ದೊಡ್ಡಗೌಡರ ಕೋಟೆಗೆ ಇಂದು ಯುಪಿ ಸಿಎಂ ಎಂಟ್ರಿ – ಎಲ್ಲೆಲ್ಲಿ ಏನೇನು ಕಾರ್ಯಕ್ರಮ?

Public TV
2 Min Read

– ಒಕ್ಕಲಿಗರ ಮತ ಸೆಳೆಯಲು ಯೋಗಿ ಅಸ್ತ್ರ

ಮಂಡ್ಯ: ಜೆಡಿಎಸ್ (JDS) ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮಂಡ್ಯ (Mandya) ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ (BJP) ಕಮಾಲ್ ಮಾಡಲು ರಣತಂತ್ರ ನಡೆಸುತ್ತಿದೆ. ಚುನಾವಣೆ ಘೋಷಣೆಗೂ ಮುನ್ನ ಸಕ್ಕರೆ ನಾಡಿಗೆ ಮೋದಿ ಭೇಟಿ ನೀಡಿ ಹವಾ ಎಬ್ಬಿಸಿದ್ದರು. ಈಗ ಯುಪಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಎಂಟ್ರಿ ಕೊಡುತ್ತಿದ್ದಾರೆ. ಆ ಮೂಲಕ ಒಕ್ಕಲಿಗ ಮತ ಸೆಳೆಯುವ ಪ್ಲಾನ್ ನಡೆದಿದೆ.

ಹಳೇ ಮೈಸೂರು ಮೇಲೆ ಹೆಚ್ಚು ಫೋಕಸ್ ಮಾಡಿರುವ ಬಿಜೆಪಿ ಈ ಬಾರಿ ಮಂಡ್ಯದಲ್ಲೂ ಎರಡ್ಮೂರು ಕ್ಷೇತ್ರಗಳನ್ನ ಗೆಲ್ಲುವ ಗುರಿ ಹೊಂದಿದೆ. ಅದಕ್ಕಾಗಿಯೇ ರಾಷ್ಟ್ರೀಯ ನಾಯಕರು ಮಂಡ್ಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇಂದು ಬೆಳಗ್ಗೆ 10:30ಕ್ಕೆ ಮೈಸೂರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಿಎಂ ಯೋಗಿ ಆದಿತ್ಯನಾಥ್‌, ಹೆಲಿಕಾಪ್ಟರ್ ಮೂಲಕ ಮಂಡ್ಯದ ಪಿಇಎಸ್ ಕಾಲೇಜು ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ಸಂಜಯ್ ವೃತ್ತದಿಂದ ಮಹಾವೀರ್ ವೃತ್ತದವರೆಗೆ 1 ಕಿ.ಮೀ ರೋಡ್ ಶೋ ಮಾಡಲಿದ್ದಾರೆ. ಸಿಲ್ವರ್ ಜುಬಿಲಿ ಪಾರ್ಕ್ ಬಹಿರಂಗ ಸಭೆಯಲ್ಲಿ ಯೋಗಿ ಭಾಷಣ ಮಾಡುವ ಮೂಲಕ ಮಂಡ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶೋಕ್ ಜಯರಾಂ ಸೇರಿದಂತೆ ಜಿಲ್ಲೆಯ ಏಳು ಅಭ್ಯರ್ಥಿಗಳ ಪರವಾಗಿ ಮತ ಬೇಟೆ ಮಾಡಲಿದ್ದಾರೆ. ಇದನ್ನೂ ಓದಿ: ನನ್ನ ರಕ್ತದಲ್ಲಿ ಬರೆದುಕೊಡುತ್ತೇನೆ, ಶೆಟ್ಟರ್ ಗೆಲ್ಲಲು ಸಾಧ್ಯವಿಲ್ಲ: ಬಿಎಸ್‍ವೈ

ಯೋಗಿ ಆದಿತ್ಯಾನಾಥ್ ಮಂಡ್ಯಕ್ಕೆ ಬಂದ್ರೆ ಒಕ್ಕಲಿಗ ಮತಗಳನ್ನು ಸೆಳೆಯಬಹುದು ಎಂಬುದು ಬಿಜೆಪಿ ಲೆಕ್ಕಚಾರವಿದೆ. ಆದಿಚುಂಚನಗಿರಿ ಕ್ಷೇತ್ರ ಹಾಗೂ ಯೋಗಿ ಆದಿತ್ಯನಾಥ್ ಅವರದ್ದು ನಾಥಪರಂಪರೆ. ಮಂಡ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಚುಂಚನಗಿರಿ ಮಠದ ಭಕ್ತರು ಯೋಗಿ ಬಂದ್ರೆ ಬಿಜೆಪಿ ಪರವಾಲುತ್ತಾರೆಂಬ ನಂಬಿಕೆ. ಅದರಲ್ಲೂ ಒಕ್ಕಲಿಗ ಮತಗಳನ್ನ ಹೆಚ್ಚು ಸೆಳೆಯಬಹುದು. ಇದರಿಂದ ಜೆಡಿಎಸ್‌ಗೆ ಮಾಸ್ಟರ್ ಸ್ಟ್ರೋಕ್ ಕೊಡಬಹುದು ಎಂಬುದು ಬಿಜೆಪಿ ಪ್ಲಾನ್.

ಮಂಡ್ಯ ಕಾರ್ಯಕ್ರಮ ಬಳಿಕ ಸಿಎಂ ಯೋಗಿ ಆದಿತ್ಯನಾಥ್‌ ವಿಜಯಪುರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2:30ಕ್ಕೆ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಸವನಬಾಗೇವಾಡಿ ಬಿಜೆಪಿ ಅಭ್ಯರ್ಥಿ ಎಸ್.ಕೆ ಬೆಳ್ಳುಬ್ಬಿ ಪರ ಪ್ರಚಾರ ನಡೆಸಲಿದ್ದಾರೆ. ಸಂಜೆ ಇಂಡಿ ಬಿಜೆಪಿ ಅಭ್ಯರ್ಥಿ ಕಾಸುಗೌಡಾ ಪಾಟೀಲ ಪರ ಪ್ರಚಾರ ನಡೆಸಲಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿಯ ಪ್ರತಿರೂಪ ಎಂದಿದ್ದಕ್ಕೆ ಮಹಿಳೆಗೆ ಪ್ರೀತಿಯ ಅಪ್ಪುಗೆ ನೀಡಿದ ಪ್ರಿಯಾಂಕಾ

Share This Article