ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಅವಾಂತರ – ರೇಣುಕಾ ಯಲ್ಲಮ್ಮ ದೇಗುಲದ ಅಂಗಳಕ್ಕೆ ನುಗ್ಗಿದ ನೀರು

Public TV
1 Min Read

ಬೆಳಗಾವಿ/ಹಾವೇರಿ: ರಾಜ್ಯದಲ್ಲಿ ಅಕಾಲಿಕ ಮಳೆ (Rain) ನಾನಾ ಅವಾಂತರ ಸೃಷ್ಟಿಸಿದೆ. ಬೆಳಗಾವಿಯ (Belagavi) ಸವದತ್ತಿ ರೇಣುಕಾ ಯಲ್ಲಮ್ಮ ದೇಗುಲದ ಅಂಗಳಕ್ಕೆ ನೀರು ನುಗ್ಗಿ ಭಾರೀ ಸಮಸ್ಯೆ ತಂದೊಡ್ಡಿದೆ.

ಪರಸಗಡ ಗುಡ್ಡದಲ್ಲಿ ಜಲಪಾತದ ರೀತಿಯಲ್ಲಿ ನೀರು ಹರಿದಿದೆ. ಚಿಕ್ಕಮಗಳೂರಿನ ದೇವರಮನೆಗುಡ್ಡದ ಬಳಿ ಮನೆಗಳು ಜಲಾವೃತವಾಗಿವೆ. ಜನ ರಾತ್ರಿಯೆಲ್ಲಾ ನಿದ್ದೆಗೆಟ್ಟಿದ್ದಾರೆ. ಇದನ್ನೂ ಓದಿ: ಇಂದು ಕರಾವಳಿ ಸೇರಿದಂತೆ 14 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ – ಎಷ್ಟು ಮಳೆ ಬೀಳಬಹುದು?

ಮಡಿಕೇರಿಯ ರಾಜಾಸೀಟ್ ರಸ್ತೆ ಬದಿಯ ಗುಡ್ಡ ಕುಸಿದಿದೆ. ರಸ್ತೆಗೆ ತಡೆಗೋಡೆ ನಿರ್ಮಾಣ ವೇಳೆಯೇ ಈ ಅನಾಹುತವಾಗಿದೆ. ಅತ್ತ, ಕೋಲಾರದಲ್ಲಿ ತೊಟ್ಲಿ ಗ್ರಾಮ, ಸುಗುಟೂರು ಸುತ್ತಮುತ್ತ ಕೆರೆ ಕುಂಟೆಗಳು ಖಾಲಿಯಾಗಿದ್ದು, ನೀರಿಗಾಗಿ ಜಾನುವಾರಗಳ ಪರದಾಡುತ್ತಿವೆ.  ಇದನ್ನೂ ಓದಿ: ರಾಜ್ಯದಲ್ಲಿ ಪೂರ್ವ ಮುಂಗಾರು ಆರ್ಭಟ – ಇನ್ನೂ 4 ದಿನ ಮಳೆ, ಬಳಿಕ ಉಷ್ಣಾಂಶದಲ್ಲಿ ಹೆಚ್ಚಳ ಸಾಧ್ಯತೆ

ಹಾವೇರಿಯಲ್ಲಿ ಗುಡುಗು ಸಹಿತ ಭಾರೀ ಮಳೆ:
ಇನ್ನೂ ಹಾವೇರಿ ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಹಾವೇರಿ ತಾಲ್ಲೂಕಿನ ಅಗಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಅರ್ಧಗಂಡೆಗೂ ಹೆಚ್ಚು ಕಾಲ ಧಾರಕಾರ ಮಳೆಯಾಗಿದೆ. ಇದನ್ನೂ ಓದಿ: ಬಿರು ಬೇಸಿಗೆಯಲ್ಲೂ ರಾಜ್ಯದಲ್ಲಿ ಮಳೆ ಅಬ್ಬರ – ಬೆಂಗ್ಳೂರು ರಸ್ತೆಗಳು ಜಲಮಯ

Share This Article