ಒಡಹುಟ್ಟಿದವರೇ ಕಾಂಗ್ರೆಸ್‌ ನಾಶ ಮಾಡ್ತಾರೆ, ಚಿಂತಿಸಬೇಡಿ: ಯೋಗಿ ಆದಿತ್ಯನಾಥ್‌

By
1 Min Read

ಲಕ್ನೋ: ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಿರುದ್ಧ ಯೋಗಿ ಆದಿತ್ಯನಾಥ್‌ ಟೀಕಾಪ್ರಹಾರ ನಡೆಸಿದ್ದಾರೆ. ಒಡಹುಟ್ಟಿದವರು ಕಾಂಗ್ರೆಸ್‌ನ್ನು ನಾಶ ಮಾಡುತ್ತಾರೆ, ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿಕೆ ನೀಡಿದ್ದಾರೆ.

ನಾನು ಉತ್ತರಾಖಂಡಕ್ಕೆ ಹೋಗಿ ಹೇಳಿದ್ದೇನೆ. ಕಾಂಗ್ರೆಸ್‌ ಅನ್ನು ಕೊನೆಗೊಳಿಸಲು ಬೇರೆ ಯಾರೂ ಕೆಲಸ ಮಾಡಬೇಕಾಗಿಲ್ಲ. ಈ ಇಬ್ಬರು ಸಹೋದರರೇ ಅದನ್ನು ಮಾಡುತ್ತಾರೆ. ಉತ್ತರಾಖಂಡದ ಜನತೆಗೆ ಕಾಂಗ್ರೆಸ್‌ ಬೇಡವಾಗಿದೆ ಎಂದು ಯೋಗಿ ಆದಿತ್ಯನಾಥ್‌ ಕುಟುಕಿದ್ದಾರೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಪ್ರಜಾಪ್ರಭುತ್ವದ ಹಬ್ಬ ಮಾಡಿ: ಮೋದಿ

ಅಸ್ತಿತ್ವ ಕಡಿಮೆ ಇರುವಲ್ಲಿ ಕಾಂಗ್ರೆಸ್‌ನ ಒಡಹುಟ್ಟಿದವರು ಶತಪ್ರಯತ್ನ ನಡೆಸುವುದು ಸಾಕು. ಅದರ ಅದೃಷ್ಟಕ್ಕೆ ಅದನ್ನು ಬಿಟ್ಟುಬಿಡಿ ಎಂದು ಟಾಂಗ್‌ ನೀಡಿದ್ದಾರೆ.

ರಾಜ್ಯದಲ್ಲಿ 80 ವರ್ಸಸ್‌ 20 ಅಂತರ ಪೈಪೋಟಿ ಇದಾಗಿದೆ ಎಂದು ಯೋಗಿ ಆದಿತ್ಯನಾಥ್‌ ಈಚೆಗೆ ಹೇಳಿಕೆ ನೀಡಿದ್ದರು. ಇಲ್ಲಿ ಹಿಂದೂ-ಮುಸ್ಲಿಂ ಜನಸಂಖ್ಯೆ ಆಧಾರಿತವಾಗಿ ಯೋಗಿ ಅವರು ಚುನಾವಣೆ ಲೆಕ್ಕಾಚಾರ ಮಾಡಿದ್ದಾರೆ ಎಂದು ಚರ್ಚಿಸಲಾಗಿದೆ. ಇದನ್ನೂ ಓದಿ: ಅಗತ್ಯ ಬಿದ್ದರೆ ಬೊಗಳುತ್ತೇನೆ, ಇಲ್ಲವೇ ಕಚ್ಚುತ್ತೇನೆ: ಹರೀಶ್ ರಾವತ್

ಉತ್ತರ ಪ್ರದೇಶದಲ್ಲಿ ಫೆ.10ರಿಂದ ಚುನಾವಣೆ ಆರಂಭವಾಗಿದ್ದು, 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್‌ 10 ರಂದು ಫಲಿತಾಂಶ ಹೊರಬೀಳಲಿದೆ.

Share This Article
Leave a Comment

Leave a Reply

Your email address will not be published. Required fields are marked *