ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯ ಧ್ವಂಸ ಮಾಡಿದವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ: ಅಮಿತ್ ಶಾ

Public TV
1 Min Read

ನವದೆಹಲಿ: ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳನ್ನು ಧ್ವಂಸ ಮಾಡಿದವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದರು.

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಮೂರು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವನ್ನು ಅಮಿತ್ ಶಾ ಅವರು ಉದ್ಘಾಟಿಸಿದರು. ಈ ವೇಳೆ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ನಿರ್ದಿಷ್ಟ ಸಿದ್ಧಾಂತವು ಕಲಹಕ್ಕೆ ಕಾರಣವಾಗಿದ್ರೆ, ಅದು ಖಂಡಿತವಾಗಿಯೂ ಭಾರತದ ಸಿದ್ಧಾಂತವಲ್ಲ. ವಿಶ್ವವಿದ್ಯಾನಿಲಯಗಳು ವಿಚಾರ ವಿನಿಮಯದ ವೇದಿಕೆಯಾಗಬೇಕೇ ಹೊರತು ಸೈದ್ಧಾಂತಿಕ ಸಂಘರ್ಷದ ಜಾಗವಾಗಬಾರದು. ಒಂದು ಸಿದ್ಧಾಂತವು ಆಲೋಚನೆಗಳು ಮತ್ತು ಚರ್ಚೆಗಳ ಮೂಲಕ ಮುಂದುವರಿಯುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: SSLC ಫಲಿತಾಂಶ: ಚಿತ್ರದುರ್ಗದ ಆರು ವಿದ್ಯಾರ್ಥಿಗಳು ಮೇಲುಗೈ 

ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾನಿಲಯಗಳನ್ನು ಧ್ವಂಸ ಮಾಡಿದವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ನಳಂದ ವಿಶ್ವವಿದ್ಯಾಲಯದ ಗ್ರಂಥಾಲಯವು ತಿಂಗಳುಗಟ್ಟಲೆ ಸುಟ್ಟುಹೋಗಿದೆ ಎಂದು ಹೇಳಲಾಗುತ್ತದೆ. ಆದರೆ ಆ ವಿಶ್ವವಿದ್ಯಾಲಯಗಳ ಚಿಂತನೆಗಳು ಇಂದಿಗೂ ಜೀವಂತವಾಗಿವೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.

modi (1)

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ಭಾರತವು ರಕ್ಷಣಾ ನೀತಿಯನ್ನು ಹೊಂದಿರಲಿಲ್ಲ. ಅಸ್ತಿತ್ವದಲ್ಲಿದ್ದರೂ ಸಹ ಅದು ವಿದೇಶಾಂಗ ನೀತಿಯ ‘ನೆರಳು’ ಎಂದು ವಾದಿಸಿದರು. ಈ ಹಿಂದೆ, ನಮ್ಮ ಮೇಲೆ ದಾಳಿ ಮಾಡಲು ಭಯೋತ್ಪಾದಕರನ್ನು ಕಳುಹಿಸಲಾಗುತ್ತಿತ್ತು. ಪುಲ್ವಾಮಾ ದಾಳಿಯಲ್ಲೂ ಅಂತಹ ಪ್ರಯತ್ನಗಳು ನಡೆದಿದ್ದವು. ಆದರೆ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಯ ಮೂಲಕ ನಾವು ರಕ್ಷಣಾ ನೀತಿಯ ಅರ್ಥವನ್ನು ತೋರಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಳೆಯಿಂದ ಹಾನಿಗೊಳಗಾದ ಪ್ರದೇಶ ವೀಕ್ಷಣೆ ಮಾಡಿದ ಬೊಮ್ಮಾಯಿ 

ಈ ವೇಳೆ ಅಮಿತ್ ಶಾ ಅವರು ಯುವಕರಿಗೆ ದೇಶದ ಬಗ್ಗೆ ತಮ್ಮ ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳಲು ಸಲಹೆ ನೀಡಿದರು ಮತ್ತು ಭಾರತದ ರಕ್ಷಣಾ ನೀತಿಯ ಬಗ್ಗೆ ಮಾತನಾಡಿದರು.

Share This Article
Leave a Comment

Leave a Reply

Your email address will not be published. Required fields are marked *