48 ಗಂಟೆಗಳ ಡೆಡ್‌ಲೈನ್‌ ಮುಗಿಯುವ ಮೊದಲೇ ಇರಾನ್‌ ಮೇಲೆ ಅಮೆರಿಕ, ಇಸ್ರೇಲ್‌ ಭಯಾನಕ ದಾಳಿ

1 Min Read

ವಾಷಿಂಗ್ಟನ್‌/ಟೆಲ್‌ ಅವಿವ್‌: ಇರಾನ್ (Iran) ತಾರ್ಕಿಕ ನಿರ್ಧಾರಕ್ಕೆ ಬರುವ ಮೊದಲೇ ಅಮೆರಿಕ (USA) ಹಾಗೂ ಇಸ್ರೇಲ್ (Isreal) ಭಯಾನಕ ದಾಳಿಗೆ ನಡೆಸಿದೆ. ಡೆಡ್‌ಲೈನ್ ಮುಗಿಯುವ ಮೊದಲೇ ಇರಾನ್‌ನ ಸುಮಾರು 90% ಕಚ್ಚಾ ತೈಲ ರಫ್ತು ಮಾಡುವ ಖಾರ್ಗ್ ದ್ವೀಪದ (Kharg Island) ಮೇಲೆ ಸರಣಿ ದಾಳಿ ನಡೆದಿದೆ.

ಅಮೆರಿಕದ ಮಿಲಿಟರಿ ಪಡೆ 50ಕ್ಕೂ ಹೆಚ್ಚು ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿ ಬಂಕರ್‌ಗಳು, ರೇಡರ್ ಕೇಂದ್ರಗಳು ಹಾಗೂ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಗನ್ನು ನಾಶಗೊಳಿಸಿದೆ.

ಟೆಹ್ರಾನ್‌ನಲ್ಲಿರುವ ಸರ್ಕಾರಿ ಕಚೇರಿಗಳ ಮೇಲೆ ಅಮೆರಿಕ ಬೆಂಕಿ ಮಳೆ ಸುರಿಸಿದೆ. ಉತ್ತರ ಇರಾನ್ ಮೇಲೆ ಇಸ್ರೇಲಿ ದಾಳಿ ನಡೆಸಿದ್ದು, 18 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಟೆಹ್ರಾನ್‌ನ ವಿಮಾನ ನಿಲ್ದಾಣಗಳಾದ ಮೆಹರಾಬಾದ್, ಖರ‍್ರಂಬಾದ್ ಅನ್ನು ಉಡೀಸ್ ಮಾಡಿದೆ. ಇದನ್ನೂ ಓದಿ: ಇಂದು ರಾತ್ರಿ ಒಂದು ಇಡೀ ನಾಗರಿಕತೆಯೇ ಅಂತ್ಯವಾಗಲಿದೆ: ಇರಾನಿಗೆ ಟ್ರಂಪ್‌ ವಾರ್ನಿಂಗ್‌

 

ರೈಲ್ವೇ ಮಾರ್ಗವನ್ನು ಗುರಿಯಾಗಿಸುವುದಾಗಿ ಇಸ್ರೇಲ್ ಎಚ್ಚರಿಸಿದ ಬೆನ್ನಲ್ಲೇ ಕಶನ್ ರೈಲ್ವೇ ಬ್ರಿಡ್ಜ್ ಮೇಲೆ ದಾಳಿ ಮಾಡಿ, ಇಬ್ಬರನ್ನು ಕೊಂದಿದೆ.

ಇರಾನ್ ಕೂಡ ಅಲರ್ಟ್ ಆಗಿದ್ದು, ಇಂಧನ ಕೇಂದ್ರ, ಏರ್‌ಪೋರ್ಟ್, ರೈಲು ದಾಳಿ, ಮುನ್ನೆಚ್ಚರಿಕೆಯಾಗಿ ಹೈವೇಗಳು ಬಂದ್ ಮಾಡಿದೆ. ರಾತ್ರಿ 9 ಗಂಟೆಯವರೆಗೆ ದೇಶಾದ್ಯಂತ ರೈಲು ಪ್ರಯಾಣವನ್ನು ಸ್ಥಗಿತಗೊಳಿಸಿದೆ.

ರೈಲ್ವೇ ಮಾರ್ಗ ದಾಳಿ ವಿಷಯವನ್ನು ಯುನೆಸ್ಕೋದಲ್ಲಿ ಪ್ರಸ್ತಾಪಿಸಿದೆ. ಅಲ್ಲದೆ, ಟ್ರಂಪ್ ಬೆದರಿಕೆಗೆ ಅಂಜದ ಇರಾನ್ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಟರ್ಕಿಯ ಇಸ್ತಾಂಬುಲ್ ರಾಯಭಾರಿ ಕಚೇರಿ ಮೇಲೆ ದಾಳಿ ಮಾಡಿದೆ. ಇದನ್ನೂ ಓದಿ: ಇರಾನ್‌ ಡೆಡ್‌ಲೈನ್‌| ಅಮೆರಿಕದ ಭಾರತೀಯ ರಾಯಭಾರಿಯನ್ನು ಶ್ವೇತಭವನಕ್ಕೆ ಆಹ್ವಾನಿಸಿದ ಟ್ರಂಪ್‌

ಸೌದಿ ಅರೇಬಿಯಾದ ಅಲ್ ಜುಬೈಲ್ ಪೆಟ್ರೋಕೆಮಿಕಲ್ ಮೇಲೆ ಡ್ರೋನ್, ಮಿಸೈಲ್ ದಾಳಿ ನಡೆಸಿದೆ. ಇರಾನ್‌ನಿಂದ ದಾಳಿ ತೀವ್ರಗೊಳಿಸುವ ಆತಂಕ ಹಿನ್ನೆಲೆ ಸೌದಿ ಅರೇಬಿಯಾ-ಬಹ್ರೇನ್‌ಗೆ ಸಂಪರ್ಕಿಸುವ ಕಿಂಗ್ ಫಹದ್ ಸೇತುವೆಯನ್ನು ಬಂದ್ ಮಾಡಿದೆ.

Share This Article