`ಕಾಮದ ಬಣ್ಣ ಕೆಂಪು’ ಎಂದ ಯೋಗರಾಜ್ ಭಟ್

Public TV
1 Min Read

ಪಂಚರಂಗಿ ಯೂಟ್ಯೂಬ್ ಚಾನಲಿನ ಮತ್ತೆ ಮೊದಲಿಂದ ಗೀತ ಗುಚ್ಛದ 3ನೇ ಹಾಡು ‘ಉನ್ಮಾದ ಉಕ್ಕಿದಾಗ…’ (ಕಾಮದ ಬಣ್ಣ ಕೆಂಪು) ಈ ಗೀತೆಯನ್ನು ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ಬಿಡುಗಡೆ ಮಾಡಿ ಗಝಲ್ ಶೈಲಿಯ ಈ ಹಾಡನ್ನು ಮೆಚ್ಚಿಕೊಂಡರು.

ಯೋಗರಾಜ್ ಭಟ್ (Yogaraj Bhat) ಅವರ ಸಾಹಿತ್ಯವಿರುವ ಈ ಹಾಡಿಗೆ ಚೇತನ್ – ಡ್ಯಾವಿ ಜೋಡಿ ಸಂಗೀತ ನೀಡಿದ್ದಾರೆ. ಈ ಗೀತೆ ಹೆಣ್ಣು ಹಾಗೂ ಗಂಡು ದನಿಯ ಎರಡೂ ಆವೃತ್ತಿಯಲ್ಲಿ ಮೂಡಿಬಂದಿರುವುದು ವಿಶೇಷ ಗಂಡು ಆವೃತ್ತಿಗೆ ಖ್ಯಾತ ಗಾಯಕ ಹೇಮಂತ್ ಕುಮಾರ್ ದನಿಯಾದರೆ ಹೆಣ್ಣು ದನಿ ಬಾಗಲಕೋಟೆ ಮೂಲದ ನೂತನ ಪ್ರತಿಭೆ ಅದಿತಿ ಖಂಡೇಗಲ ಅವರದ್ದಾಗಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿಯ ಸೀರಿಯಲ್ ಫಸ್ಟ್ ಲುಕ್ ಔಟ್

“ಮತ್ತೆ ಮೊದಲಿಂದ” ಆಲ್ಬಂ ನಲ್ಲಿ ಇದು ಮೂರನೇ ಗೀತೆಯಾಗಿದ್ದು ಇದಕ್ಕೂ ಮೊದಲು ನಿನ್ನ ಕಣ್ಣು ನೀಲಿ… (ಮೋಹದ ಬಣ್ಣ ನೀಲಿ) ಹಾಗು ಪ್ರಿಯ ಸಖಿ… (ಪ್ರೇಮದ ಬಣ್ಣ ಬಿಳುಪು) ಎಂಬ ಎರಡು ಗೀತೆಗಳನ್ನು ಬಿಡುಗಡೆ ಮಾಡಿ ಯಶಸ್ವಿಯಾಗಿದ್ದ ಯೋಗರಾಜ್ ಭಟ್ ರವರು ವಿ. ಹರಿಕೃಷ್ಣ ರವರ ಸಂಗೀತ ಇರುವ ಮತ್ತೆ ಮೊದಲಿಂದ ಆಲ್ಬಂ ನ ನಾಲ್ಕನೇ ಗೀತೆ ‘ನೀ ಹೋದ ಮೇಲೆ… (ನೆನಪಿನ ಬಣ್ಣ ಹಸಿರು) ಗೀತೆಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದರು. ಇದನ್ನೂ ಓದಿ: Exclusive: ಕಿಚ್ಚನ 47ನೇ ಚಿತ್ರಕ್ಕೆ ನಾಯಕಿಬ್ಯೂಟಿ

ರೇಣುಕಾ ಯೋಗರಾಜ್ ಭಟ್, ಶ್ರೀನಿಧಿ ದರ್ಬೆ, ಶಿಲ್ಪ ಪ್ರಸನ್ನ ಅವರು ನಿರ್ಮಾಣ ಮಾಡಿದ್ದಾರೆ.

Share This Article