ಉಪೇಂದ್ರ ಮೆಚ್ಚಿಕೊಂಡ ಓ ಮೈ ಲವ್ ಸಾಂಗ್

Public TV
1 Min Read

ಸ್ಮೈಲ್ ಶ್ರೀನಿ ನಿರ್ದೇಶನದ ಹೊಸ ತರಹದ ನಿರೂಪಣೆ ಒಳಗೊಂಡಿರುವ ’ಓ ಮೈ ಲವ್’ ಚಿತ್ರದ ’ಏನಾಯ್ತೋ ನಾ ಕಾಣೆ’ ಲಿರಿಕಲ್ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದಾರೆ. ಹಾಡು ಮೆಚ್ಚಿಕೊಂಡು ಹೊಸ ತಂಡಕ್ಕೆ ಶುಭ ಕೋರಿದ್ದಾರೆ. ಈಗಾಗಲೇ ಅನೇಕ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಸ್ಮೈಲ್ ಶ್ರೀನು ಹಾಡು ಮತ್ತು ಚಿತ್ರದ ಬಗ್ಗೆ ಮಾತನಾಡುತ್ತಾ, ಚಿತ್ರೀಕರಣ ನಡೆಯುತ್ತಿರುವ ಸಂದರ್ಭದಲ್ಲಿ ಸಂಗೀತ ನಿರ್ದೇಶಕರು ಹಾಡಿನ ಟ್ಯೂನ್ ಕಳುಹಿಸಿಕೊಟ್ಟರು. ಅದನ್ನು ಕೇಳುತ್ತಿದ್ದ ಹಾಗೆ ರೋಮಾಂಚನವಾಯಿತು. ಪಲ್ಲವಿ ಚೆನ್ನಾಗಿದೆ. ಚರಣ ಬದಲಾವಣೆ ಮಾಡೋಣವೆಂದು ಹೇಳಲಾಯಿತು. ನಂತರ ಎರಡು ದಿವಸದಲ್ಲೆ ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಚರಣ ಕೊಟ್ಟರು. ಅನುರಾಧಭಟ್-ನಿಚರಾಜನ್ ಧ್ವನಿಯಾಗಿದ್ದಾರೆ. ಗೀತೆಗೆ ಎಲ್ಲಾ ಕಡೆಯಿಂದ  ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ಹಾಡಿನ ಪ್ರೋಮೋ ನೋಡಿ ಎಲ್ಲರು ಖುಷಿಯಾಗಿದ್ದಾರೆ’ ಎಂದರು. ಇದನ್ನೂ ಓದಿ : ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

ಹಾಡು ಇನ್ನೂ ಪೂರ್ತಿಯಾಗಿ ಬಿಡುಗಡೆ ಮಾಡಿಲ್ಲ. ಈಗ ರಿಲೀಸ್ ಆಗಿದ್ದು ಶೇ.ಐದರಷ್ಟು ಮಾತ್ರ. ಬಾಕಿ ಶೇಕಡ 95ರಷ್ಟು ಚಿತ್ರಮಂದಿರದಲ್ಲಿ ನೋಡಿದರೆ ಅದರ ಮಜಾನೇ ಬೇರೆ ಇರುತ್ತದೆ ಎನ್ನುತ್ತಿದೆ ಚಿತ್ರತಂಡ. ಚಿಕ್ಕಂದಿನಿಂದಲೂ ಚಿತ್ರ ಮಾಡಬೇಕೆಂಬ ಬಯಕೆ ಇತ್ತು. ಅದು ಈಗ ಈಡೇರಿದೆ ಎಂದು ಕಥೆ ಬರೆದು ಬಂಡವಾಳ ಹೂಡಿರುವ ಜಿ.ರಾಮಾಂಜಿನಿ ಮಾಥು. ಉಪ್ಪಿ ಸರ್ ಅಭಿಮಾನಿಯಾಗಿ ಅವರಿಂದಲೇ ಬಿಡುಗಡೆ ಮಾಡಬೇಕೆಂಬ ಆಸೆ ಇತ್ತು. ನಾವು ಕೇಳಿದ ತಕ್ಷಣ ’ಕಬ್ಜಾ’ ಶೂಟಿಂಗ್‌ದಲ್ಲಿ ಬ್ಯುಸಿ ಇದ್ದರೂ ಬಿಡುವು ಮಾಡಿಕೊಂಡು ಹಾಡನ್ನು ವೀಕ್ಷಿಸಿ ಶುಭ ಹಾರೈಸಿದರು ಎಂದು ನಾಯಕ ಅಕ್ಷಿತ್‌ಶಶಿಕುಮಾರ್ ಹೇಳಿಕೊಂಡರು.  ಇದನ್ನೂ ಓದಿ : ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

ನಾಯಕಿ ಕೀರ್ತಿ ಕಲ್ಕರೆ, ಮತ್ತೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರುವ ಕಿರುತೆರೆ ನಟ ಪೃಥ್ವಿರಾಜ್ ಹೀಗೆ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದೇವಗಿಲ್, ಎಸ್.ನಾರಾಯಣ್, ಸಾಧುಕೋಕಿಲ, ಪವಿತ್ರಲೋಕೇಶ್ ಸೇರಿದಂತೆ ಅನುಭವಿ ಕಲಾವಿದರೇ ಚಿತ್ರದಲ್ಲಿದ್ದಾರೆ. ಚರಣ್‌ ಅರ್ಜುನ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ.

Share This Article
Leave a Comment

Leave a Reply

Your email address will not be published. Required fields are marked *