– ಬಡವರು, ವಿಧವೆಯರು, ದುರ್ಬಲ ಮನಸ್ಥಿತಿಯ ಯುವತಿಯರೇ ಟಾರ್ಗೆಟ್
– ಮುಸ್ಲಿಂ ರಾಷ್ಟ್ರಗಳಿಂದ 500 ಕೋಟಿ ರೂ. ಫಂಡಿಂಗ್
ಲಕ್ನೋ: ಉತ್ತರ ಪ್ರದೇಶದ ಸ್ವಯಂ ಘೋಷಿತ ದೇವಮಾನವ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ (Chhangur Baba), ಹಿಂದೂ ಯುವತಿಯರಿಗೆ ಬಲೆ ಬೀಸಿ ಲವ್ ಜಿಹಾದ್ (Love Jihad) ನಡೆಸಲು 1,000 ಮುಸ್ಲಿಂ ಯುವಕರನ್ನು ನೇಮಿಸಿದ್ದ ಸ್ಫೋಟಕ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬಡವರು, ವಿಧವೆಯರು ಮತ್ತು ದುರ್ಬಲ ಮನಸ್ಥಿತಿಯ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಮತಾಂತರ ನಡೆಸಲಾಗುತ್ತಿತ್ತು. ಇದಕ್ಕೆ ಕಳೆದ ಮೂರು ವರ್ಷದಲ್ಲಿ ಮುಸ್ಲಿಂ ರಾಷ್ಟ್ರಗಳಿಂದ ಸುಮಾರು 500 ಕೋಟಿ ರೂ. ಪಡೆದಿದ್ದ. ಯುವಕರನ್ನು ಬಳಸಿಕೊಂಡು ಬಡ ಕುಟುಂಬದ ಯುವತಿಯರಿಗೆ, ವಿಧವೆಯರಿಗೆ ಪ್ರೇಮ, ವಿವಾಹ, ಮನೆ ಎಂಬ ಆಸೆಗಳನ್ನು ಒಡ್ಡಿ ಮತಾಂತರಿಸಲಾಗುತ್ತಿತ್ತು. ಇದನ್ನೂ ಓದಿ: ಮಾದಕದ್ರವ್ಯ ಮಾರಾಟ – ಪ್ರಿಯಾಂಕ್ ಖರ್ಗೆ ಆಪ್ತ ಅರೆಸ್ಟ್
ಇನ್ನು ಹಿಂದೂ ಯುವತಿಯರನ್ನು ಮತಾಂತರಿಸಿದ್ದಕ್ಕಾಗಿ ಛಂಗೂರ್ ಬಾಬಾ ಭಾರತ-ನೇಪಾಳ ಗಡಿಯಲ್ಲಿ ಉತ್ತರ ಪ್ರದೇಶದ ಏಳು ಜಿಲ್ಲೆಗಳ ಮುಸ್ಲಿಂ ಪುರುಷರಿಗೆ ಹಣ ಪಾವತಿಯನ್ನೂ ಮಾಡಿದ್ದಾನೆ. ಛಂಗೂರ್ ಬಾಬಾ ಜೊತೆಗೆ ಆತನ ಸಹಚರ ನೀತು ಅಲಿಯಾಸ್ ನಸ್ರೀನ್‌ನನ್ನು ಸಹ ಬಂಧಿಸಿ ಏಳು ದಿನಗಳ ಎಟಿಎಸ್ ಕಸ್ಟಡಿಗೆ ಕಳುಹಿಸಲಾಗಿದೆ. ವಿದೇಶದಿಂದ ಬಂದ ಹಣವನ್ನು ನೀತು ನಸ್ರೀನ್ ನಿರ್ವಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: 60 ವರ್ಷಗಳ ಕನಸು ನನಸು | ಇಂದು ಸಿಗಂದೂರು ಸೇತುವೆ ಲೋಕಾರ್ಪಣೆ – ಬ್ರಿಡ್ಜ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ವಿದೇಶಿ ಫಂಡಿಂಗ್ ಪತ್ತೆಹಚ್ಚಲು ಮತ್ತು ಹೆಚ್ಚಿನ ಸಂಪರ್ಕಗಳನ್ನು ಪತ್ತೆಹಚ್ಚುವ ಸಲುವಾಗಿ ಗುಪ್ತಚರ ಬ್ಯೂರೋ (IB) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ನವೀನ್ ಅಲಿಯಾಸ್ ಜಮಾಲುದ್ದೀನ್ ಮತ್ತು ಛಂಗೂರ್ ಬಾಬಾ ಮಗ ಮೆಹಬೂಬ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ಲಕ್ನೋ ಜಿಲ್ಲಾ ಜೈಲಿನಲ್ಲಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿದರೆ ಏನಾಗುತ್ತೆ?
ಐಎಸ್‌ಐ ಜೊತೆ ನಂಟಿಗೆ ಯತ್ನ:
ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರ ಮತಾಂತರ ಮಾತ್ರವಲ್ಲದೇ ಛಂಗೂರ್ ಬಾಬಾ ನೇಪಾಳಕ್ಕೆ ತೆರಳಿದ್ದು, ಪಾಕ್ ಜೊತೆಗಿನ ಸಂಬಂಧವನ್ನು ಬಲಪಡಿಸಲು ಅಲ್ಲಿನ ಪಾಕ್ ರಾಯಭಾರ ಕಚೇರಿಯಲ್ಲಿ ಸಭೆ ನಡೆಸಿ ಐಎಸ್‌ಐ ಅಧಿಕಾರಿಗಳನ್ನು ಭೇಟಿ ಮಾಡಲು ಯತ್ನಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಬಿಹಾರ; ನಡುರಸ್ತೆಯಲ್ಲೇ ವಕೀಲನಿಗೆ ಗುಂಡಿಕ್ಕಿ ಹತ್ಯೆ
ಮತಾಂತರಕ್ಕೆ ಕೋಡ್‌ವರ್ಡ್ ಬಳಕೆ:
ಛಂಗೂರ್ ಬಾಬಾ ತಾನು ಮಾಡುತ್ತಿರುವ ಕೃತ್ಯ ಯಾರಿಗೂ ತಿಳಿಯಬಾರದೆಂಬ ಕಾರಣಕ್ಕೆ ಪ್ರತ್ಯೇಕ ಕೋಡ್‌ವರ್ಡ್‌ಗಳನ್ನು ಬಳಸುತ್ತಿದ್ದ. ಪ್ರಾಜೆಕ್ಟ್, ಮಿಟ್ಟಿ ಪಲಟ್ನಾ, ಕಾಜಲ್ ಲಗಾನಾ ಹಾಗೂ ದರ್ಶನ್ ಎಂಬ ಕೋಡ್‌ವರ್ಡ್‌ಗಳ ಮೂಲಕ ಯುವತಿಯರ ಮತಾಂತರ ನಡೆಯುತ್ತಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ಕಾಣೆಯಾಗಿದ್ದ ಯುವತಿಯ ಮೃತದೇಹ ಯಮುನಾ ನದಿಯಲ್ಲಿ ಪತ್ತೆ