ಯುಪಿಎಸ್‍ಸಿ ಅಂತಿಮ ಫಲಿತಾಂಶ ಪ್ರಕಟ- ಶ್ರುತಿ ಶರ್ಮಾ ಟಾಪರ್

Public TV
1 Min Read

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ(UPSC) ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು, ಶ್ರುತಿ ಶರ್ಮಾ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಇಂದು ಪ್ರಕಟವಾದ ಅಂತಿಮ ಫಲಿತಾಂಶದಲ್ಲಿ ಶ್ರುತಿ ಶರ್ಮಾ ಭಾರತಲ್ಲೇ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ವರ್ಷ ಮೊದಲ ನಾಲ್ಕು ಸ್ಥಾನಗಳನ್ನು ವಿದ್ಯಾರ್ಥಿನಿಯರೇ ಪಡೆದುಕೊಂಡಿದ್ದಾರೆ.

ಒಟ್ಟು 685 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ವಿವಿಧ ನಾಗರಿಕ ಸೇವೆಗಳಿಗೆ ಸೇರ್ಪಡೆ ಆಗಲಿದ್ದಾರೆ. ಶ್ರುತಿ ಶರ್ಮಾ ಮೊದಲ ರ‍್ಯಾಂಕ್‌ ಪಡೆದರೆ ಕ್ರಮವಾಗಿ ಎರಡನೇ ಹಾಗೂ ಮೂರನೇ ರ‍್ಯಾಂಕ್‌ನ್ನು ಅಂಕಿತಾ ಅಗರ್ವಾಲ್, ಗಾಮಿನಿ ಸಿಂಗಲ್ ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ 24 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ ಅವಿನಾಶ್ ಬಿ. 31ನೇ ರ‍್ಯಾಂಕ್‌ ಪಡೆದಿದ್ದಾರೆ. ಇದನ್ನೂ ಓದಿ: ರಾಜಭವನದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ಅನಾವರಣ – ನಾಡಿಗೆ ಸಾಮಾಜಿಕ ನ್ಯಾಯದ ಸಂದೇಶ ರವಾನಿಸಿದ ರಾಜಭವನ

ಯುಪಿಎಸ್‍ಸಿ ಸಿಎಸ್‍ಇ ಪೂರ್ವಭಾವಿ ಪರೀಕ್ಷೆಯು 2021ರ ಅಕ್ಟೋಬರ್ 10 ರಂದು ನಡೆದಿತ್ತು. ಇದರ ಫಲಿತಾಂಶ ಅಕ್ಟೋಬರ್ 29ರಂದು ಪ್ರಕಟಗೊಂಡಿತ್ತು. ಮುಖ್ಯ ಪರೀಕ್ಷೆಯನ್ನು ಜನವರಿ 2 ರಿಂದ 16 ನಡೆಸಲಾಗಿತ್ತು. ಇದರ ಫಲಿತಾಂಶವನ್ನು ಮಾರ್ಚ್ 17 ಪ್ರಕಟಿಸಲಾಗಿತ್ತು. ಇನ್ನುಳಿದಂತೆ ಸಂದರ್ಶನವು ಕೊನೆಯ ಸುತ್ತಿನ ಪರೀಕ್ಷೆಯಾಗಿದ್ದು, ಏಪ್ರಿಲ್ 5ರಂದು ಪ್ರಾರಂಭವಾಗಿ ಮೇ 26 ರಂದು ಮುಕ್ತಾಯಗೊಂಡಿತ್ತು. ಇದನ್ನೂ ಓದಿ: ಟಿಕಾಯತ್ ಮೇಲೆ ಹಲ್ಲೆ ನಡೆಸಿರುವುದಕ್ಕೆ ಡಿಕೆಶಿ ಖಂಡನೆ

Share This Article
Leave a Comment

Leave a Reply

Your email address will not be published. Required fields are marked *