ಅಮೆರಿಕದ ಎಫ್-35 ಸೇರಿ ಜೆಟ್, ಕಾಪ್ಟರ್ ಉಡೀಸ್ – ಓರ್ವ ಪೈಲಟ್ ಸೆರೆ ಅಂತಿದೆ ಇರಾನ್

2 Min Read

ಟೆಹ್ರಾನ್: ಅಮೆರಿಕದ ಎಫ್-35 ಸೇರಿ ಜೆಟ್ (F-35 Fighter Jet), ಕಾಪ್ಟರ್ ಉಡೀಸ್ ಮಾಡಿದ್ದೇವೆ. ನೈಋತ್ಯ ಇರಾನ್‌ನಲ್ಲಿ ಅಮೆರಿಕದ ಯುದ್ಧ ವಿಮಾನದ ಪೈಲಟ್ ವಿಮಾನದಿಂದ ಜಿಗಿದಿದ್ದು, ಸೆರೆ ಹಿಡಿದಿದ್ದೇವೆ ಎಂದು ಇರಾನ್ (Iran) ತಿಳಿಸಿದೆ.

ಪಶ್ಚಿಮ ಏಷ್ಯಾ ಸಂಘರ್ಷ 35ನೇ ದಿನ ಕಂಡಿದೆ. ಇರಾನ್ ಆಪರೇಷನ್ ಟ್ರೂ ಪ್ರಾಮಿಸ್ ಅಂಗವಾಗಿ ಇಂದು 92ನೇ ಹಂತದ ಪ್ರತಿದಾಳಿ ಆರಂಭಿಸಿದೆ. ಒಂದೇ ದಿನ ಅಮೆರಿಕದ ಪ್ರಮುಖ ಎಫ್-35 ಸ್ಟೆಲ್ತ್ ಫೈಟರ್ ಜೆಟ್, ಎಫ್-15ಇ ಜೆಟ್, ಯುಹೆಚ್ 60 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಹಾಗೂ `ಯುದ್ಧದೊರೆ’ ಖ್ಯಾತಿಯ ಹೆಚ್‌ಸಿ 130ಜೆ ವಿಮಾನವನ್ನು ಹೊಡೆದಿದ್ದೇವೆ. ಎಫ್-15ಇ ಜೆಟ್ ಹೊಡೆದಾಗ ಪೈಲಟ್ ಹೊರಜಿಗಿದಿದ್ದು, ಸೆರೆ ಹಿಡಿದಿದ್ದೇವೆ ಅಂತ ಇರಾನ್ ಹೇಳಿದೆ. ಇದನ್ನೂ ಓದಿ: 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಜೆಟ್‌ಗಳನ್ನು ಹೊಡೆದುರುಳಿಸಿದ್ದೇವೆ: ಇರಾನ್‌

ಜೆಟ್ ಹಾನಿಗೀಡಾಗಿರುವುದನ್ನು ಒಪ್ಪಿಕೊಂಡಿರುವ ಅಮೆರಿಕ, ಪೈಲಟ್ ನಾಪತ್ತೆಯಾಗಿದ್ದಾನೆ ಎಂದಿದೆ. ಅಮೆರಿಕದ ರಾಡಾರ್ ಗುರಿಯಾಗಿಸಿ ಇರಾನ್ ಬ್ಯಾಲಿಸ್ಟಿಕ್ ಮಿಸೈಲ್ ಉಡಾಯಿಸಿದೆ. ಇಸ್ರೇಲ್‌ನ ಟೆಲ್ ಅವಿವ್ ಮೇಲೆ ಕ್ಲಸ್ಟರ್ ಮಿಸೈಲ್ ಮಳೆ ಸುರಿಸಿದೆ. ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸ್ಸಾದ್‌ನ ಕೇಂದ್ರ ಕಚೇರಿಯನ್ನು ಉಡಾಯಿಸಿರೋದಾಗಿ ಇರಾನ್ ಹೇಳಿದೆ. ಅಮೆರಿಕಕ್ಕೆ ಶೇ.60ರಷ್ಟು ಅಲ್ಯೂಮಿನಿಯಂ ಪೂರೈಕೆ ಆಗ್ತಿದ್ದ ಬಹ್ರೇನ್, ಯುಎಇ ಅಲ್ಯೂಮಿನಿಯಂ ಘಟಕಗಳು, ಕುವೈತ್ ತೈಲ ಸಂಸ್ಕರಣಾ ಘಟಕ ಮಿನಾ-ಅಲ್-ಅಹ್ಮದಿ, ಇರಾಕ್‌ನ ಕುರ್ದಿಶ್‌ನಲ್ಲಿರುವ ಅಮೆರಿಕ ಏರ್‌ಬೇಸ್ ಮೇಲೆ ಇರಾನ್ ಡ್ರೋನ್ ದಾಳಿ ಮಾಡಿದೆ.

