ಮಂಗಳೂರಿನಲ್ಲಿ UI ಸಕ್ಸಸ್ ಮೀಟ್- ಕೇಕ್ ಕತ್ತರಿಸಿ ಸಂಭ್ರಮಿಸಿದ ಚಿತ್ರತಂಡ

Public TV
1 Min Read

ರಿಯಲ್ ಸ್ಟಾರ್ ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿರುವ UI ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಇದೇ ಖುಷಿಯಲ್ಲಿ ಮಂಗಳೂರಿನಲ್ಲಿ ಕೇಕ್ ಕತ್ತರಿಸಿ ಚಿತ್ರತಂಡ ಸಂಭ್ರಮಿಸಿದೆ. ಈ ವೇಳೆ, ನೆಚ್ಚಿನ ನಟ ಉಪೇಂದ್ರರನ್ನು ನೋಡಲು ಜನ ಸಾಗರವೇ ಜಮಾಯಿಸಿದೆ.

ಉಪೇಂದ್ರ ನಟನೆಗೆ ಫ್ಯಾನ್ಸ್ ಹಾಟ್ಸ್ ಆಫ್ ಎಂದಿದ್ದಾರೆ ಫ್ಯಾನ್ಸ್. ಯುಐ ಭರ್ಜರಿ ಪ್ರದರ್ಶನ ಕಾಣ್ತಿರೋ ಹಿನ್ನೆಲೆ ಬೆಂಗಳೂರಿನಲ್ಲಿ ಸಕ್ಸಸ್ ಮೀಟ್ ಮಾಡಿ ಚಿತ್ರತಂಡ ಸಂಭ್ರಮಿಸಿತ್ತು. ಈ ಬೆನ್ನಲ್ಲೇ ಕರಾವಳಿ ಅಭಿಮಾನಿಗಳೊಂದಿಗೆ ಮಂಗಳೂರಿನಲ್ಲಿ ಕೇಕ್ ಕತ್ತರಿಸುವ ಮೂಲಕ ಚಿತ್ರತಂಡ ಯುಐ ಗೆದ್ದ ಸಂಭ್ರಮವನ್ನು ಆಚರಿಸಿದ್ದಾರೆ. ಇದನ್ನೂ ಓದಿ:ನನ್ನ ಮನಸ್ಸಿಗೆ ನೋವು ಮಾಡಬೇಡಿ: ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್

ಇನ್ನೂ ‘ಯುಐ’ ಸಿನಿಮಾ ಡಿ.20ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿತ್ತು. ಉಪೇಂದ್ರಗೆ ನಾಯಕಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ (Reeshma Nanaiah) ನಟಿಸಿದ್ದಾರೆ. ರಿಯಲ್ ಸ್ಟಾರ್ ನಟನೆ ಮತ್ತು ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನೂ 2040 ಭವಿಷ್ಯದ ಅಸಲಿ ಕಥೆಯೊಂದಿಗೆ ಯುಐ ಸಿನಿಮಾ ಮೂಲಕ ಉಪೇಂದ್ರ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ (Reeshma Nanaiah) ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

Share This Article