ಕಾಶಿ ವಿಶ್ವನಾಥ ದೇವಸ್ಥಾನಕ್ಕೆ 60 ಕೆಜಿ ಚಿನ್ನ ದಾನ ಮಾಡಿದ ಭಕ್ತ

Public TV
1 Min Read

ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಅನಾಮಧೇಯ ಭಕ್ತರೊಬ್ಬರು 60 ಕೆಜಿ ಚಿನ್ನ ದಾನ ಮಾಡಿದ್ದಾರೆ. ಗರ್ಭಗುಡಿ ಅಲಂಕಾರಕ್ಕೆ ಈಗಾಗಲೇ 37 ಕೆಜಿ ಚಿನ್ನವನ್ನು ಬಳಕೆ ಮಾಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಈ ಕುರಿತು ವಿಭಾಗೀಯ ಆಯುಕ್ತ ದೀಪಕ್ ಅಗರವಾಲ್ ಮಾತನಾಡಿ, ದೇವಸ್ಥಾನಕ್ಕೆ ಅನಾಮಧೇಯ ದಾನಿಯಿಂದ 60 ಕೆಜಿ ಚಿನ್ನ  ದಾನವಾಗಿ ಬಂದಿದೆ. ಅದರಲ್ಲಿ 37 ಕೆಜಿಯನ್ನು ಗರ್ಭಗುಡಿಯ ಒಳಗೋಡೆಗಳ ಚಿನ್ನದ ಹೊದಿಕೆಗೆ ಬಳಸಲಾಗಿದೆ. ಉಳಿದ 23 ಕೆಜಿ ಚಿನ್ನವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮುಖ್ಯ ವಿನ್ಯಾಸದ ಚಿನ್ನದ ಗುಮ್ಮಟದ ಕೆಳಗಿನ ಭಾಗಕ್ಕೆ ಬಳಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವು

2021ರ ಡಿಸೆಂಬರ್ ತಿಂಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮವನ್ನು ಔಪಚಾರಿಕವಾಗಿ ಉದ್ಘಾಟನೆ ಮಾಡಿದ್ದರು. ಅದಕ್ಕೂ ಮೊದಲೇ ದಾನಿಯು ದೇವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ತಾವು 60 ಕೆಜಿ ಚಿನ್ನವನ್ನು ದೇವಸ್ಥಾನಕ್ಕೆ ದಾನವಾಗಿ ನೀಡುವುದಾಗಿ ಹೇಳಿದ್ದರು. ದೇವಾಲಯದ ಅಧಿಕಾರಿಗಳು ಅವರು ದೇಣಿಗೆ ನೀಡಿದ ಚಿನ್ನವನ್ನು ಗರ್ಭಗುಡಿಯ ಒಳಗೋಡೆಯ ಚಿನ್ನದ ಲೇಪನಕ್ಕಾಗಿ ಮತ್ತು ಮುಖ್ಯ ದೇವಾಲಯದ ಗುಮ್ಮಟದ ಕೆಳಗಿನ ಭಾಗಕ್ಕೆ ಬಳಸುವ ಯೋಜನೆಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ದನ್ನೂ ಓದಿ: ಕೀವ್‍ಗೆ ಮುನ್ನುಗ್ಗುತ್ತಿದೆ 64 ಕಿ.ಮೀ ಉದ್ದದ ರಷ್ಯಾ ಸೇನೆ

ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡಿದ ಯಾತ್ರಾರ್ಥಿಗಳು ಬಾಗಿಲಿನ ಹೊರಗಿನಿಂದ ದೇವರನ್ನು ನೋಡುವ ಮೂಲಕ ಪ್ರಾರ್ಥನೆ ಸಲ್ಲಿಸುವಾಗ ಗೋಡೆಗಳ ಮೇಲೆ ಚಿನ್ನದ ಲೇಪನದ ದೃಶ್ಯವನ್ನು ನೋಡಬಹುದು.

Share This Article
Leave a Comment

Leave a Reply

Your email address will not be published. Required fields are marked *