UPSC Result: 25ಕ್ಕೂ ಹೆಚ್ಚು ಕನ್ನಡಿಗರ ಆಯ್ಕೆ- ಪಬ್ಲಿಕ್‌ ಟಿವಿ ‘ಬೆಳಕು’ ಹೀರೋ ಶಾಂತಪ್ಪ 644ನೇ ರ‍್ಯಾಂಕ್‌

Public TV
1 Min Read

ಬೆಂಗಳೂರು: 2023ನೇ ಸಾಲಿನ UPSC ನಾಗರಿಕ ಸೇವೆಗಳ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಒಟ್ಟು 1016 ಅಭ್ಯರ್ಥಿಗಳು ಪರೀಕ್ಷೆ ಪಾಸ್ ಮಾಡಿದ್ದಾರೆ. ಇದರಲ್ಲಿ ನಮ್ಮ ರಾಜ್ಯದ 25 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಯುಪಿಎಸ್‍ಸಿಯಲ್ಲಿ ಉತ್ತರಪ್ರದೇಶದ ಆದಿತ್ಯ ಶ್ರೀವಾಸ್ತವ್ ಮೊದಲ ರ‍್ಯಾಂಕ್‌ ಪಡೆದಿದ್ದಾರೆ. ಅನಿಮೇಶ್ ಪ್ರಧಾನ್ 2 ಮತ್ತು ತೆಲಂಗಾಣದ ಡೋಣೂರು ಅನನ್ಯ ರೆಡ್ಡಿ 3ನೇ ರ‍್ಯಾಂಕ್‌ ಪಡೆದಿದ್ದಾರೆ. ವಿಜಯಪುರದ ವಿಜೇತ ಹೊಸಮನಿ 100ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ. ಧಾರವಾಡದ ಸೌಭಾಗ್ಯ 101, ಕೋಲಾರದ ನಾಗೇಂದ್ರ ಬಾಬು 160, ಹಾಸನದ ಶಶಾಂಕ್ 459ನೇ ರ‍್ಯಾಂಕ್‌ಗಳಿಸಿದ್ದಾರೆ.

ಶಿವಮೊಗ್ಗದ ಮೇಘನಾ 589ನೇ ರ‍್ಯಾಂಕ್‌ ಪಡೆದಿದ್ದಾರೆ. ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಹೀರೋ ಕುರಗೋಡಿನ ಶಾಂತಪ್ಪ ಯುಪಿಎಸ್‍ಸಿಯಲ್ಲಿ 644ನೇ ರ‍್ಯಾಂಕ್‌ ಪಡೆದಿದ್ದಾರೆ. ಸ್ಲಂಗಳಿಗೆ ಹೋಗಿ ಉಚಿತ ಶಿಕ್ಷಣ ಕೊಡುತ್ತಿದ್ದ ಶಾಂತಪ್ಪ ಅವರನ್ನು ಪಬ್ಲಿಕ್ ಟಿವಿ ‘ಬೆಳಕು’ ಕಾರ್ಯಕ್ರಮದ ಮೂಲಕ ರಾಜ್ಯದ ಜನರಿಗೆ ಪರಿಚಯಿಸಿತ್ತು. ಇದೀಗ ಎಂಟನೇ ಪ್ರಯತ್ನದಲ್ಲಿ ಶಾಂತಪ್ಪ ಪಾಸ್ ಆಗಿದ್ದಾರೆ.

ಯುಪಿಎಸ್‍ಸಿ ಪರೀಕ್ಷೆಯಲ್ಲಿ ಪಾಸ್ ಆಗಿ ಭಾರತೀಯ ನಾಗರಿಕ ಸೇವೆಗೆ ಆಯ್ಕೆಯಾದ ಕನ್ನಡಿಗರು ತಮ್ಮ ಸಂತೋಷವನ್ನ ಪಬ್ಲಿಕ್ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಪರಿಶ್ರಮ, ಪೋಷಕರ ಸಹಕಾರ, ಮತ್ತು ಕ್ರಮಬದ್ಧವಾದ ತಯಾರಿ ಹೇಗಿತ್ತು ಅಂತ ಹಂಚಿಕೊಂಡಿದ್ದಾರೆ.

ರಾಜ್ಯದಿಂದ ಆಯ್ಕೆಯಾಗಿರೋ ಟಾಪರ್ಸ್‍ಗಳ ಪೈಕಿ 12 ವಿದ್ಯಾರ್ಥಿಗಳು ಬೆಂಗಳೂರಿನಲ್ಲಿರೋ ಇಂಡಿಯಾ ಫಾರ್ ಐಎಎಸ್ ಕೊಚಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದುಕೊಂಡವರು. ಡಾ.ರಾಜ್ ಅಕಾಡೆಮಿಯಲ್ಲಿ ತರಬೇತಿ ಪಡೆದಿರೋ ನಾಲ್ವರು ಸಹ ಆಯ್ಕೆಯಾಗಿದ್ದಾರೆ.

Share This Article