ಪೋರ್ನ್‌ ವೀಡಿಯೋ ನೋಡಿ ಉದ್ರೇಕ – ಸ್ವಂತ ತಂಗಿಯ ಮೇಲೆ ಅತ್ಯಾಚಾರಗೈದ ಕಾಮುಕ ಅಣ್ಣ

Public TV
1 Min Read

– ಅತ್ಯಾಚಾರಗೈದು ಹತ್ಯೆ, 19ರ ಯುವಕ ಅರೆಸ್ಟ್‌

ಲಕ್ನೋ: ಪೋರ್ನ್‌ ವೀಡಿಯೋ ನೋಡಿ ಉದ್ರೇಕಗೊಂಡ 19ರ ಯುವಕ (UP Teen) ತನ್ನ 17 ವರ್ಷದ ತಂಗಿಯ ಮೇಲೆಯೇ ಅತ್ಯಾಚಾರಗೈದು ಬಳಿಕ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಸಗಂಜ್‌ನಲ್ಲಿ (UP Kasaganj) ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೊಬೈಲ್‌ನಲ್ಲಿ (Mobile) ಪೋರ್ನ್‌ ವೀಡಿಯೋ ನೋಡುತ್ತಿದ್ದ ಯುವಕ ಉದ್ರೇಕಗೊಂಡು ಅತ್ಯಾಚಾರ ಎಸಗಿರುವುದಾಗಿ ಪೊಲೀಸರು (Kasaganj Police) ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸಲಾಗಿದೆ.

ಘಟನೆ ನಡೆದಿದ್ದು ಹೇಗೆ?
ಕಳೆದ ಶನಿವಾರ ಅಣ್ಣ-ತಂಗಿ ಇಬ್ಬರೇ ಮನೆಯಲ್ಲಿ ಇದ್ದಾಗ ಅನಾಹುತ ಸಂಭವಿಸಿದೆ. ಇದನ್ನೂ ಓದಿ: ಮೀಸಲಾತಿಗೆ ನೆಹರು ವಿರೋಧ, ಅಂಬೇಡ್ಕರ್‌ಗೆ ಭಾರತರತ್ನ ಕೊಡುವ ಮನಸ್ಸು ಕಾಂಗ್ರೆಸ್‌ಗೆ ಇರಲಿಲ್ಲ: ಮೋದಿ ಕಿಡಿ

ಪೊಲೀಸರ ಪ್ರಕಾರ, ಕಾಮುಕ ಅಣ್ಣ ಮೊಬೈಲ್‌ನಲ್ಲಿ ಪೋರ್ನ್‌ ವೀಡಿಯೋಗಳನ್ನ ನೋಡುತ್ತಿದ್ದ, ಈ ವೇಳೆ ತನ್ನ ಸಹೋದರಿ ಆತನ ಪಕ್ಕದಲ್ಲೇ ಮಲಗಿದ್ದಳು. ಪೋರ್ನ್‌ ವೀಡಿಯೋ ನೋಡುತ್ತಲೇ ಉದ್ರೇಕಗೊಂಡ ಯುವಕ ತನ್ನ ಸಹೋದರಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಅದನ್ನು ಯಾರಿಗಾದರೂ ಹೇಳಿಬಿಡುತ್ತಾಳೆ ಅನ್ನೋ ಭಯದಲ್ಲಿ, ಅವಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮನೆಬಿಟ್ಟು ಓಡಿ ಹೋಗಿದ್ದಾನೆ. ಇದನ್ನೂ ಓದಿ: ಪಾಕ್‌ನ ಸ್ವತಂತ್ರ ಅಭ್ಯರ್ಥಿಯ ಕಚೇರಿಯ ಹೊರಗೆ ಬಾಂಬ್‌ ಸ್ಫೋಟ: 26 ಮಂದಿ ಸಾವು

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು, ಆರೋಪಿಯನ್ನ ಶೀಘ್ರದಲ್ಲೇ ಬಂಧಿಸಿದ್ದಾರೆ. ನಂತರ ಆತನ ಮೊಬೈಲ್‌ ಅನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ, ಈ ವೇಳೆ ಹಲವಾರು ಅಶ್ಲೀಲ ವೀಡಿಯೋಗಳಿರುವುದು ಕಂಡುಬಂದಿದೆ. ನಂತರ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಕಸಗಂಜ್‌ನ ಎಸ್ಪಿ ಅರ್ಪಣಾ ರಜತ್ ಕೌಶಿಕ್ ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್‌ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ: ಮೋದಿ ವ್ಯಂಗ್ಯ 

Share This Article