ಲೆಬನಾನ್‌ನ ಹೆಜ್ಬುಲ್ಲಾ ಉಗ್ರರು ಇಸ್ರೇಲ್‌ನ ಟ್ಯಾಂಕರ್‌ಗಳನ್ನು ಡ್ರೋನ್‌ಗಳ ಮೂಲಕ ನಾಶ ಮಾಡುತ್ತಿದ್ದಾರೆ. ದುಬೈ ಒರಾಕಲ್ ಡೇಟಾ ಸೆಂಟರ್ ಮೇಲೆ ಕ್ಷಿಪಣಿ ದಾಳಿ ಮಾಡಿರೋದಾಗಿ ಇರಾನ್‌ನ ಐಆರ್‌ಜಿಸಿ ಹೇಳಿದೆ. ಟೆಲಿಕಾಂ ಕಂಪನಿಗಳ ಮೇಲೆ ನಾವು ದಾಳಿ ಮಾಡ್ತೇವೆ ಎಂದು ಎಚ್ಚರಿಸಿದೆ.

ಅಬುಧಾಬಿಯ ಹಬ್ಷನ್ ಗ್ಯಾಸ್ ಸ್ಥಾವರದ ಮೇಲೆ ಮಿಸೈಲ್ ಅವಶೇಷಗಳು ಬಿದ್ದಿವೆ. ಇರಾನ್ ನೌಕಾಪಡೆಯ ಗುಪ್ತಚರ ವಿಭಾಗದ ಬೆಹ್ನಾಮ್ ರೆಝಾಯ್ ಹತ್ಯೆಯನ್ನು ಐಆರ್‌ಜಿಸಿ ಒಪ್ಪಿಕೊಂಡಿದೆ. ಅಮೆರಿಕ-ಇಸ್ರೇಲ್ ಪಡೆಗಳು ಕೂಡ ಇರಾನ್‌ನ ಚರಕ ಬಂದರು, ಮೆಹರಬಾದ್ ಏರ್‌ಪೋರ್ಟ್, ಉತ್ತರ ಇರಾನ್ ವಿವಿ ಹೊಡೆದಿವೆ. ಇರಾನ್‌ನ ಶೇ.70ರಷ್ಟು ಸ್ಟೀಲ್ ಘಟಕಗಳು ನಾಶ ಆಗಿವೆ ಎಂದು ಇಸ್ರೇಲ್ ಪಿಎಂ ನೆತನ್ಯಾಹು ಹೇಳಿದ್ದಾರೆ. ಇದನ್ನೂ ಓದಿ: ಇರಾನ್‌ಗೆ ಶಾಕ್: ನೌಕಾಪಡೆ ಉಪ ಗುಪ್ತಚರ ಮುಖ್ಯಸ್ಥ ಬೆಹ್ನಾಮ್ ರೆಝಾಯ್ ಹತ್ಯೆ – ಖಚಿತಪಡಿಸಿದ IRGC

Share This Article