ಇರಾನ್‌ ಪರಮಾಣು ಸೌಲಭ್ಯದ ಮೇಲೆ ದಾಳಿ – ವಿಕಿರಣ ಸೋರಿಕೆಯ ಆತಂಕ

1 Min Read

ಟೆಹ್ರಾನ್‌: ಭಾನುವಾರದ ಅಮೆರಿಕ (USA) ಮತ್ತು ಇಸ್ರೇಲ್‌ ಜಂಟಿ ಮಿಲಿಟರಿ ಕಾರ್ಯಾಚರಣೆಯ ಸಂದರ್ಭದಲ್ಲಿ ತನ್ನ ನತಾಂಜ್‌ ಪರಮಾಣು ಸೌಲಭ್ಯಗಳ(Natanz Nuclear Facility) ಮೇಲೆ ದಾಳಿ ನಡೆದಿದೆ ಎಂದು ಇರಾನ್‌ ಹೇಳಿದೆ.

ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯಲ್ಲಿ (IAEA) ಇರಾನ್‌ನ ರಾಯಭಾರಿಯಾಗಿರುವ ರೆಜಾ ನಜಾಫಿ, ವಿಯೆನ್ನಾದಲ್ಲಿ ನಡೆದ ಏಜೆನ್ಸಿಯ 35-ರಾಷ್ಟ್ರಗಳ ಆಡಳಿತ ಮಂಡಳಿಯ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ವಿಯೆನ್ನಾದಲ್ಲಿ ಶಾಂತಿ ಮಾತುಕತೆ ನಡೆಯುತ್ತಿರುವ ಸಮಯದಲ್ಲೇ ಶಾಂತಿಯುತವಾಗಿ ಬಳಕೆ ಮಾಡಲು ನಾವು ಸದ್ಧತೆ ನಡೆಸುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ದೂರಿದರು.

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಟೆಹ್ರಾನ್ ತನ್ನ ಪರಮಾಣು ಮೂಲಸೌಕರ್ಯವನ್ನು ಪುನರ್‌ ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ. ಕಟ್ಟಡಗಳು ಮತ್ತು ಕಾರ್ಖಾನೆಗಳನ್ನು ನಾಶಮಾಡುವುದು ನಮಗೆ ಸಮಸ್ಯೆಯಾಗುವುದಿಲ್ಲ. ಹೆಚ್ಚಿನ ಬಲದೊಂದಿಗೆ ಮತ್ತೆ ನಾವು ನಿರ್ಮಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ವಿಶ್ವದ ಅತಿ ದೊಡ್ಡ ತೈಲ ಕಂಪನಿ ಸೌದಿ ಅರಾಮ್ಕೊದ ಮೇಲೆಯೇ ಇರಾನ್‌ ಡ್ರೋನ್‌ ದಾಳಿ

 

ಪರಮಾಣು ಸೌಲಭ್ಯದ ಮೇಲೆ ದಾಳಿ ನಡೆಸಿದ ಬಗ್ಗೆ ಆತಂಕ ವ್ಯಕ್ತಪಡಿಸಿದ ಐಎಇಎ ಮಹಾನಿರ್ದೇಶಕ ರಾಫೆಲ್ ಮರಿಯಾನೋ ಗ್ರೊಸಿ ವಿಕಿರಣ ಸೋರಿಕೆಯ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.

ಇರಾನ್‌ ಫೋರ್ಡೋ, ನತಾಂಜ್‌ ಮತ್ತು ಎಸ್ಪಹಾನ್‌ನಲ್ಲಿ ಅಣುಸ್ಥಾವರಗಳನ್ನು ಸ್ಥಾಪಿಸಿದೆ. ಈ ಪೈಕಿ ಫೋರ್ಡೋದ್ದು ಭೂಗತ ಅಣುಸ್ಥಾವರ ಆಗಿದ್ದರೆ ನತಾಂಜ್‌ನಲ್ಲಿ ಯುರೇನಿಯಂ ಸಂವರ್ಧನ ಘಟಕ, ಎಸ್ಸಹಾನ್‌ನಲ್ಲಿ ಅತಿ ದೊಡ್ಡ ಪರಮಾಣು ಸಂಶೋಧನಾ ಕೇಂದ್ರವನ್ನು ತೆರೆದಿದೆ. ಇದನ್ನೂ ಓದಿ: ಇರಾನ್‌ ವಿರುದ್ಧ ಅಮೆರಿಕ ಜೊತೆ ಕೈಜೋಡಿಸಲು ಯುಕೆ, ಫ್ರಾನ್ಸ್‌, ಜರ್ಮನಿ ಸಿದ್ಧ

ನತಾಂಜ್‌ ಸಂಕೀರ್ಣದ ಭಾಗಗಳನ್ನು ಭೂಗತವಾಗಿ ನಿರ್ಮಿಸಲಾಗಿದೆ, ಸಂಭಾವ್ಯ ವಾಯುದಾಳಿಗಳನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾಗಿದೆ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು.

ಕಳೆದ ವರ್ಷ ಜೂನ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಫೋರ್ಡೋ, ನತಾಂಜ್‌ ಮತ್ತು ಎಸ್ಪಹಾನ್‌ನಲ್ಲಿರುವ ಪರಮಾಣ ಸೌಲಭ್ಯಗಳ ಮೇಲೆ ದಾಳಿ ನಡೆಸಿತ್ತು. ಅಮೆರಿಕ ಬಿ2 ಬಾಂಬರ್‌ ವಿಮಾನದ ಮೂಲಕ ಸುಮಾರು 14 ಸಾವಿರ ಕೆಜಿ ತೂಕದ ಬಾಂಬ್‌ ಹಾಕಿ ಧ್ವಂಸ ಮಾಡಿತ್ತು.

Share This Article