ವಾಷಿಂಗ್ಟನ್/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷದಲ್ಲಿ 38ನೇ ದಿನವೂ ದಾಳಿ ಪ್ರತಿದಾಳಿಗಳು ಮುಂದುವರಿದಿವೆ. ಈ ನಡುವೆ ಅಮೆರಿಕ – ಇರಾನ್ ನಡುವೆ ಎರಡು ಹಂತದ ಕದನ ವಿರಾಮದ (US Iran Ceasefire) ಲೆಕ್ಕಾಚಾರ ನಡೆಯುತ್ತಿದೆ. ಮೊದಲ ಹಂತದಲ್ಲಿ 45 ದಿನಗಳ ಕದನ ವಿರಾಮವನ್ನು ಪ್ರಸ್ತಾಪ ಕೇಳಿ ಬಂದಿದ್ದು, ಸಂಪೂರ್ಣ ದಾಳಿಯನ್ನ (Attack) ನಿಲ್ಲಿಸುವ ಚರ್ಚೆಗಳು ನಡೆಯುತ್ತಿದೆ.
ವರದಿಯ ಪ್ರಕಾರ, ಪಾಕಿಸ್ತಾನ (Pakistan), ಈಜಿಪ್ಟ್ ಮತ್ತು ಟರ್ಕಿ ದೇಶದ ಮಧ್ಯವರ್ತಿಗಳ ಮೂಲಕ ಹಾಗೂ ಟ್ರಂಪ್ ಅವರ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ನಡುವಿನ ಪಠ್ಯ ಸಂದೇಶ ವಿನಿಮಯದ ಮೂಲಕ ಮಾತುಕತೆಗಳನ್ನ ನಡೆಸಲಾಗುತ್ತಿದೆ. ಇದನ್ನೂ ಓದಿ: 6 ಮಕ್ಕಳು ಸೇರಿ 34 ಮಂದಿ ಸಾವಿಗೆ ಇರಾನ್ ಪ್ರತೀಕಾರ – ಇಸ್ರೇಲ್ನ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಸ್ಫೋಟ
ಮೊದಲ ಹಂತದಲ್ಲಿ 45 ದಿನಗಳ ಕದನ ವಿರಾಮ ಪ್ರಸ್ತಾಪ ಕೇಳಿ ಬಂದಿದ್ದು, ಈ ಅವಧಿಯಲ್ಲಿ ಎರಡೂ ಕಡೆ ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡಲು ಮಾತುಕತೆ ನಡೆಯಲಿದೆ. 2ನೇ ಹಂತದಲ್ಲಿ ಯುದ್ಧವನ್ನು ಕೊನೆಗೊಳಿಸುವ ಪ್ರಸ್ತಾಪ ಇದೆ. ಸಂಭಾವ್ಯ ಕದನ ವಿರಾಮ ಷರತ್ತುಗಳ ಕುರಿತು ಅಮೆರಿಕ – ಇರಾನ್ ಮತ್ತು ಮಧ್ಯಸ್ಥಿಕೆ ಗುಂಪುಗಳು ಚರ್ಚೆಯಲ್ಲಿ ತೊಡಗಿವೆ. ಮಾತುಕತೆಯಲ್ಲಿ ಪ್ರಗತಿ ಕಂಡುಬಂದರೆ, ಅಂತಿಮ ಒಪ್ಪಂದಕ್ಕೆ ಹೆಚ್ಚಿನ ಸಮಯವ ನೀಡಲು ಕದನ ವಿರಾಮವನ್ನು ವಿಸ್ತರಿಸಬಹುದು ಎನ್ನಲಾಗಿದೆ.
ಅಂದಾಹಾಗೇ ಈ ಮಾತುಕಯಲ್ಲಿ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದು, ಇರಾನ್ನ ಹೆಚ್ಚು ಸಮೃದ್ಧವಾದ ಯುರೇನಿಯಂವನ್ನು ನಾಶಪಡಿಸುವುದು, ಪ್ರಾಕ್ಸಿ ವಾರ್ಗಳನ್ನ ನಿಲ್ಲಿಸುವುದು ಸೇರಿರಲಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಮುಗಿಯದ ಯುದ್ಧ – ಅಮೆರಿಕ ಕಚ್ಛಾ ತೈಲ ಬೆಲೆ ಬ್ಯಾರಲ್ಗೆ 113 ಡಾಲರ್ಗೆ ಏರಿಕೆ
ಒಟ್ಟಿನಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾಗಶಃ ಒಪ್ಪಂದಕ್ಕೆ ಬರುವ ಸಾಧ್ಯತೆಗಳು ಕಡಿಮೆಯಿದೆ. ಈ ಮಧ್ಯೆ ಇರಾನ್ನ ಮೂಲ ಸೌಕರ್ಯಗಳ ಮೇಲೆ ಅಮೆರಿಕ ನಡೆಸುತ್ತಿರುವ ದಾಳಿ, ಗಲ್ಫ್ ರಾಷ್ಟ್ರಗಳಾದ್ಯಂತ ಇಂಧನ ಮತ್ತು ನೀರಿನ ಸೌಲಭ್ಯವನ್ನು ಗುರಿಯಾಗಿಸಿ ಇರಾನ್ ನಡೆಸುತ್ತಿರುವ ಪ್ರತೀಕಾರದ ದಾಳಿಗಳನ್ನು ತಡೆಯಲು ಮಧ್ಯವರ್ತಿಗಳ ಗುಂಪು ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸುತ್ತಿದೆ.



