ಸೆಕ್ಸ್ ಮಾಡಿದ್ದಾರೆಂದು ರೂಮಿನಿಂದ ಹೊರಗೆಳೆದು ಜೋಡಿಯ ಮೇಲೆ ಚರಂಡಿ ನೀರು ಹಾಕಿದ್ರು- ವಿಡಿಯೋ ವೈರಲ್

Public TV
1 Min Read

ಜಕಾರ್ತಾ: ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ಆತನ ರೂಮಿಗೆ ಹೋಗಿದಾಗ ಅಲ್ಲಿದ್ದ ಸಾರ್ವಜನಿಕರು ಅವರಿಬ್ಬರು ದೈಹಿಕ ಸಂಬಂಧ ಬೆಳೆಸಿದ್ದಾರೆಂದು ಅನುಮಾನಗೊಂಡು ಅವರನ್ನು ರೂಮಿನಿಂದ ಎಳೆದು ತಂದು ಚರಂಡಿ ನೀರನ್ನು ಹಾಕಿದ ಘಟನೆ ಸುಮಾತ್ರಾ ದ್ವೀಪದ ಕೇಯಿ ಲೀ ಗ್ರಾಮದಲ್ಲಿ ನಡೆದಿದೆ.

ಈ ಘಟನೆ ಮಾರ್ಚ್ 7ರಂದು ನಡೆದಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಯುವಕ ಕಂದು ಬಣ್ಣದ ಶರ್ಟ್, ಜಿನ್ಸ್ ಧರಿಸಿ ಚರಂಡಿ ಮುಂದೆ ತಲೆ ತಗ್ಗಿಸಿ ನಿಂತಿದ್ದು, ಯುವತಿ ಆತನ ಪಕ್ಕದಲ್ಲೇ ಕುಳಿತಿದ್ದಾಳೆ.

ನಂತರ ವ್ಯಕ್ತಿಯೊಬ್ಬ ಇವರ ಮೇಲೆ ಚರಂಡಿ ನೀರನ್ನು ಹಾಕಿ ನೀನು ಮಾಡಿದ್ದು ಇಸ್ಲಾಂ ಧರ್ಮಕ್ಕೆ ವಿರುದ್ಧ. ಇದು ನಿನಗೆ ತಕ್ಕ ಪಾಠ ಎಂದು ಗುಂಪಿನಲ್ಲಿ ಸಾರ್ವಜನಿಕರು ಹೇಳಿದ್ದಾರೆ. ಸ್ವಲ್ಪ ಸಮಯದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆ ಜೋಡಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು ಎಂದು ಪ್ರತಿಕೆಯೊಂದರಲ್ಲಿ ವರದಿಯಾಗಿದೆ.

18 ವರ್ಷದ ಯುವತಿ ತನ್ನ ಪ್ರಿಯಕರನನ್ನು ಭೇಟಿ ಮಾಡಲು ಯಾರೂ ಇಲ್ಲದ ವೇಳೆ ಆತನ ರೂಮಿಗೆ ಹೋಗಿದ್ದಳು. ಅಕ್ಕಪಕ್ಕದ ಮನೆಯವರ ಪ್ರಕಾರ ಅವರಿಬ್ಬರು ಅಲ್ಲಿ ಸೆಕ್ಸ್ ಮಾಡಲು ಯೋಚಿಸುತ್ತಿದ್ದರು. ನಂತರ ಸಾರ್ವಜನಿಕರು ಅವರನ್ನು ಎಳೆದು ತಂದು ಶಿಕ್ಷೆ ನೀಡಿದ್ದಾರೆ ಎಂದು ಇಂಗಿನ್ ಜಯಾ ಪೊಲೀಸ್ ಅಧಿಕಾರಿಯಾದ ನಜರುಲ್ ಪಿತ್ರಾ ತಿಳಿಸಿದ್ದಾರೆ.

ಸದ್ಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಈ ಜೋಡಿಯ ಮೇಲಿರುವ ಆರೋಪ ನಿಜವಾದರೆ 100 ಹೊಡೆತ ಹಾಗೂ 15 ತಿಂಗಳ ಬಂಧನ ಅಥವಾ 150 ಗ್ರಾಂ ಚಿನ್ನಕ್ಕೆ ಸಮನಾದ ಹಣವನ್ನು ನೀಡಬೇಕೆಂದು ಪಿತ್ರಾ ಹೇಳಿದ್ದಾರೆ.

https://www.youtube.com/watch?v=LBtKc85tZBE

Share This Article
Leave a Comment

Leave a Reply

Your email address will not be published. Required fields are marked *