ಸಾಕಿದ ಬೆಕ್ಕಿನಿಂದ ಮುಖಕ್ಕೆ ಗಾಯ ಮಾಡ್ಕೊಂಡ ಉರ್ಫಿ

Public TV
1 Min Read

ಬಾಲಿವುಡ್ ಸೂಪರ್ ಮಾಡೆಲ್ ಉರ್ಫಿ ಜಾವೇದ್ (Uorfi Javed) ಮಾಡಿಕೊಳ್ಳುವ ಅವಾಂತರಗಳು ಅಷ್ಟಿಷ್ಟಲ್ಲ. ಈ ಬಾರಿ ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ. ಕಣ್ಣಿನ ಕೆಳಗೆ ಗಾಯವಾಗಿದ್ದು ರಕ್ತ ಸುರಿದಿದೆ. ಇದರ ಫೋಟೋ ಹಾಗೂ ವೀಡಿಯೋವನ್ನ ಉರ್ಫಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಅಷ್ಟಕ್ಕೂ ಉರ್ಫಿಯ ಈ ಗತಿಗೆ ಕಾರಣವೇನು ಅನ್ನೋದಕ್ಕೆ ಅವರೇ ಉತ್ತರ ಕೊಟ್ಟಿದ್ದಾರೆ. ಮನೆಯ ಮುದ್ದಿನ ಸಾಕು ಬೆಕ್ಕು (Cat) ಉರ್ಫಿಯನ್ನ ಈ ರೀತಿ ಪರಚಿದೆ. ಪರಿಣಾಮ ಕಣ್ಣಿನ ಕೆಳಗೆ ಹೆಚ್ಚಾಗೇ ಗಾಯವಾಗಿದ್ದು ಉರ್ಫಿ ಆಸ್ಪತ್ರೆ ಸೇರಿಕೊಂಡಿದ್ರು. ಇದೀಗ ಚಿಕಿತ್ಸೆ ಪಡೆದು ಮನೆಗೆ ಮರಳಿರುವ ಉರ್ಫಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಉರ್ಫಿಗೆ ಬೆಕ್ಕು ಮಾಡಿರುವ ಗಾಯ ಕೊಂಚ ಹೆಚ್ಚಾಗೇ ಹಾನಿ ಮಾಡಿದಂತೆ ಕಾಣುತ್ತೆ. ಮುಖದಲ್ಲಿ ಕಲೆಯಾಗುವ ಸಾಧ್ಯತೆ ಇರೋದ್ರಿಂದ ಉರ್ಫಿ ಮುಂದೆ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಬೇಕಾದ ಸಂದರ್ಭವೂ ಎದುರಾಗಬಹುದು. ಮೇಕಪ್ ಹಾಗೂ ಡಿಸೈನರ್ ಬಟ್ಟೆಗಳಿಂದ ಫೇಮಸ್ ಆಗಿರೋ ಉರ್ಫಿ ಇನ್ನೊಂದಷ್ಟು ದಿನ ಗಾಯದಿಂದ ಒದ್ದಾಡಬೇಕಾದ ಪರಿಸ್ಥಿತಿ ತಂದುಕೊಂಡಿದ್ದಾರೆ. ಮೂಕ ಪ್ರಾಣಿ ಮೇಲೆ ಏನೂ ದೂಷಿಸುವಂತಿಲ್ಲ. ಅಷ್ಟಕ್ಕೂ ಉರ್ಫಿ ಮೇಲೆ ಈ ಸಾಕು ಬೆಕ್ಕಿಗೆ ಅದೇನು ಕೋಪವಿತ್ತೋ ಏನೋ ಜೋರಾಗೇ ಪರಚಿದೆ. ಇದಕ್ಕೆ ಉರ್ಫಿ ಮಾತ್ರ ಸಿಕ್ಕಾಪಟ್ಟೆ ಸಂಕಷ್ಟ ಪಡಬೇಕಾಗಿ ಬಂದಿದೆ.

Share This Article