ಟ್ವಿಟ್ಟರ್‌ ಕಾನೂನು ಪಾಲನೆ ಮಾಡದೇ ನಿರಂತರ ಉಲ್ಲಂಘನೆ ಮಾಡುತ್ತಿತ್ತು: ರಾಜೀವ್‌ ಚಂದ್ರಶೇಖರ್‌

Public TV
1 Min Read

ನವದೆಹಲಿ: ಟ್ವಿಟ್ಟರ್‌ ಕಂಪನಿ (Twitter Company) 2020 ರಿಂದ ಭಾರತದ (India) ಕಾನೂನು ಪಾಲನೆ ಮಾಡಿರಲಿಲ್ಲ. ಅಂತಿಮವಾಗಿ ಅವರು ಕಾನೂನು ಪಾಲನೆ ಮಾಡಿರುವುದು 2022ರ ಜೂನ್‌ನಲ್ಲಿ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಖಾತೆಯ ಸಚಿವ ರಾಜೀವ್‌ ಚಂದ್ರಶೇಖರ್‌ (Rajeev Chandrasekhar) ತಿರುಗೇಟು ನೀಡಿದ್ದಾರೆ.

ಟ್ವಿಟ್ಟರ್‌ ಕಂಪನಿಯನ್ನು ಸ್ಥಗಿತಗೊಳಿಸಲು ಭಾರತ ಸರ್ಕಾರದಿಂದ ಒತ್ತಡ ಬಂದಿತ್ತು ಎಂಬ ಮಾಜಿ ಸಿಇಒ ಜಾಕ್‌ ಡಾರ್ಸಿ (Jack Dorsey) ಆರೋಪ ಸಂಪೂರ್ಣ ಸುಳ್ಳು ಎಂದಿದ್ದಾರೆ.

ಜಾಕ್‌ ಡಾರ್ಸಿ ಮತ್ತು ಅವರ ತಂಡವು ಭಾರತದ ಕಾನೂನನ್ನು ನಿರಂತರ ಉಲ್ಲಂಘನೆ ಮಾಡುತ್ತಿತ್ತು. ಅವರ ಕಂಪನಿಯ ಉದ್ಯೋಗಿಗಳು ಯಾರು ಜೈಲಿಗೆ ಹೋಗಲಿಲ್ಲ. ಟ್ವಿಟ್ಟರ್‌ ಕಂಪನಿಯನ್ನು ಸ್ಥಗಿತಗೊಳಿಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ – ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕ ಆಯ್ಕೆ ನೆನೆಗುದಿಗೆ

ಡಾರ್ಸಿ ಅವಧಿಯಲ್ಲಿ ಟ್ವಿಟ್ಟರ್‌ ಭಾರತೀಯ ಕಾನೂನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಲ್ಲಿ ಸಮಸ್ಯೆಯನ್ನು ಹೊಂದಿತ್ತು. ಭಾರತದ ಕಾನೂನುಗಳು ತನಗೆ ಅನ್ವಯಿಸುವುದಿಲ್ಲ ಎಂಬಂತೆ ವರ್ತಿಸಿತ್ತು. ಸಾರ್ವಭೌಮ ರಾಷ್ಟ್ರವಾಗಿರುವ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಂಪನಿಗಳು ತನ್ನ ಕಾನೂನುಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವ ಹಕ್ಕನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದಿದ್ದಾರೆ.  ಇದನ್ನೂ ಓದಿ: ಟ್ವಿಟ್ಟರ್ ಕಂಪನಿ ಮುಚ್ಚುತ್ತೇವೆ, ಉದ್ಯೋಗಿಗಳ ಮೇಲೆ ದಾಳಿ: ಭಾರತ ಸರ್ಕಾರದಿಂದ  ಬೆದರಿಕೆ ಬಂದಿತ್ತು ಎಂದ ಡಾರ್ಸಿ

 

ಜನವರಿ 2021 ರಲ್ಲಿ ನಡೆದ ರೈತರ ಪ್ರತಿಭಟನೆಗಳ ಸಮಯದಲ್ಲಿ, ಸಾಕಷ್ಟು ತಪ್ಪು ಮಾಹಿತಿಗಳು ಮತ್ತು ನರಮೇಧದ ವರದಿಗಳು ಖಂಡಿತವಾಗಿಯೂ ನಕಲಿಯಾಗಿದ್ದವು. ಈ ನಕಲಿ ಸುದ್ದಿಗಳು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸುವ ಸಾಧ್ಯತೆ ಇತ್ತು. ಈ ಕಾರಣಕ್ಕೆ ತಪ್ಪು ಮಾಹಿತಿಯನ್ನು ಪ್ರಕಟಿಸಿದ ಖಾತೆಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೆವು ಎಂದರು.

ಜಾಕ್‌ ಅವರ ಪಕ್ಷಪಾತದ ಧೋರಣೆಯನ್ನು ಖಂಡಿಸಿದ ಅವರು, ಅಮೆರಿಕದಲ್ಲಿ ಈ ರೀತಿ ಘಟನೆ ನಡೆದಾಗ  ಆ ಟ್ವೀಟ್‌ಗಳನ್ನು ತೆಗೆಯಲಾಗಿತ್ತು. ಆದರೆ ಅದೇ ರೀತಿಯ ಘಟನೆ ಭಾರತದಲ್ಲಿ ನಡೆದಾಗ ಅವರಿಗೆ ಸಮಸ್ಯೆಯಾಗಿತ್ತು ಎಂದು ಹೇಳಿ ಕಿಡಿಕಾರಿದರು.

Share This Article