ಅಬ್ಬಬ್ಬಾ! ಗೋಲ್ಡ್ ಕೇಕ್ ಕಟ್ ಮಾಡಿ ಸಂಭ್ರಮಿಸಿದ ‘ಐರಾವತ’ ನಟಿ

By
1 Min Read

ನ್ನಡದ ‘ಐರಾವತ’ ನಟಿ ಊರ್ವಶಿ (Urvashi Rautela) ಇಂದು (ಫೆ.25) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಿಂಗರ್ ಹನಿ ಸಿಂಗ್ ಉಪಸ್ಥಿತಿಯಲ್ಲಿ ಗೋಲ್ಡ್ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ನಟಿ ಆಚರಿಸಿದ್ದಾರೆ. ಬರ್ತ್‌ಡೇಯ (Birthday) ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ಸದ್ಯ ನಟಿ ‘ಲವ್ ಡೋಸ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸೆಟ್‌ನಲ್ಲಿ ಊರ್ವಶಿ ಬರ್ತ್‌ಡೇ ಸೆಲೆಬ್ರೇಶನ್ ನಡೆದಿದೆ. ಗೋಲ್ಡ್ ಪ್ಲೇಟೆಡ್ ಕೇಕ್ ಕತ್ತರಿಸಿ ನಟಿ ಸಂಭ್ರಮಿಸಿದ್ದಾರೆ. ಖ್ಯಾತ ಸಿಂಗರ್ ಹನಿ ಸಿಂಗ್ (Yo Yo Honey Singh) ಈ ಸಂಭ್ರಮದಲ್ಲಿ ಭಾಗಿಯಾಗಿದ್ದು ವಿಶೇಷ. ಹನಿ ಸಿಂಗ್‌ರನ್ನು ನಟಿ ತಬ್ಬಿಕೊಂಡಿರುವ ಫೋಟೋ ನೋಡಿ, ಹೊಸ ಬಾಯ್‌ಫ್ರೆಂಡ್‌ ಅಂತ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ನನ್ನ ಬಗ್ಗೆ ನಿಜವಾದ ಕಾಳಜಿ ನನ್ನ ವೃತ್ತಿಜೀವನದಲ್ಲಿ ಅದ್ಭುತ ಅಧ್ಯಾಯವನ್ನು ರಚಿಸಿದೆ. ನನ್ನ ಭಾವನೆಗಳ ಆಳವನ್ನು ನಿಮಗಾಗಿ ಹಿಡಿದಿರುತ್ತೇನೆ. ನಿಮ್ಮ ಸಮಯಕ್ಕಾಗಿ ಧನ್ಯವಾಗಳು ಎಂದು ಹನಿ ಸಿಂಗ್‌ಗೆ ಬರೆದಿದ್ದಾರೆ ಊರ್ವಶಿ. ಇದನ್ನೂ ಓದಿ:ಸಮರ್ಜಿತ್ ಲಂಕೇಶ್ ಜೊತೆ ತಾನ್ಯ ಡಾನ್ಸ್ : ಇದು ಪುನೀತ್ ಹುಟ್ಟುಹಬ್ಬಕ್ಕೆ ಗಿಫ್ಟ್

ಈ ಹಿಂದೆ ಓವರ್ ಮೇಕಪ್ ಮಾಡಿರುವ ಫೋಟೋ ಶೇರ್ ಮಾಡ್ತಿದ್ದಂತೆ ಐರಾವತ ನಟಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಓವರ್ ಮೇಕಪ್ ಮಾಡಿಕೊಳ್ಳಬೇಡಿ. ಮಲಗುವಾಗಲೂ ಮೇಕಪ್ ತೆಗೆಯಲ್ಲ ಅನಿಸುತ್ತೆ ಎಂದೆಲ್ಲಾ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡಿದ್ದರು. ಒಟ್ನಲ್ಲಿ ಊರ್ವಶಿ ಹೊಸ ಲುಕ್ ಟ್ರೋಲಿಗರ ಬಾಯಿಗೆ ಆಹಾರವಾಗಿತ್ತು.

ಊರ್ವಶಿ ಸುಂದರವಾಗಿ ರೆಡಿಯಾಗಿದ್ದರು. ಅವರ ಓವರ್ ಮೇಕಪ್‌ಗೆ ಟ್ರೋಲ್ ಆಗ್ತಿದ್ದರು. ಅವರಿಗೆ ಟ್ರೋಲ್ ಆಗೋದು ಇದೇ ಮೊದಲ ಬಾರಿ ಏನೇನಲ್ಲ. ಸಿನಿಮಾಗಿಂತ ಊರ್ವಶಿ ಅವರು ಕಾಂಟ್ರವರ್ಸಿ, ಟ್ರೋಲ್‌ನಿಂದಲೇ ಹೆಚ್ಚೆಚ್ಚು ಸುದ್ದಿಯಾಗಿದ್ದಾರೆ.

ಡಿಬಾಸ್ (Darshan) ನಾಯಕಿ, ‘ಐರಾವತ’ ನಟಿ ಊರ್ವಶಿ ಅವರು ಕನ್ನಡ, ತೆಲುಗು, ಹಿಂದಿ ಸೇರಿದಂತೆ ಬಹುಭಾಷಾ ನಟಿಯಾಗಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ.

Share This Article