ಪುರೋಹಿತರ ಮಾತಿಗೆ ಮರುಳಾಗಿ ಸಮಾಧಿಯಾಗಿದ್ದವನ ರಕ್ಷಿಸಿದ ಪೊಲೀಸರು

Public TV
2 Min Read

ಲಕ್ನೋ: ನವರಾತ್ರಿ ಹಬ್ಬ ಆರಂಭವಾಗುವ ಮುನ್ನ ಸಮಾಧಿ ತೋಡಿಕೊಂಡರೆ ಜ್ಞಾನೋದಯವಾಗುತ್ತದೆ ಎಂದು ಪುರೋಹಿತರೊಬ್ಬರು ಹೇಳಿದರು ಎಂಬ ಕಾರಣಕ್ಕೆ ಆರು ಅಡಿ ಆಳದಲ್ಲಿ ಹೂತಿದ್ದ ವ್ಯಕ್ತಿಯನ್ನು ಉತ್ತರಪ್ರದೇಶ ಪೊಲೀಸರು ರಕ್ಷಿಸಿದ್ದಾರೆ.

ಲಕ್ನೋದಿಂದ 45 ಕಿ.ಮೀ ದೂರದಲ್ಲಿರುವ ಉನ್ನಾವೋ ಜಿಲ್ಲೆಯ ತಾಜ್‍ಪುರ ಗ್ರಾಮದ ಮೂವರು ಪುರೋಹಿತರು ಹಣ ಗಳಿಸುವ ದುರುದ್ದೇಶದಿಂದ ಯುವಕನೊಬ್ಬನಿಗೆ ಐಕ್ಯವಾಗುವಂತೆ ತಿಳಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ಸಮಾಧಿಯಿಂದ ಹೊರ ಕರೆತಂದಿದ್ದಾರೆ. ವೀಡಿಯೋದಲ್ಲಿ ವ್ಯಕ್ತಿಯನ್ನು ಸಮಾಧಿ ಮಾಡಿರುವ ಮಣ್ಣು ಮತ್ತು ಬಿದಿರಿನ ಹೊದಿಕೆಯನ್ನು ತೆಗೆದುಹಾಕುವುದನ್ನು ಕಾಣಬಹುದಾಗಿದೆ.

ಹಿಂದೂಗಳು ಆಚರಿಸುವ ಅದ್ದೂರಿ ಹಬ್ಬಗಳಲ್ಲಿ ನವರಾತ್ರಿ ಹಬ್ಬ ಕೂಡ ಒಂದು. ಈ ಹಬ್ಬದ ಸಮಯದಲ್ಲಿ ಹಣ ಗಳಿಸುವ ದುರಾಸೆಯಿಂದ ಈ ರೀತಿಯ ಸಂಚುಗಳನ್ನು ರೂಪಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೀಗ ಸಮಾಧಿಯಾಗಿದ್ದ ಯುವಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.  ಇದನ್ನೂ ಓದಿ: ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ

POLICE JEEP

ಆರು ಅಡಿ ಆಳದ ಹೊಂಡದಲ್ಲಿ ಸಮಾಧಿಯಾಗಿದ್ದ ಅಸಿವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಜ್‍ಪುರ ಗ್ರಾಮದ ನಿವಾಸಿ ಶುಭಂ ಗೋಸ್ವಾಮಿಯನ್ನು ಇದೀಗ ಪೊಲೀಸರು ಹೊರ ಕರೆತಂದಿದ್ದಾರೆ. ಗೋಸ್ವಾಮಿ ಅವರ ತಂದೆ ವಿನೀತ್ ಗೋಸ್ವಾಮಿ ಕೂಡ ಈ ಕೃತ್ಯದಲ್ಲಿ ಪಾಲುದಾರರಾಗಿದ್ದಾರೆ. ಇದನ್ನೂ ಓದಿ : ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ: ಖಾದರ್

ಸುಮಾರು ಐದು ವರ್ಷಗಳಿಂದ ಗ್ರಾಮದ ಹೊರಗಿದ್ದ ಗುಡಿಸಲಿನಲ್ಲಿ ಶುಭಂ ಗೋಸ್ವಾಮಿ ವಾಸವಾಗಿದ್ದ. ನಂತರ ಪುರೋಹಿತರೊಂದಿಗೆ ಸಂಪರ್ಕ ಬೆಳೆದ ಬಳಿಕ ತಮ್ಮನ್ನು ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದರು. ಆದರೆ ಶುಭಂ ಗೋಸ್ವಾಮಿ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಪುರೋಹಿತರಾದ ಮುನ್ನಾಲಾಲ್ ಮತ್ತು ಶಿವಕೇಶ್ ದೀಕ್ಷಿತ್ ಹಣ ಗಳಿಸಲು ಪ್ರಯತ್ನಿಸಿದರು. ಹೀಗಾಗಿ ಭೂ ಸಮಾಧಿ ಮಾಡಿಕೊಳ್ಳುವಂತೆ ತಿಳಿಸಿದರು.

ಹೀಗಾಗಿ ಭಾನುವಾರ ಸಂಜೆ 6 ಅಡಿ ಸಮಾಧಿಗೆ ಶುಭಂ ಗೋಸ್ವಾಮಿ ಪ್ರವೇಶಿಸಿದರು. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಗಾಬರಿಗೊಂಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಾಧಿಯಿಂದ ವ್ಯಕ್ತಿಯನ್ನು ಹೊರ ಕರೆ ತಂದಿದ್ದಾರೆ. ನಂತರ ಈ ವಿಚಾರವಾಗಿ ಯುವಕನನ್ನು ವಿಚಾರಣೆ ನಡೆಸಿದ ಬಳಿಕ ಆರ್ಚಕರ ಕೃತ್ಯ ಬೆಳಕಿಗೆ ಬಂದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *