ಧೈರ್ಯವಿದ್ದರೆ ರಾಹುಲ್ ನನ್ನನ್ನು ಅಪ್ಪಿಕೊಳ್ಳಿ-ಸಿಎಂ ಯೋಗಿ ಆದಿತ್ಯನಾಥ್ ಸವಾಲು

Public TV
1 Min Read

ಲಕ್ನೋ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಧೈರ್ಯವಿದ್ದರೆ ನನ್ನನ್ನು ಅಪ್ಪಿಕೊಳ್ಳಲು ಯತ್ನಿಸಲಿ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸವಾಲು ಎಸೆದಿದ್ದಾರೆ.

ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ರಾಹುಲ್ ಪ್ರಧಾನಿ ಮೋದಿ ಅವರಿಗೆ ನೀಡಿದ್ದ ಆಲಿಂಗನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಅವರು ನನ್ನನ್ನು ಅಪ್ಪಿಕೊಳ್ಳಲು 10 ಬಾರಿ ಯೋಚಿಸುತ್ತಾರೆ. ಧೈರ್ಯವಿದ್ದರೆ ಅವರು ನನ್ನನ್ನು ಅಪ್ಪಿಕೊಳ್ಳಲು ಯತ್ನಿಸಲಿ ಎಂದು ಸವಾಲು ಎಸೆದರು. ಬಳಿಕ ಇಂತಹ ರಾಜಕೀಯ ನಡೆಗಳನ್ನು ನಾನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ವಿವೇಚನಾಯುಕ್ತ ಯಾವುದೇ ಒಬ್ಬ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

2019 ರ ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್ ತನ್ನ ಕಾರ್ಯಕಾರಿ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಿದೆ. ಅಲ್ಲದೇ ಅಖಿಲೇಶ್ ಯಾದವ್, ಮಯಾವತಿ ಅವರು ರಾಹುಲ್ ರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಒಪ್ಪಿದ್ದಾರೆ. ಈ ನಡೆ ಕೇವಲ ಮೋದಿ ಎಂಬ ಶಕ್ತಿಯನ್ನು ಎದುರಿಸಲು ಮಾಡಿರುವ ಪ್ರಯತ್ನವಷ್ಟೇ ಎಂದು ಕಿಡಿಕಾರಿದರು.

ಸಮಾಜವಾದಿ ಪಕ್ಷದ ಶರದ್ ಪವಾರ್ ರಾಹುಲ್ ನಾಯಕತ್ವದಲ್ಲಿ ಕಾರ್ಯನಿರ್ವಹಿಸುತ್ತಾರಾ ಎಂದು ಯೋಗಿ ಆದಿತ್ಯನಾಥ್ ಪ್ರಶ್ನೆ ಮಾಡಿದ್ದು, ಮೈತ್ರಿ ಸರ್ಕಾರ ಹಲವು ಪಕ್ಷಗಳು ತಮ್ಮದೇ ಗುರಿ ಹೊಂದಿದೆ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಗೋ ರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಕೊಲೆಗಳನ್ನು ಸಹಿಸಲು ಸಾಧ್ಯವಿಲ್ಲ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು.

 

Share This Article
Leave a Comment

Leave a Reply

Your email address will not be published. Required fields are marked *