ಅಕ್ರಮ ವಲಸಿಗರ ಕೈಗೆ, ಕಾಲಿಗೆ ಸರಪಳಿ ಹಾಕಿ ದೇಶದಿಂದ ಹೊರದಬ್ಬುತ್ತಿದೆ ಅಮೆರಿಕ -ವಿಡಿಯೋ ನೋಡಿ

Public TV
1 Min Read

ವಾಷಿಂಗ್ಟನ್‌: ಟ್ರಂಪ್‌ (Donald Trump) ಸರ್ಕಾರ ಅಕ್ರಮ ವಲಸಿಗರ (Illegal Migrants) ಕೈಗೆ ಮತ್ತು ಕಾಲಿಗೆ ಸರಪಳಿ ತೊಡಿಸಿ ಅಮೆರಿಕದಿಂದ (USA) ಹೊರದಬ್ಬುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ.

ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ (White House) ಖಾತೆಯಿಂದಲೇ ವಿಡಿಯೋ ಬಿಡುಗಡೆ ಮಾಡುವ ಮೂಲಕ ಅಕ್ರಮ ವಲಸಿಗರಿಗೆ ಎಚ್ಚರಿಕೆ ನೀಡಿದೆ.

ವಿಮಾನದಲ್ಲಿ ಗಡಿಪಾರು ಮಾಡುವ ಸಂದರ್ಭದಲ್ಲಿ ವಲಸಿಗರ ಮನಸ್ಥಿತಿ ಯಾವ ರೀತಿ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಉಳಿದವರ ಮೇಲೆ ಹಲ್ಲೆ ಅಥವಾ ವಿಮಾನದಲ್ಲೇ ಅಡ್ಡಾದಿಡ್ಡಿ ಓಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ವಲಸಿಗರ ಕೈಗೆ ಮತ್ತು ಕಾಲಿಗೆ ಸರಪಳಿ ತೊಡಿಸಿ ಗಡಿಪಾರು ಮಾಡಲಾಗುತ್ತಿದೆ.  ಇದನ್ನೂ ಓದಿ: ಭಾರತದ ಬಳಿ ಸಾಕಷ್ಟು ಹಣ ಇರುವಾಗ ನಾವು ಯಾಕೆ ದುಡ್ಡು ನೀಡಬೇಕು: ಟ್ರಂಪ್‌

ಅಮೆರಿಕ ಚುನಾವಣೆಯಲ್ಲಿ ಟ್ರಂಪ್‌ ಅವರು ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬುತ್ತೇವೆ. ದೇಶದಲ್ಲಿ ಅಪರಾಧ ಚಟುವಟಿಕೆ ಹೆಚ್ಚಾಗಲು ಅಕ್ರಮ ವಲಸಿಗರೇ ಕಾರಣ ಎಂದು ದೂರಿದ್ದರು.

 

Share This Article