ರಷ್ಯಾ-ಉಕ್ರೇನ್‌ ಯುದ್ಧ ಕೊನೆಯಾಗುವ ಸಮಯ ಹತ್ತಿರದಲ್ಲಿದೆ: ಟ್ರಂಪ್‌

1 Min Read

– ತನ್ನ ನಿವಾಸದಲ್ಲಿ ಝೆಲೆನ್ಸ್ಕಿ ಜೊತೆ ಮಾತುಕತೆ
– ಸಭೆಗೂ ಮುನ್ನ ಪುಟಿನ್‌ಗೆ ಟ್ರಂಪ್‌ ಕರೆ

ವಾಷಿಂಗ್ಟನ್‌: ರಷ್ಯಾ ಉಕ್ರೇನ್‌ (Russia-Ukraine War) ನಡುವಿನ ಯುದ್ಧ ಕೊನೆಯಾಗುವ ಹತ್ತಿರದಲ್ಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದ್ದಾರೆ.

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ( Volodymyr Zelenskyy) ಅವರೊಂದಿಗೆ ತನ್ನ ಖಾಸಗಿ ನಿವಾಸ ಫ್ಲೋರಿಡಾದ ಮಾರ್-ಎ-ಲಾಗೊದಲ್ಲಿ ಭಾನುವಾರ ಟ್ರಂಪ್‌ ಮಹತ್ವದ ಸಭೆ ನಡೆಸಿದರು.

ಎರಡು ಗಂಟೆಗಳ ಕಾಲ ನಡೆದ ಸಭೆಯ ಬಳಿಕ ಮಾತನಾಡಿದ ಟ್ರಂಪ್‌, ನಾವು ಎರಡೂ ಕಡೆಯವರೊಂದಿಗೆ ಬಹಳ ಹತ್ತಿರವಾಗಿದ್ದೇವೆ. ಯುದ್ಧವನ್ನು ಕೊನೆಗೊಳಿಸುವ ಕರಡು ಒಪ್ಪಂದ ಬಹುತೇಕ 95% ಪೂರ್ಣಗೊಂಡಿದೆ. ಎರಡೂ ಕಡೆಯವರು ಆ ಯುದ್ಧವನ್ನು ಕೊನೆಗೊಳಿಸುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ ಎಂದು ತಿಳಿಸಿದರು.   ಇದನ್ನೂ ಓದಿ:  ʻಬಂಕರ್‌ಗಳಲ್ಲಿ ಅವಿತುಕೊಳ್ಳೋಣʼ – ಆಪರೇಷನ್ ಸಿಂಧೂರ ದಾಳಿಯ ಭೀಕರತೆ ನೆನಪಿಸಿಕೊಂಡ ಪಾಕ್‌ ಅಧ್ಯಕ್ಷ

ಝೆಲೆನ್ಸ್ಕಿ ಜೊತೆ ಸಭೆ ನಡೆಸುವ ಮೊದಲು ಟ್ರಂಪ್‌ ಪುಟಿನ್‌ಗೆ(Vladimir Putin) ದೂರವಾಣಿ ಕರೆ ಮಾಡಿ ಯುದ್ಧ ಕೊನೆಗೊಳಿಸುವ ಸಂಬಂಧ ಮಾತನಾಡಿದ್ದರು. ಯುದ್ಧ ಮುಗಿಸುವ ಸಂಬಂಧ ಟ್ರಂಪ್‌ ಉಕ್ರೇನ್‌ ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಮುಂದಾಗಿದ್ದಾರೆ.  ಇದನ್ನೂ ಓದಿ:  36 ಗಂಟೆಗಳಲ್ಲಿ 80 ಡ್ರೋನ್ ದಾಳಿ – ಭಾರತದ ದಾಳಿಯಲ್ಲಿ ನೂರ್‌ ಖಾನ್‌ ವಾಯುನೆಲೆ ಧ್ವಂಸ; ಸತ್ಯ ಒಪ್ಪಿಕೊಂಡ ಪಾಕ್‌

ಸಭೆಯ ಬಳಿಕ ಮಾತನಾಡಿದ ಝೆಲೆನ್ಸ್ಕಿ, ಟ್ರಂಪ್ ರೂಪಿಸಿದ ಶಾಂತಿ ಒಪ್ಪಂದಕ್ಕೆ 90% ಒಪ್ಪಿಗೆ ಇದೆ. ಟ್ರಂಪ್‌ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ನಾವು ಮಾತುಕತೆಯ ಅಂತಿಮ ಹಂತದಲ್ಲಿದ್ದೇವೆ ಎಂದು ಹೇಳಿದರು.

ಮುಖ್ಯವಾಗಿ ಡಾನ್‌ಬಾಸ್ ಪ್ರದೇಶದ ಭವಿಷ್ಯದ ಬಗ್ಗೆ ಚರ್ಚೆ ನಡೆದಿದೆ. ರಷ್ಯಾ ಡಾನ್‌ಬಾಸ್ ಪ್ರದೇಶದ 90% ಜಾಗವನ್ನು ಆಕ್ರಮಿಸಿಕೊಂಡಿದೆ. ಲುಹಾನ್ಸ್ಕ್ ಸಂಪೂರ್ಣವಾಗಿ ಆಕ್ರಮಿಸಿಕೊಂಡಿದೆ.

Share This Article