ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ (UPSC) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಪ್ರಕಟಿಸಿದೆ. ಈ ಮೂಲಕ ಅನುಜ್ ಅಗ್ನಿಹೋತ್ರಿಗೆ ದೇಶಕ್ಕೆ ಫಸ್ಟ್ ರ‍್ಯಾಂಕ್ ಪಡೆದುಕೊಂಡಿದ್ದಾರೆ.
2025ರ ಆಗಸ್ಟ್ ತಿಂಗಳಲ್ಲಿ ನಾಗರಿಕ ಸೇವೆಗಳ ಪರೀಕ್ಷೆಗಳು ನಡೆದಿದ್ದವು. ಇದೀಗ ಐಎಎಸ್, ಐಪಿಎಸ್, ಐಎಫ್‌ಎಸ್ ಹಾಗೂ ಸೆಂಟ್ರಲ್ ಸರ್ವಿಸ್ ವಿಭಾಗದ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದೆ. ಒಟ್ಟು 958 ಅಭ್ಯರ್ಥಿಗಳ ಪಟ್ಟಿಯನ್ನು ಯುಪಿಎಸ್‌ಸಿ ಪ್ರಕಟಿಸಿದೆ. ಇದನ್ನೂ ಓದಿ: 4.48 ಲಕ್ಷ ಕೋಟಿ ಬಜೆಟ್‌ನಲ್ಲಿ ಗ್ಯಾರಂಟಿಗೆ ಹೋಗುತ್ತೆ 50,686 ಕೋಟಿ!
ಫಲಿತಾಂಶದಲ್ಲಿ ರಾಜಸ್ಥಾನದ ಅನುಜ್ ಅಗ್ನಿಹೋತ್ರಿ (Anuj Agnihotri) ದೇಶಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ರಾಜೇಶ್ವರಿ ಸುವೆ (Rajeshwari Suve M) 2ನೇ ರ‍್ಯಾಂಕ್ ಮತ್ತು ಆಕಾಶ್ ಧುಲ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಟಾಪ್ 10 ಸ್ಥಾನ ಪಡೆದವರ ಪಟ್ಟಿ:
ಅನುಜ್ ಅಗ್ನಿಹೋತ್ರಿ
ರಾಜೇಶ್ವರಿ ಸುವೆ
ಆಕಾಶ್ ಧುಲ್
ರಾಘವ್ ಜುಂಜುನ್ವಾಲಾ
ಇಶಾನ್ ಭಟ್ನಾಗರ್
ಜಿನ್ನಿಯಾ ಅರೋರಾ
ಎ.ಆರ್. ರಾಜಾ ಮೊಹೈದೀನ್
ಪಕ್ಷಲ್ ಸೆಕ್ರೆಟ್ರಿ
ಆಸ್ಥಾ ಜೈನ್
ಉಜ್ವಲ್ ಪ್ರಿಯಾಂಕ್

