ಎದೆಯ ಮೇಲೆ ಫ್ಯಾನ್ ಹಾಕಿಕೊಂಡು ಎಂಟ್ರಿ ಕೊಟ್ಟ ಉರ್ಫಿ

Public TV
1 Min Read

ದಾ ಚಿತ್ರ ವಿಚಿತ್ರ ಫೋಟೋಶೂಟ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡುವ ಉರ್ಫಿ ಜಾವೇದ್ (Urfi Javed) ಇದೀಗ ಬೇಸಿಗೆ ಕಾಲ ಶುರುವಾಗುತ್ತಿದ್ದಂತೆ ಎದೆಯ ಮೇಲೆ ಫ್ಯಾನ್ ಹಾಕಿಕೊಂಡು ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಸೋನು ಶ್ರೀನಿವಾಸ್‌ ಗೌಡ ಜೈಲಿನಿಂದ ರಿಲೀಸ್‌

ಶಾರ್ಟ್ ಡ್ರೆಸ್‌ಗಳಲ್ಲಿ ಸೊಂಟದ ಅಂದವನ್ನು ತೋರಿಸುತ್ತಾ ಎದೆಯ ಮೇಲೆ 2 ಫ್ಯಾನ್‌ಗಳನ್ನು ಹಾಕಿಕೊಂಡು ಬ್ಯಾಟರಿ ಕನೆಕ್ಷನ್ ಕೊಟ್ಟು ಫ್ಯಾನ್ಸ್ ತಿರುಗಿಸುತ್ತಿದ್ದಾರೆ. ಆಕೆಯ ಹುಚ್ಚಾಟಕ್ಕೆ ಕೆಲವರು ಬಿದ್ದು ಬಿದ್ದು ನಗುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ಡ್ರೆಸ್ ವಿಡಿಯೋಗಳು ವೈರಲ್ ಆಗಿವೆ.

ಅಂದಹಾಗೆ, ಬಾಲಿವುಡ್ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಅವರು ‘ಲವ್ ಸೆಕ್ಸ್ ಔರ್ ಧೋಕಾ’ (Love Sex Aur Dhoka 2) ಸೀಕ್ವೆಲ್‌ಗೆ ಉರ್ಫಿ ಜಾವೇದ್ ನಾಯಕಿಯಾಗಿದ್ದಾರೆ. ಇಂದಿನ ಪೀಳಿಗೆಯ ಅನುಭವಗಳ ಮೇಲೆ ಈ ಸಿನಿಮಾದ ಕಥೆ ಆಧರಿಸಿದೆಯಂತೆ. ಕಥೆಯು ಸೋಷಿಯಲ್ ಮೀಡಿಯಾ ಮೇಲಿನ ಪ್ರೀತಿ ಆಧರಿಸಿದೆಯಂತೆ.

 

View this post on Instagram

 

A post shared by Uorfi (@urf7i)

ಈ ಚಿತ್ರಕ್ಕೆ ಉರ್ಫಿನೇ ಸೂಕ್ತ ನಟಿ ಎಂದು ಚಿತ್ರತಂಡ ಆಯ್ಕೆ ಮಾಡಿದೆ. ಈ ಚಿತ್ರಕ್ಕೆ ದಿಬಾಕರ್ ಬ್ಯಾನರ್ಜಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೇ ಏಪ್ರಿಲ್ 19ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿನ ನಟನೆ, ಹಾಟ್ ಅವತಾರ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಸದಾ ವಿಚಿತ್ರ ಡ್ರೆಸ್ ಮತ್ತು ಟ್ರೋಲ್, ಕಾಂಟ್ರವರ್ಸಿಯಿಂದ ಸದ್ದು ಮಾಡ್ತಿದ್ದ ನಟಿ ಈಗ ಸಿನಿಮಾದಲ್ಲಿ ಕಾಣಿಸಿಕೊಳ್ತಾರೆ ಎಂದು ತಿಳಿದ ಮೇಲೆ ಪಡ್ಡೆಹುಡುಗರು ಖುಷಿಯಾಗಿದ್ದಾರೆ. ‘ಲವ್ ಸೆಕ್ಸ್ ಔರ್ ಧೋಕಾ’ 2 ಸಿನಿಮಾ ಉರ್ಫಿ ಕೈ ಹಿಡಿಯುತ್ತಾ? ಕಾಯಬೇಕಿದೆ.

ಉರ್ಫಿ ಜಾವೇದ್ ಅವರು ‘ಬೇಪನ್ಹಾ’, ‘ಡಿಯಾನ್’, ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’, ‘ಬಡೆ ಭಯ್ಯಾ’, ‘ಐ ಮೇರೆ ಹಮ್ಸಾಫರ್’, ‘ಚಂದ್ರ ನಂದಿನಿ’ ಮತ್ತು ‘ಮೇರಿ ದುರ್ಗಾ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಟನೆಯೇನು ಹೊಸದಲ್ಲ.

Share This Article