ಕೊಪ್ಪಳದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ..!

Public TV
1 Min Read

ಕೊಪ್ಪಳ: ಆಧುನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಅಸ್ಪೃಶ್ಯತೆ ಅನ್ನೋ ಅನಿಷ್ಠ ಪದ್ಧತಿ ಕೊಪ್ಪಳದ ಗಂಗಾವತಿ ತಾಲೂಕಿನ ಗುಡೂರು, ಹಿರೇಖೇಡ ಗ್ರಾಮದಲ್ಲಿ ಇಂದಿಗೂ ಜೀವಂತವಾಗಿದೆ.

ದೇಶದ ಪ್ರಗತಿಗೆ ಮಾರಕವಾದ ಕೆಲ ಅನಿಷ್ಠ ಪದ್ಧತಿಗಳಲ್ಲಿ ಅಸ್ಪೃಶ್ಯತೆಯೂ ಒಂದು. ಈ ಅನಿಷ್ಟ ತಡೆಯಲು ಸ್ವಾತಂತ್ರ್ಯ ಪೂರ್ವದಿಂದಲೂ ಸಾಕಷ್ಟು ಹೋರಾಟ ನಡೆಯಿತು. ಕಾನೂನು ರಚಿಸಿದರೂ ರಾಜ್ಯದ ಹಲವೆಡೆ ಅಸ್ಪೃಶ್ಯತೆ ಪದ್ಧತಿ ಇನ್ನೂ ಜೀವಂತವಾಗಿದೆ.

ಜಿಲ್ಲೆಯ ಕನಕಗಿರಿಯಿಂದ ಕೇವಲ 20 ಕಿಮೀ ದೂರದಲ್ಲಿರುವ ಗುಡೂರು ಗ್ರಾಮದಲ್ಲಿ ದಲಿತರಿಗೆ ಇನ್ನೂ ಹೋಟೆಲ್‍ಗಳಲ್ಲಿ ಪ್ರವೇಶವಿಲ್ಲ. ಇವತ್ತಿಗೂ ಕೂಡ ದಲಿತರು ಬೊಗಸೆಯಲ್ಲಿ ನೀರು ಕೊಡುವ ಪದ್ಧತಿ ಈ ಭಾಗದಲ್ಲಿದೆ.

ಇಲ್ಲಿನ ಜನರು ದಲಿತರಿಗೆ ದೂರದಿಂದಲೇ ನೀರನ್ನು ಎತ್ತಿ ಹಾಕುತ್ತಾರೆ. ಅದನ್ನೇ ದಲಿತರು ಬೊಗಸೆಯಲ್ಲಿ ಕುಡಿಯುತ್ತಾರೆ. ಮೇಲ್ವರ್ಗದ ಹೋಟೆಲ್‍ನಲ್ಲಿ ದಲಿತರು ನೀರು ಮುಟ್ಟೋ ಹಾಗಿಲ್ಲ. ಹೋಟೆಲ್ ಹೊರಗಡೆ ಬಂದು ನೀರು ಹಾಕುತ್ತಿರೋ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ವಿಡಿಯೋದಲ್ಲಿ, ಹೋಟೆಲ್‍ವೊಂದರಲ್ಲಿ ದಲಿತ ವ್ಯಕ್ತಿಯೋರ್ವನನ್ನು ಒಳಗೆ ಸೇರಿಸದೆ ದೂರದಿಂದಲೇ ಆಹಾರ ಮತ್ತು ನೀರು ಕೊಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ರೀತಿ ಮಾಡಿದ ಹೋಟೆಲ್ ಮಾಲೀಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *