ಅಪ್ರಾಪ್ತೆ ಮೇಲೆ 2 ಮಕ್ಕಳ ತಂದೆಯಿಂದ ನಿರಂತರ ಅತ್ಯಾಚಾರ – ಹೆರಿಗೆಯಾದ ಅರ್ಧ ಗಂಟೆಯಲ್ಲೇ ಮಗು ಸಾವು

By
2 Min Read

– ಹಣ್ಣು ಕೊಡುವುದಾಗಿ ಕರೆದೊಯ್ದು ಕೃತ್ಯ, ಆರೋಪಿ ಅರೆಸ್ಟ್

ಲಕ್ನೋ: 11 ವರ್ಷದ ಬಾಲಕಿ ಮೇಲೆ 2 ಮಕ್ಕಳ ತಂದೆ ನಿರಂತರ ಅತ್ಯಾಚಾರವೆಸಗಿದ್ದು, ಹೆರಿಗೆಯಾದ ಅರ್ಧ ಗಂಟೆಯಲ್ಲಿ ನವಜಾತ ಶಿಶು (Infant) ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ (Bareilly) ನಡೆದಿದೆ.

ಆರೋಪಿ ರಶೀದ್ (31) ಅಪ್ರಾಪ್ತೆಯನ್ನು ಬೆದರಿಸಿ ನಿರಂತರ ಅತ್ಯಾಚಾರವೆಸಗಿದ್ದಾನೆ. ಆರರಿಂದ ಏಳು ತಿಂಗಳ ಹಿಂದೆ ರಶೀದ್ ಬಾಲಕಿಯನ್ನು ತನ್ನ ಮನೆಗೆ ಹಣ್ಣು ಕೊಡಿಸುವುದಾಗಿ ಕರೆದೊಯ್ದಿದ್ದ. ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಆಕೆಯ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಅವಳನ್ನು ಹಲವು ಬಾರಿ ಬ್ಲ್ಯಾಕ್‌ಮೇಲ್ ಮಾಡಲು ವೀಡಿಯೋ ಕೂಡ ಮಾಡಿದ್ದಾನೆ ಎಂದು ಬಾಲಕಿಯ ಅಣ್ಣ ಹೇಳಿದ್ದಾನೆ. ಇದನ್ನೂ ಓದಿ: ಬಿಡಿಎ ಫ್ಲಾಟ್ / ವಿಲ್ಲಾ ಖರೀದಿಸಿ ನೋಂದಣಿಗಾಗಿ ಕಾಯುತ್ತಿರುವ ಹಂಚಿಕೆದಾರರಿಗೆ ಸುವರ್ಣಾವಕಾಶ

ಗುರುವಾರ ಬಾಲಕಿ ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಪರಿಣಾಮ ಆಕೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಪಡಿಸಲಾಯಿತು. ಈ ಪರೀಕ್ಷೆಯಲ್ಲಿ ಆಕೆ ಏಳು ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಬಳಿಕ ಆಕೆಯನ್ನು ಜಿಲ್ಲಾ ಮಹಿಳಾ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಬಾಲಕಿ ಅದೇ ದಿನ ಮಗುವಿಗೆ ಜನ್ಮ ನೀಡಿದ್ದಾಳೆ. 7 ತಿಂಗಳಲ್ಲೇ ಹೆರಿಗೆಯಾಗಿದ್ದು, ಅರ್ಧ ಗಂಟೆಯ ಬಳಿಕ ಮಗು ಮೃತಪಟ್ಟಿದೆ. ಇದನ್ನೂ ಓದಿ: ಚಾಮರಾಜನಗರ | ಲಾರಿ, ಕಾರು ಮೊಪೆಡ್ ನಡುವೆ ಸರಣಿ ಅಪಘಾತ – ನಾಲ್ವರು ಬಾಲಕರ ದುರ್ಮರಣ

ಘಟನೆ ಸಂಬಂಧ ಎರಡು ಮಕ್ಕಳ ತಂದೆ ರಶೀದ್ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಯನ್ನು ಶನಿವಾರ ಬಂಧಿಸಲಾಗಿದೆ. ನವಾಬ್‌ಗಂಜ್ ಠಾಣೆಯ ಅಧಿಕಾರಿ ಅರುಣ್ ಕುಮಾರ್ ಶ್ರೀವಾಸ್ತವ ಶುಕ್ರವಾರ ರಶೀದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ. ಅಲ್ಲದೇ ಆರೋಪಿಯೊಂದಿಗೆ ಹೊಂದಾಣಿಕೆಯಾಗಲು ಮಗುವಿನಿಂದ ಡಿಎನ್‌ಎ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದಾಗ ಪಾಕ್‌ ಸ್ಟೇಡಿಯಂನಲ್ಲಿ ಸ್ಫೋಟ – ಓರ್ವ ಸಾವು, ಹಲವರಿಗೆ ಗಾಯ

Share This Article