ಪಾಕಿಸ್ತಾನದಲ್ಲಿ ಅಮೆರಿಕ, ಇರಾನ್‌ ಶಾಂತಿ ಮಾತುಕತೆ?

2 Min Read

ವಾಷಿಂಗ್ಟನ್‌: ಇರಾನ್‌ (Iran) ಮತ್ತು ಅಮೆರಿಕ (USA) ನಡುವೆ ನಡೆಯುತ್ತಿರುವ ಯುದ್ಧ ಕೊನೆಗೊಳಿಸಲು ಪಾಕಿಸ್ತಾನ (Pakistan) ಮಧ್ಯಸ್ಥಿಕೆ ವಹಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.

ಪಾಕಿಸ್ತಾನದ ಮೂಲಕ ಇರಾನ್‌ ಜೊತೆ ಮಾತುಕತೆ ನಡೆಸಲು ಅಮೆರಿಕ ಮುಂದಾಗಿದೆ. ಈ ವಾರದಲ್ಲೇ ಅಮೆರಿಕ ಮತ್ತು ಇರಾನ್‌ ಹಿರಿಯ ಅಧಿಕಾರಿಗಳ ಮಧ್ಯೆ ಪಾಕಿಸ್ತಾನದಲ್ಲಿ ಮಾತುಕತೆ ನಡೆಯಲಿದೆ ಎಂದು ಇಸ್ರೇಲ್‌ (Isreal) ಮೂಲವನ್ನು ಆಧಾರಿಸಿ ಮಾಧ್ಯಮವೊಂದು ಸುದ್ದಿ ಪ್ರಕಟಿಸಿದೆ.

ಮಾತುಕತೆಗಳು ಕಾರ್ಯರೂಪಕ್ಕೆ ಬಂದರೆ  ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅಮೆರಿಕದ ಪರವಾಗಿ ಹಾಜರಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ನಾವು ಎಚ್ಚರಿಕೆ ನೀಡಿದ್ದಕ್ಕೆ ಟ್ರಂಪ್‌ ಕದನ ವಿರಾಮ ಘೋಷಣೆ – ಇರಾನ್‌ ತಿರುಗೇಟು

 

ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ಪಶ್ಚಿಮ ಏಷ್ಯಾ ಸಂಘರ್ಷವನ್ನು ಶಮನಗೊಳಿಸಲು ಎರಡೂ ಕಡೆಯವರನ್ನು ಮನವೊಲಿಸಿ ಮಾತುಕತೆ ನಡೆಸಲು ಸಕ್ರಿಯವಾಗಿ ಕೆಲಸ ಮಾಡುತ್ತಿವೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಇರಾನ್‌ ನಡುವೆ ರಾಜತಾಂತ್ರಿಕ ಸಂಪರ್ಕ ಸಹ ನಡೆಯುತ್ತಿದೆ. ಅಮೆರಿಕದ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗೆ ಪ್ರತ್ಯೇಕ ಸಂಭಾಷಣೆ ನಡೆಸಿದ್ದಾರೆ.


ಇಸ್ರೇಲಿ ಮಾಧ್ಯಮ ವರದಿಗಳ ಪ್ರಕಾರ, ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರು ಇರಾನ್‌ನ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ.

ಮಾತುಕತೆ ವಿಚಾರದ ಬಗ್ಗೆ ಅಮೆರಿಕದ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಪ್ರತಿಕ್ರಿಯಿಸಿ, ಇವು ಸೂಕ್ಷ್ಮ ರಾಜತಾಂತ್ರಿಕ ಚರ್ಚೆಗಳಾಗಿವೆ ಮತ್ತು ಮಾಧ್ಯಮದ ಮೂಲಕ ಅಮೆರಿಕ ಮಾತುಕತೆ ನಡೆಸುವುದಿಲ್ಲ. ಸಭೆಗಳ ಕುರಿತಾದ ಊಹಾಪೋಹಗಳನ್ನು ಶ್ವೇತಭವನ ಅಧಿಕೃತವಾಗಿ ಘೋಷಿಸುವವರೆಗೆ ಅಂತಿಮವೆಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ.

Share This Article