4ನೇ ಮಹಡಿಯಿಂದ ತಳ್ಳಿ ಪತ್ನಿಯನ್ನೇ ಕೊಂದ ಪತಿ

Public TV
2 Min Read

ಲಕ್ನೋ: ಮಹಿಳೆಯೊಬ್ಬಳನ್ನು ಆಕೆಯ ಪತಿ ಹಾಗೂ ನಾಲ್ವರು ಸೇರಿ 4ನೇ ಮಹಡಿಯ ಬಾಲ್ಕನಿಯಿಂದ ತಳ್ಳಿ ಹತ್ಯೆಗೈದಿದ್ದಾರೆ.

ಮೃತ ಮಹಿಳೆಯನ್ನು ರಿತಿಕಾ ಸಿಂಗ್(30) ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ಇದೀಗ ಪೊಲೀಸರು ಆರೋಪಿ ಪತಿ ಆಕಾಶ್ ಗೌತಮ್ ಸೇರಿದಂತೆ ಮೂವರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ದಯವಿಟ್ಟು ಸಹಾಯ ಮಾಡೋದನ್ನ ನಿಲ್ಲಿಸಬೇಡಿ- ಅಮೆರಿಕಾಗೆ ತಾಲಿಬಾನ್ ಬೇಡಿಕೆ

ವಿಚಾರಣೆ ವೇಳೆ 2014ರಲ್ಲಿ ರಿತಿಕಾ ಸಿಂಗ್, ಫಿರೋಜಾಬಾದ್ ನಿವಾಸಿ ಆಕಾಶ್ ಗೌತಮ್ ಅವರನ್ನು ಮದುವೆಯಾಗಿದ್ದರು. ಆದರೆ 2018ರಲ್ಲಿ ಇಬ್ಬರು ಬೇರ್ಪಟ್ಟಿದ್ದರು. ಪತಿಯಿಂದ ದೂರವಾದ ರಿತಿಕಾ ಸಿಂಗ್ ನಂತರ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ ಸ್ನೇಹಿತ ವಿಪುಲ್ ಅಗರ್‍ವಾಲ್‍ನೊಂದಿಗೆ ತಾಜ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಮೇವಾಟಿಯ ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದಳು ಎಂಬ ವಿಚಾರ ತಿಳಿದುಬಂದಿದೆ ಆಗ್ರಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ಸುಧೀರ್ ಕುಮಾರ್ ಸಿಂಗ್ ಹೇಳಿದ್ದಾರೆ.

ಶುಕ್ರವಾರ ಆಕಾಶ್ ಗೌತಮ್ ಇಬ್ಬರು ಮಹಿಳೆಯರು ಮತ್ತು ಇಬ್ಬರು ವ್ಯಕ್ತಿಗಳೊಂದಿಗೆ ರಿತಿಕಾ ಸಿಂಗ್ ಇದ್ದ ಅಪಾರ್ಟ್‍ಮೆಂಟ್‍ಗೆ ಹೋಗಿ, ಆಕೆಯ ಗೆಳೆಯ ವಿಪುಲ್ ಅಗರವಾಲ್ ಹಾಗೂ ಆಕೆಯೊಂದಿಗೆ ಜೊತೆಗೆ ಜಗಳವಾಡಿ, ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಸ್ಕೂಲ್ ಡೇಸ್‍ನಿಂದ ಪ್ರೀತಿಸಿದವಳ ಮೇಲೆ ಗುಂಡು ಹಾರಿಸಿದ – ಯುವತಿಗೆ ಗಂಭೀರ ಗಾಯ

ನಂತರ ವಿಪುಲ್ ಅಗರವಾಲ್ ಹಾಗೂ ರಿತಿಕಾ ಸಿಂಗ್ ಇಬ್ಬರ ಕೈಗಳನ್ನು ಆರೋಪಿಗಳು ಕಟ್ಟಿ ಹಾಕಿ, ಆತನನ್ನು ಬಾತ್‍ರೂಂಗೆ ತಳ್ಳಿ ಲಾಕ್ ಮಾಡಿದ್ದಾರೆ. ಬಳಿಕ ಅಪಾರ್ಟ್‍ಮೆಂಟ್‍ನ ಬಾಲ್ಕನಿಯಿಂದ ರಿತಿಕಾಳನ್ನು ಕೆಳಗೆ ತಳ್ಳಿದ್ದಾರೆ. ಈ ವೇಳೆ ಬಾತ್ ರೂಂ ಕಿಟಕಿಯಿಂದ ನೆರೆಹೊರೆಯವರನ್ನು ಸಹಾಯಕ್ಕಾಗಿ ವಿಪುಲ್ ಅಗರ್‍ವಾಲ್ ಕೂಗಾಡುತ್ತಿರುವುದನ್ನು ಕೇಳಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರೆ ಎಂದು ತಿಳಿಸಿದ್ದಾರೆ.

ಇದೀಗ ಆಗ್ರಾದ ತಾಜ್‍ಗಂಜ್ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 302 ಮತ್ತು 34ರ ಅಡಿಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಪಿ ನಗರ) ವಿಕಾಸ್ ಕುಮಾರ್ ಹೇಳಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *