ಲಕ್ನೋ: ಅಂಗಡಿಯಲ್ಲಿ ಕ್ಯಾಂಡಿ ಕದ್ದಿದ್ದಕ್ಕೆ ಮಗಳನ್ನು ಕೋಲಿನಿಂದ ಹೊಡೆದು ತಂದೆ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ (Uttara Pradesh) ರತನ್‌ಪುರದಲ್ಲಿ (Ratanpur) ನಡೆದಿದೆ.
ಆರೋಪಿ ತಂದೆ ಪುಷ್ಪೇಂದ್ರ @ ಪಪ್ಪು ಶರ್ಮಾ 12 ವರ್ಷದ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ – ಮಹಿಳೆಯನ್ನ ಕೊಂದು ಅರ್ಧ ದೇಹವನ್ನ ಫ್ರಿಡ್ಜ್‌ನಲ್ಲಿಟ್ಟಿದ್ದ ನೌಕಾಪಡೆ ಉದ್ಯೋಗಿ
ಪೊಲೀಸರ ಮಾಹಿತಿ ಪ್ರಕಾರ, ಅಂಗಡಿಯ ಮಾಲೀಕರು ಆರೋಪಿ ಪುಷ್ಪೇಂದ್ರನಿಗೆ ತಮ್ಮ ಮಗಳು ಕ್ಯಾಂಡಿ ಕದ್ದಿದ್ದಾಳೆಂದು ಹೇಳಿದ್ದರು. ಇದರಿಂದ ಕೋಪಗೊಂಡಿದ್ದ ಪುಷ್ಪೇಂದ್ರ ಮನೆಗೆ ಬರುತ್ತಿದ್ದಂತೆ ಕೋಲಿನಿಂದ ಹೊಡೆದು ಮಗಳನ್ನು ಸಾಯಿಸಿದ್ದಾನೆ. ಈ ಸಂಬಂಧ ಮಾ.27ರಂದು ಬಾಲಕಿಯ ತಾಯಿ ಆರತಿ ದೂರು ದಾಖಲಿಸಿದ್ದಾರೆ.
ದೂರಿನನ್ವಯ ನರೋರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಭಾನುವಾರ (ಮಾ.29) ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೊತೆಗೆ ಅಪರಾಧಕ್ಕೆ ಬಳಸಲಾದ ಕೋಲನ್ನು ವಶಪಡಿಸಿಕೊಂಡಿದ್ದಾರೆ.ಇದನ್ನೂ ಓದಿ: ಕೊಪ್ಪಳದಲ್ಲೊಬ್ಬ ವಿಕೃತ ಕಾಮಿ – ಮಹಿಳೆಯರ ಒಳಉಡುಪು ಈತನ ಟಾರ್ಗೆಟ್

