ಚಿತ್ರದುರ್ಗ | ಅಪರಿಚಿತ ಶವ ಪತ್ತೆ ಕೇಸ್‌ – ಯುವತಿಯ ಗುರುತು ಪತ್ತೆ, ಅತ್ಯಾಚಾರ ಎಸಗಿ ಕೊಲೆ ಶಂಕೆ

Public TV
1 Min Read

ಚಿತ್ರದುರ್ಗ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 48ರ (NH 48) ಬಳಿ ಸಿಕ್ಕ ಅಪರಿಚಿತ ಶವದ ಗುರುತು ಪತ್ತೆ ಮಾಡಲಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೊಲೆಯಾದ ಯುವತಿಯನ್ನ ಚಿತ್ರದುರ್ಗದ (Chitradurga) ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ವರ್ಷಿತಾ (19) ಎಂದು ಗುರುತಿಸಲಾಗಿದೆ. ಈಕೆ ಸರ್ಕಾರಿ ಪದವಿ ಕಾಲೇಜಿನ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳೆಂದು ತಿಳಿದುಬಂದಿದೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ (Police Investigation) ಶುರು ಮಾಡಿದ್ದಾರೆ.

ಗುರುತು ಪತ್ತೆಯಾದ ಬೆನ್ನಲ್ಲೇ ವರ್ಷಿತಾ ಸಂಪರ್ಕದಲ್ಲಿದ್ದ ಯುವಕ ಚೇತನ್‌ ಅನ್ನೂ ವಿಚಾರಣೆ ನಡೆಸಲಾಗುತ್ತಿದೆ. ಚೇತನ್‌ಗೆ ಕ್ಯಾನ್ಸರ್ 3ನೇ ಹಂತದಲ್ಲಿರುವ ಬಗ್ಗೆ ಮಾಹಿತಿ ಇದೆ. ಇದನ್ನೂ ಓದಿ: 12 ದಿನಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಹೈಕೋರ್ಟ್‌ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ!

ಗುರುತು ಪತ್ತೆಯಾಗಿದ್ದು ಹೇಗೆ?
ಪೊಲೀಸರ ತನಿಖೆ ವೇಳೆ ಯುವತಿಯ ಕೈ ಮೇಲಿನ ಟ್ಯಾಟುನಿಂದ ಗುರುತುಪತ್ತೆಯಾಗಿದೆ. ಯುವತಿಯ ಹತ್ಯೆ ಖಂಡಿಸಿ ಎಬಿವಿಪಿ ಸಂಘಟನೆ ಪ್ರತಿಭಟನೆಗೆ ಕರೆ ನೀಡಿದ್ದು ಹಾಗೂ ಕಾಲೇಜು ಬಂದ್‌ಗೆ ಒತ್ತಾಯಿಸಿದೆ. ಇಂದು ಡಿಸಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಯಲಿದ್ದು, ಕುಟುಂಬಸ್ಥರು, ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಮಳೆಯೋ ಮಳೆ – ಸಕಲೇಶಪುರದಲ್ಲಿ ಭೂಕುಸಿತ, ಅವಾಂತರ

Share This Article