8 ವಿದ್ಯಾರ್ಥಿನಿಯರ ಮೇಲೆ ರೇಪ್‌ ಆರೋಪ – ಬಂಧಿತ ಪ್ರಾಧ್ಯಾಪಕನ ಕಂಪ್ಯೂಟರ್‌ನಲ್ಲಿತ್ತು 65 ಸೆಕ್ಸ್‌ ವಿಡಿಯೋ

By
2 Min Read

ಲಕ್ನೋ: ತನ್ನ ವಿದ್ಯಾರ್ಥಿನಿಯರ ಮೇಲೆ‌ ಅತ್ಯಾಚಾರ ಎಸಗಿ, ಕೃತ್ಯವನ್ನು ಚಿತ್ರೀಕರಣ ಮಾಡುತ್ತಿದ್ದ ಆರೋಪದ ಮೇಲೆ ಸರ್ಕಾರಿ ಅನುದಾನಿತ ಕಾಲೇಜಿನ ಭೂಗೋಳ ಶಾಸ್ತ್ರ ಪ್ರಾಧ್ಯಾಪಕನನ್ನು ಪ್ರಯಾಗ್‌ರಾಜ್‌ನ ಪೊಲೀಸರು (Prayagraj Police) ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಹತ್ರಾಸ್‌ನ ಸೇಠ್ ಫೂಲ್ ಚಂದ್ ಬಾಗ್ಲಾ ಪಿಜಿ ಕಾಲೇಜಿನ ಪ್ರಾಧ್ಯಾಪಕ ರಜನೀಶ್ ಕುಮಾರ್ (54) ಬಂಧಿತ ಆರೋಪಿ. ಇದೇ ಮಾರ್ಚ್‌ 15ರಂದು ವಿದ್ಯಾರ್ಥಿನಿಯೊಬ್ಬಳು (Student) ಪೊಲೀಸರಿಗೆ ಅನಾಮಧೇಯ ದೂರು ನೀಡಿದ ಬಳಿಕ ಆರೋಪಿ ಪ್ರಾಧ್ಯಾಪಕನ ವಿರುದ್ಧ ಅತ್ಯಾಚಾರ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಎಸ್ಕೇಪ್‌ ಆಗಿದ್ದ ಪ್ರಾಧ್ಯಾಪಕ 72 ಗಂಟೆಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ಟೀಂ ಇಂಡಿಯಾಗೆ 58 ಕೋಟಿ ನಗದು ಬಹುಮಾನ ಘೋಷಿಸಿದ ಬಿಸಿಸಿಐ

ಬಳಿಕ ನಡೆದ ವಿಚಾರಣೆಯಲ್ಲಿ 8 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ವಿದ್ಯಾರ್ಥಿಯರೊಂದಿಗಿನ ಲೈಂಗಿಕ ಸಂಬಂಧದ ಕ್ಷಣಗಳನ್ನು ವಿಡಿಯೋ ರೆಕಾರ್ಡ್‌ ಮಾಡಿಕೊಂಡು ಪದೇ ಪದೇ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ ಎಂದು ಹತ್ರಾಸ್‌ನ ಪೊಲೀಸ್ ವರಿಷ್ಠಾಧಿಕಾರಿ ಚಿರಂಜೀವ್ ನಾಥ್ ಸಿನ್ಹಾ ತಿಳಿಸಿದ್ದಾರೆ. ಇದನ್ನೂ ಓದಿ: ಗೂಗಲ್ ಪೇ, ಫೋನ್‌ಪೇ & ಪೇಟಿಎಂ ಬಳಕೆದಾರರಿಗೆ ಸೂಚನೆ – ಏ.1ರಿಂದ ಕೆಲವು ಮೊಬೈಲ್ ಸಂಖ್ಯೆಗಳಲ್ಲಿ ಯುಪಿಐ ಪಾವತಿ ಸಮಸ್ಯೆ

ವೆಬ್‌ಕ್ಯಾಮ್‌ನಲ್ಲಿ ವಿಡಿಯೋ ರೆಕಾರ್ಡ್‌
ಯುಪಿ ಪ್ರೊಫೆಸರ್‌ 2009ರಲ್ಲಿ ವಿದ್ಯಾರ್ಥಿನಿಯೊಂದಿಗೆ ಓರ್ವ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಬಂಧದಲ್ಲಿದ್ದ. ಒಮ್ಮೆ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ತನ್ನ ಕೊಠಡಿಯಲ್ಲಿದ್ದ ಕಂಪ್ಯೂಟರ್‌ನ ವೆಬ್‌ಕ್ಯಾಮ್‌ನಲ್ಲಿ ವಿಡಿಯೋ ರೆಕಾರ್ಡ್‌ ಮಾಡಿದ್ದ. ಇದೇ ರೀತಿ ಅನೇಕ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಿಸಿ ಪದೇ ಪದೇ ಅವರನ್ನು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ, ಲೈಂಗಿಕ ಕ್ರಿಯೆಗಾಗಿ ಒತ್ತಾಯಿಸುತ್ತಿದ್ದ. ಇದೇ ರೀತಿ ಒಟ್ಟು 65 ವಿಡಿಯೋಗಳನ್ನ ರೆಕಾರ್ಡ್‌ ಮಾಡಿಕೊಂಡಿದ್ದು, ಕೆಲವು ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಸಹ ಮಾಡಿದ್ದಾನೆ ಎಂದು ಪೊಲೀಸ್‌ ತನಿಖೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ದೇಶದ ಶ್ರೀಮಂತ ಶಾಸಕರ ಪೈಕಿ ಡಿಕೆಶಿ ಟಾಪ್ 2 – ಮೊದಲ 10 ಸ್ಥಾನಗಳಲ್ಲಿ ಕರ್ನಾಟಕದ ನಾಲ್ವರು

ಸದ್ಯ ಪ್ರಾಧ್ಯಾಪಕನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಬಂಗಾಳದ ಬಾರ್‌ಗಳಲ್ಲಿ ಮಹಿಳೆಯರಿಗೆ ಕೆಲಸಕ್ಕೆ ಅವಕಾಶ – ಹೊಸ ಮಸೂದೆ ಅಂಗೀಕಾರ

Share This Article