ಏರ್‌ಸ್ಟ್ರೈಕ್‌ಗೆ ಇರಾನ್‌ ತತ್ತರ; ಹೆಣಗಳ ರಾಶಿ – ಜೆಸಿಬಿಯಿಂದ ಗುಂಡಿ ತೆಗೆದು ಸಾಮೂಹಿಕ ಅಂತ್ಯಕ್ರಿಯೆ

1 Min Read

ಟೆಹ್ರಾನ್: ಅಮೆರಿಕ-ಇಸ್ರೇಲ್‌ (Israel-US) ನಡೆಸಿದ ದಾಳಿಯ ಮೊದಲ ದಿನವೇ 160 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ದುಃಖದಲ್ಲಿರುವ ಕುಟುಂಬಸ್ಥರು ತಮ್ಮ ಮಕ್ಕಳ ಅಂತ್ಯಕ್ರಿಯೆನ್ನು ಸಾಮೂಹಿಕವಾಗಿ ನೆರವೇರಿಸಿದ್ದಾರೆ.

ಸ್ಮಶಾನದಲ್ಲಿ ಜೆಸಿಬಿಯಿಂದ ನೂರಾರು ಸ್ಮಾಶಾನ ಗುಂಡಿಗಳನ್ನು ತೆರೆಯಾಗಿತ್ತು. ಅದರ ಡ್ರೋನ್‌ ದೃಶ್ಯದ ಫೋಟೊವನ್ನು ಇರಾನ್‌ (Iran) ಹಂಚಿಕೊಂಡಿದೆ. ಗುಂಡಿ ಮುಂದೆ ಮೃತದೇಹ ಇಟ್ಟುಕೊಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಬಳಿಕ ಸಾಮೂಹಿಕ ಅಂತ್ಯಕ್ರಿಯೆ ನಡೆಸಿದ್ದಾರೆ. ಇದನ್ನೂ ಓದಿ: ಯುದ್ಧದ ನಡುವೆಯೇ ಇರಾನ್‌ನಲ್ಲಿ ಭೂಕಂಪ

ದಕ್ಷಿಣ ಇರಾನ್‌ನ ಮಿನಾಬ್ ಪಟ್ಟಣದ ಶಜರೆಹ್ ತಯೆಬೆಹ್ ಬಾಲಕಿಯರ ಪ್ರಾಥಮಿಕ ಶಾಲೆ ಮೇಲೆ ಫೆ.28 ರಂದು ದಾಳಿ ನಡೆಸಲಾಗಿತ್ತು. ಶೈಕ್ಷಣಿಕ ಸಂಸ್ಥೆ, ಆಸ್ಪತ್ರೆಗಳು, ಹೆಚ್ಚಿನ ಜನರು ಓಡಾಟವಿರುವ ಸ್ಥಳಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೆ. ಇದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯ್ಲಲಿ ಯದ್ಧ ಅಪರಾಧ ಎಂದು ಕರಾ

ಶೈಕ್ಷಣಿಕ ಸಂಸ್ಥೆ ಅಥವಾ ಆಸ್ಪತ್ರೆ ಅಥವಾ ಯಾವುದೇ ಇತರ ನಾಗರಿಕ ರಚನೆಯ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡುವುದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ಯುದ್ಧ ಅಪರಾಧವಾಗಿದೆ ಎಂದು ಇರಾನ್‌ ಖಂಡಿಸಿದೆ. ಇದನ್ನೂ ಓದಿ: ದುಬೈ ಮೇಲೆ ಡಬಲ್‌ ಸ್ಟ್ರೈಕ್‌ – ಯುಎಸ್ ಸೇನಾ ಕಟ್ಟಡ, ಆಸ್ಟ್ರೇಲಿಯಾದ ಬೇಸ್ ಮೇಲೆ ಇರಾನ್ ದಾಳಿ

Share This Article