ಲಕ್ನೋ: ಸರ್ಕಾರಿ ನೌಕರರು ಹಾಗೂ ವಕೀಲರಿಗೆ 1 ರೂ.ನಲ್ಲಿ ಮನೆಯನ್ನು ಒದಗಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ.
2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶ ಸರ್ಕಾರ ರಾಜ್ಯದ ಜನತೆಗೆ ಸಿಹಿ ಸುದ್ದಿಯನ್ನು ನೀಡುತ್ತಿದ್ದು, ಈಗ ಸರ್ಕಾರಿ ನೌಕರರು ಹಾಗೂ ವಕೀಲರ ಸರದಿ ಬಂದಿದೆ.
ಯೋಗಿ ಆದಿತ್ಯನಾಥ್ ಸರ್ಕಾರದ ಹೊಸ ಯೋಜನೆಯಡಿ, ಗ್ರೂಪ್ ಸಿ ಮತ್ತು ಡಿ ವರ್ಗದ ಸರ್ಕಾರಿ ನೌಕರರು ಮತ್ತು ವಕೀಲರಿಗೆ ಸಹಾಯಧನದ ಮೇಲೆ ಮನೆಗಳನ್ನು ನೀಡಲು ಮುಂದಾಗಿದೆ. ಮನೆ ಖರೀದಿಸುವ ಮಂದಿ ಭೂಮಿ ಶುಲ್ಕವಾಗಿ 1 ರೂಪಾಯಿ ನೀಡಬೇಕಾಗುತ್ತದೆ. ಇದನ್ನೂ ಓದಿ: ನಿರಾಣಿ ಸಿಎಂ ಆಗುವ ಅವಕಾಶವಿದೆ ಅನ್ನೋ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ವಿಜಯೇಂದ್ರ
ಇನ್ನೂ ಈ ಯೋಜನೆ ಅಧಿಕೃತವಾಗಿ ಜಾರಿಯಾಗಿಲ್ಲ. 1 ರೂ.ಗೆ ಯಾವ ರೀತಿ ಮನೆಗಳನ್ನು ನೀಡಬಹುದು ಎಂಬುದರ ಬಗ್ಗೆ ಹಿರಿಯ ಅಧಿಕಾರಿಗಳು ಕರಡನ್ನು ತಯಾರಿ ಮಾಡಿದ್ದಾರೆ. ಈ ಕರಡಿಗೆ ಉನ್ನತ ಮಟ್ಟದಲ್ಲಿ ಅನುಮೋದನೆ ಸಿಕ್ಕಿದ ಬಳಿಕ ಕ್ಯಾಬಿನೆಟ್‍ನಲ್ಲಿ ಒಪ್ಪಿಗೆ ಪಡೆದು ಯೋಜನೆ ಜಾರಿಯಾಗಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈ ಯೋಜನೆಯಲ್ಲಿ ಮನೆ ಖರೀದಿಸುವ ಮಂದಿಗೆ ಹಲವು ಷರತ್ತುಗಳನ್ನು ವಿಧಿಸಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಖರೀದಿಸಿದ ಮನೆಯನ್ನು 10 ವರ್ಷಗಳವರೆಗೆ ಮಾರಾಟ ಮಾಡಬಾರದು ಎಂಬ ಷರತ್ತನ್ನು ಇರಲಿದೆ ಎನ್ನಲಾಗುತ್ತದೆ.
ಗ್ರೂಪ್ ಸಿ ಮತ್ತು ಡಿ ವರ್ಗದ ಸರ್ಕಾರಿ ನೌಕರರ ಸಂಬಳ ಕಡಿಮೆಯಿದೆ. ಹಲವರ ಬಳಿ ಮನೆ ಇಲ್ಲದ ಹಿನ್ನೆಲೆಯಲ್ಲಿ ಸರ್ಕಾರ ಚುನಾವಣಾ ಸಮಯದಲ್ಲೇ ಈ ಮಹತ್ವದ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಭಾರತದ ಅಂತರರಾಷ್ಟ್ರೀಯ ವಿಮಾನ ಪುನರಾರಂಭ ಮುಂದೂಡಿಕೆ
ಈ ಯೋಜನೆ ಕುರಿತು ಅಧಿಕಾರಿ ಮತ್ತು ಸರ್ಕಾರದ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಶೀಘ್ರವೇ ಕ್ಯಾಬಿನೆಟ್‍ನಲ್ಲಿ ಯೋಜನೆಗೆ ಒಪ್ಪಿಗೆ ಸಿಗುವ ಸಾಧ್ಯತೆಯಿದೆ.