ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸಚಿವ ಕಿರಣ್‌ ರಿಜಿಜು ಕಾರು ಅಪಘಾತ

Public TV
1 Min Read

– ಅಪಘಾತಕ್ಕೂ ಹಿಂದಿನ ದಿನ “ಪ್ರಯಾಣದುದ್ದಕ್ಕೂ ಸುಂದರವಾದ ರಸ್ತೆ ಆನಂದಿಸಬಹುದು” ಎಂದು ಹೊಗಳಿದ್ದ ಸಚಿವ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಂಬನ್‌ ಜಿಲ್ಲೆಯ ಬನಿಹಾಲ್‌ ಪ್ರದೇಶದಲ್ಲಿ ಕಾನೂನು ಸಚಿವ ಕಿರಣ್‌ ರಿಜಿಜು ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ. ಸಣ್ಣ ಮಟ್ಟದ ಅಪಘಾತವಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

ಶನಿವಾರ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಮಬಾನ್‌ನಲ್ಲಿ ಕೇಂದ್ರ ಸಚಿವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ. ರಸ್ತೆ ಅಪಘಾತದಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಎಡಿಜಿ ಮುಖೇಶ್‌ ಸಿಂಗ್‌ ತಿಳಿಸಿದ್ದಾರೆ.

ಘಟನೆಯ ದೃಶ್ಯಾವಳಿಯ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಭದ್ರತಾ ಸಿಬ್ಬಂದಿ ಸಚಿವರ ಕಪ್ಪು ಸ್ಕಾರ್ಪಿಯೊದ ಬಾಗಿಲು ತೆರೆದು ಒಳಗಿದ್ದವರನ್ನು ಹೊರಗೆ ಕರೆತರಲು ಮುಂದಾಗುತ್ತಿರುವ ದೃಶ್ಯ ವೀಡಿಯೋದಲ್ಲಿದೆ.

ಈ ಪ್ರಯಾಣಕ್ಕೂ ಹಿಂದಿನ ದಿನ ಕಾನೂನು ಸೇವಾ ಶಿಬಿರದಲ್ಲಿ ಪಾಲ್ಗೊಳ್ಳಲು ಜಮ್ಮುವಿನಿಂದ ಉಧಮ್‌ಪುರಕ್ಕೆ ಪ್ರಯಾಣಿಸುತ್ತಿದ್ದಾಗ ಸಚಿವರು, “ಪ್ರಯಾಣದ ಉದ್ದಕ್ಕೂ ಸುಂದರವಾದ ರಸ್ತೆಯನ್ನು ಆನಂದಿಸಬಹುದು” ಎಂದು ಟ್ವೀಟ್ ಮಾಡಿದ್ದರು.

Share This Article