಐಸಿಸ್‌ ಉಗ್ರರ ವಿರುದ್ಧ ಅಮೆರಿಕ ʻಆಪರೇಷನ್‌ ಹಾಕೈʼ ಶುರು

F-15E ಫೈಟರ್ ಜೆಟ್‌ಗಳು, A-10 ಅಟ್ಯಾಕಿಂಗ್‌ ವಿಮಾನಗಳು, AC-130J ಗನ್‌ಶಿಪ್‌ಗಳು, MQ-9 ಡ್ರೋನ್‌ಗಳು ಮತ್ತು ಜೋರ್ಡಾನ್‌ನ F-16 ಗಳು ಸೇರಿದಂತೆ ಬಹು ವಿಮಾನಗಳಿಂದ ಅಮೆರಿಕ ಏರ್‌ಸ್ಟ್ರೈಕ್‌ ನಡೆಸಿದೆ. ಆದ್ರೆ ಈವರೆಗೆ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ.

ಐಸಿಸ್‌ ಉಗ್ರರ ಮೂಲಸೌಕರ್ಯ ಕೇಂದ್ರಗಳು, ಕಳ್ಳಸಾಗಣೆ ಮಾರ್ಗಗಳು, ಶಸ್ತ್ರಾಸ್ತ್ರ ಸಂಗ್ರಹಣಾ ‌ಕೇಂದ್ರಗಳು ಸೇರಿ ಸುಮಾರು 36 ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಐಸಿಸ್‌ ಕಾರ್ಯಾಚರಣೆಯ ಸಾಮರ್ಥ್ಯ ಕುಗ್ಗಿಸುವುದು, ಭಯೋತ್ಪಾದನೆಯನ್ನ ಬುಡ ಸಮೇತ ಕಿತ್ತೊಗೆಯುವುದು, ಜೊತೆಗೆ ಈ ಪ್ರದೇಶದಲ್ಲಿ ಅಮೆರಿಕನ್‌ ಮತ್ತು ಮಿತ್ರಪಡೆಗಳ ಮೇಲೆ ಭವಿಷ್ಯದ ದಾಳಿಗಳನ್ನ ತಡೆಯುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಹಾಕಿನ್ಸ್ ಎಕ್ಸ್‌ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ವೆನೆಜುವೆಲಾ ಆಯ್ತು.. ಈಗ ಮೆಕ್ಸಿಕೋ, ಕ್ಯೂಬಾ, ಕೊಲಂಬಿಯಾ ಮೇಲೆ ಟ್ರಂಪ್ ಕಣ್ಣು – ಯಾಕೆ?

2025ರ ಡಿಸೆಂಬರ್‌ 20 ರಂದು ಅಮೆರಿಕ ʻಆಪರೇಷನ್‌ ಹಾಕೈʼ ಕಾರ್ಯಾಚರಣೆ ಭಾಗವಾಗಿ ಸಿರಿಯಾದಲ್ಲಿರುವ ಐಸಿಸ್‌ ಉಗ್ರ ನೆಲೆಗಳ ಮೇಲೆ ಮೊದಲ ಬಾರಿಗೆ ವಾಯುದಾಳಿ ನಡೆಸಿತ್ತು. ಇದರ ಮುಂದುವರಿದ ಭಾಗವಾಗಿ ಶನಿವಾರ ಮತ್ತೊಮ್ಮೆ ದಾಳಿ ನಡೆಸಿದೆ. ಜೋರ್ಡಾನ್ ಮಿಲಿಟರಿ ಪಡೆ ಕೂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ಇದನ್ನೂ ಓದಿ: 66 ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೊರ ನಡೆದ ಅಮೆರಿಕ – ಟ್ರಂಪ್‌ ನಿರ್ಧಾರ ಮಾಡಿದ್ದೇಕೆ?

ಅಮೆರಿಕ ದಾಳಿಗೆ ಮುಂದಾಗಿದ್ದೇಕೆ?
ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಮೆರಿಕದ ಪಡೆಗಳ ಮೇಲೆ ಐಸಿಸ್‌ ಉಗ್ರರ ಗುಂಪು ಭೀಕರ ದಾಳಿ ನಡೆಸಿತ್ತು. ದಾಳಿಯಲ್ಲಿ ಇಬ್ಬರು ಅಮೆರಿಕನ್‌ ಮತ್ತು ಓರ್ವ ನಾಗರಿಕ (ಭಾಷಾಂತರಕಾರ) ಸಾವನ್ನಪ್ಪಿದ್ದರು. ಅಲ್ಲದೇ ಇತರ ಮೂವರು ಅಮೆರಿಕನ್ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಇದು ಅಮೆರಿಕ ಪಡೆಗಳ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಒಂದಾಗಿತತ್ತು. ಹೀಗಾಗಿ ಅಮೆರಿಕ ಪ್ರತೀಕಾರಕ್ಕೆ ಮುಂದಾಗಿದೆ.

Share This Article