US-Iran Ceasefire| ಹಾರ್ಮುಜ್‌ನಲ್ಲಿ ಸಂಚಾರಕ್ಕೆ 2 ಹೊಸ ಪರ್ಯಾಯ ಮಾರ್ಗ ಪ್ರಕಟಿಸಿದ IRGC

1 Min Read

ಟೆಹ್ರಾನ್‌: ಅಮೆರಿಕ ಮತ್ತು ಇರಾನ್‌ ಮಧ್ಯೆ ಕದನ ವಿರಾಮ (US-Iran Ceasefire) ಘೋಷಣೆಯಾದ ಬಳಿಕ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯು ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಹಾದುಹೋಗುವ ಹಡಗುಗಳಿಗಾಗಿ ಎರಡು ಹೊಸ ಪರ್ಯಾಯ ಮಾರ್ಗಗಳನ್ನು (Routes) ಪ್ರಕಟಿಸಿದೆ.

ಹಾರ್ಮುಜ್ ಜಲಸಂಧಿಯ ಸಾಮಾನ್ಯ ಹಡಗು ಸಂಚಾರದ ಮಾರ್ಗದಲ್ಲಿ ಸಮುದ್ರದ ಒಳಗೆ ಸಮುದ್ರ ಬಾಂಬ್‌ (Mines) ಹಾಕಿದ್ದರಿಂದ ಆ ಮಾರ್ಗದಲ್ಲಿ ಚಲಿಸುವುದು ಸಾಧ್ಯವಿಲ್ಲ. ಈ ಕಾರಣಕ್ಕೆ ಹಡಗುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಹೊಸ ಮಾರ್ಗಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದೆ.

ಈ ಹೊಸ ಮಾರ್ಗಗಳು ಹಡಗುಗಳನ್ನು ಇರಾನ್‌ನ ಲಾರಕ್ ದ್ವೀಪದ (Larak Island) ಸಮೀಪವಿರುವ ನೀರಿನ ಮೂಲಕ ಹಾದುಹೋಗುವಂತೆ ಮಾಡುತ್ತವೆ. ಇದನ್ನೂ ಓದಿ:  ಕದನ ವಿರಾಮ ಘೋಷಣೆ ಬೆನ್ನಲ್ಲೇ 10 ನಿಮಿಷದಲ್ಲಿ ಲೆಬನಾನ್‌ ಮೇಲೆ ಇಸ್ರೇಲ್‌ನಿಂದ 100 ಕ್ಷಿಪಣಿ ದಾಳಿ

 

ಹಡಗುಗಳು ಒಮಾನ್ ಸಮುದ್ರದಿಂದ ಲಾರಕ್ ದ್ವೀಪದ ಉತ್ತರ ಭಾಗದ ಕಡೆಗೆ ಪ್ರವೇಶಿಸಬೇಕು. ಪರ್ಷಿಯನ್ ಕೊಲ್ಲಿಯಿಂದ ಲಾರಕ್ ದ್ವೀಪದ ದಕ್ಷಿಣ ಭಾಗದ ಮೂಲಕ ಒಮಾನ್ ಸಮುದ್ರದ ಕಡೆಗೆ ನಿರ್ಗಮಿಸಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ಹಾರ್ಮುಜ್‌ ಸಮುದ್ರ ಬಾಂಬ್‌ಗಳಿಂದ ತಪ್ಪಿಸಿ ಬದಲಿ ಮಾರ್ಗ ಬಳಸಿ ಭಾರತಕ್ಕೆ ಹಡಗು ಬಂದಿದ್ದೇಗೆ?

ಈ ಮಾರ್ಗಗಳಲ್ಲಿ ಸಂಚರಿಸುವ ಎಲ್ಲಾ ಹಡಗುಗಳು IRGC ನೌಕಾಪಡೆಯೊಂದಿಗೆ ನೇರ ಸಮನ್ವಯ ಸಾಧಿಸುವುದು ಕಡ್ಡಾಯವಾಗಿದೆ. ಇದನ್ನೂ ಓದಿ: ಒಂದು ಬ್ಯಾರಲ್‌ ತೈಲಕ್ಕೆ 1 ಡಾಲರ್‌ ತೆರಿಗೆ – ಕ್ರಿಪ್ಟೋ ಕರೆನ್ಸಿಯಲ್ಲಿ ಟ್ಯಾಕ್ಸ್‌ ಪಾವತಿಗೆ ಇರಾನ್‌ ಡಿಮ್ಯಾಂಡ್‌
ವರದಿಗಳ ಪ್ರಕಾರ ಈ ಮಾರ್ಗಗಳನ್ನು ಬಳಸುವ ಹಡಗುಗಳಿಗೆ ಕ್ರಿಪ್ಟೋಕರೆನ್ಸಿ ಅಥವಾ ಚೀನೀ ಯುವಾನ್‌ನಲ್ಲಿ ಶುಲ್ಕ (Toll) ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
Share This Article