ಟ್ರಾಫಿಕ್ ರೂಲ್ಸ್ ಪಾಲಿಸದವರಿಗೆ ಚಿತ್ರಗುಪ್ತನ ಲೆಕ್ಕ, ಯಮನ ಪಾಠ!

Public TV
1 Min Read

ಬೆಂಗಳೂರು: ಟ್ರಾಫಿಕ್ ರೂಲ್ಸ್ (Traffic Rules) ಪಾಲಿಸದ ವಾಹನ ಚಾಲಕರು ಹಾಗೂ ಸವಾರರಿಗಾಗಿ ಯಮ ಹಾಗೂ ಚಿತ್ರಗುಪ್ತ ಭೂಲೋಕಕ್ಕೆ ಬಂದು ಪಾಠ ಹೇಳಿರುವುದು ನಗರದ ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ನಡೆದಿದೆ. ಹೌದು! ಯಮಲೋಕದಿಂದ ಭೂಲೋಕಕ್ಕೆ ಇಳಿದ ಯಮ ಧರ್ಮರಾಯ ನಿಯಮ ಪಾಲಿಸದ ಸವಾರರ ಮೇಲೆ ಹರಿಹಾಯ್ದಿದ್ದಾನೆ.

ಹೆಲ್ಮೆಟ್ ಹಾಕದ ಈ ಸವಾರ ಎಷ್ಟು ಬಾರಿ ನಿಯಮ ಉಲ್ಲಂಘಿಸಿದ್ದಾನೆ ಎಂಬ ಯಮನ ಪ್ರಶ್ನೆಗೆ ಪುಸ್ತಕ ನೋಡಿ ಚಿತ್ರಗುಪ್ತ ಇಪ್ಪತ್ತು ಬಾರಿ ಎಂದು ಉತ್ತರಿಸಿದ್ದಾನೆ. ಈ ವೇಳೆ ಯಮ ಅಂತಹ ಸವಾರರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ನಿಮ್ಮ ಕುಟುಂಬ ನಿಮಗಾಗಿ ಕಾಯುತ್ತಿಲ್ಲವೇ? ಎಂದು ಎಚ್ಚರಿಸಿದ್ದಾನೆ. ಇದನ್ನೂ ಓದಿ: ಸೋಮವಾರ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಗವಿಗಂಗಾಧರೇಶ್ವರ ದೇಗುಲ

ಇದೇ ವೇಳೆ ಫೋನ್‍ನಲ್ಲಿ ಮಾತಾಡುತ್ತಿದ್ದ ಸವಾರನಿಗೆ ಕ್ಲಾಸ್ ತೆಗೆದುಕೊಂಡ ಯಮ, ವಾಹನ ಚಲಾಯಿಸುವಾಗ ನೀನು ಕರೆ ಮಾಡಿದ್ರೆ ಯಮಲೋಕಕ್ಕೆ ಕನೆಕ್ಟ್ ಆಗುತ್ತೆ ಎಂದು ಎಚ್ಚರಿಕೆ ನೀಡಿ ಕಳಿಸಿದ್ದಾನೆ!

ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು (Upparpet Traffic Police) ಈ ವಿನೂತನ ಪ್ರಯತ್ನ ಮಾಡಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ. ಸಂಚಾರ ನಿಯಮ ಪಾಲಿಸದ ಸವಾರರಿಗೆ ಗುಲಾಬಿ ಹೂ ನೀಡಿ, ಇನ್ಸ್‌ಪೆಕ್ಟರ್‌ ಕೃಷ್ಣಮೂರ್ತಿ ಹಾಗೂ ಟೀಂನಿಂದ ಟ್ರಾಫಿಕ್ ನಿಯಮಗಳ ಬಗ್ಗೆ ಅರಿವು (Road Safety Awareness) ಮೂಡಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕೆ ಹೋಗಿ ಪಾಪ ತೊಳೆದುಕೊಂಡು ಬನ್ನಿ – ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್

Share This Article