ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಜೊತೆ ದೆಹಲಿಯಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ವೀಕ್ಷಿಸಿದ್ದಾರೆ.
ಬಿಡುಗಡೆಯಾದ ಎಲ್ಲಾ ಕಡೆ ಕಾಂತಾರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆಗೆ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ವೀಕ್ಷಣೆ ನಂತರ ‘ಕಾಂತಾರ’ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
‘ಕನ್ನಡ ಅಸ್ಮಿತೆಯ ಸಮೃದ್ಧ ವೈಭವೀಕರಣ. ಮನ ಮಿಡಿಯುವ ಅಂತಃಕರಣದ ನಿಜ ಹೂರಣ. ತುಳುನಾಡ ಸಾಂಸ್ಕೃತಿಕ ಮತ್ತು ದೈವತ್ವದ ಪರಂಪರೆಯ ವಿರಾಟ್ ಅನಾವರಣ. ಈ ಚಿತ್ರ ಪದಗಳಿಗೂ ಮೀರಿದ ಸೃಜನಶೀಲ ಸೃಷ್ಟಿ. ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ & ನಟ ರಿಷಬ್ ಶೆಟ್ಟಿ ಹಾಗೂ ಮತ್ತವರ ತಂಡದ ಪ್ರಯತ್ನಕ್ಕೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮಿಂದ ಇನ್ನಷ್ಟು ಅತ್ಯುತ್ತಮ ಚಿತ್ರಗಳು ಮೂಡಿಬರಲಿ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಕಾಂತಾರ ಚಿತ್ರವನ್ನ ಹೊಗಳಿದ್ದಾರೆ.