ಕೇಂದ್ರ ಸಂಪುಟ ಸಭೆ – ಬಳ್ಳಾರಿ-ಚಿಕ್ಕಜಾಜೂರು ದ್ವಿಮುಖ ಮಾರ್ಗ ಯೋಜನೆಗೆ ಅನುಮೋದನೆ

Public TV
2 Min Read

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ-ಚಿಕ್ಕಜಾಜೂರು (Ballary-Chikkajajur) ದ್ವಿಮುಖ ಮಾರ್ಗ ಯೋಜನೆಗೆ ಅನುಮೋದನೆ ನೀಡಲಾಯಿತು.

185 ಕಿ.ಮೀ ಉದ್ದದ ಈ ರೈಲು ಮಾರ್ಗವು ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಜಿಲ್ಲೆ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮೂಲಕ ಹಾದುಹೋಗಲಿದೆ. ಈ ಮಾರ್ಗದಲ್ಲಿ 19 ಸ್ಟೇಷನ್‌ಗಳು, 29 ಪ್ರಮುಖ ಸೇತುವೆಗಳು, 250 ಚಿಕ್ಕ ಸೇತುವೆಗಳು, 21 ರಸ್ತೆ ಮೇಲ್ಸೇತುವೆ ಮತ್ತು 85 ಕಿ.ಮೀ ರೈಲು ಮಾರ್ಗ ಇದೆ. ಇದಕ್ಕಾಗಿ ಸರ್ಕಾರ 3,342 ಮೀಸಲಿಟ್ಟಿದೆ.ಇದನ್ನೂ ಓದಿ: ಮಂಗ್ಲಿ ಬರ್ತ್‍ಡೇ ಪಾರ್ಟಿ ಮೇಲೆ ದಾಳಿ – ಮಾದಕ ವಸ್ತು ಪತ್ತೆ, ಪೊಲೀಸರಿಗೆ ಆವಾಜ್ ಹಾಕಿದ ಗಾಯಕಿ!

ಈ ಯೋಜನೆಯಿಂದ ಕಲ್ಲಿದ್ದಲು, ಕಬ್ಬಿಣದ ಆಯಸ್ಕಾಂತ, ಕಬ್ಬಿಣದ ಒರೆ, ಕೋಕಿಂಗ್ ಕಲ್ಲಿದ್ದಲು, ಉಕ್ಕು, ಗೊಬ್ಬರ, ಆಹಾರ ಧಾನ್ಯಗಳು ಮತ್ತು ಇತರ ಉತ್ಪನ್ನಗಳ ಸಾಗಣೆಗೆ ಅನುಕೂಲವಾಗಲಿದೆ. ಇದು 470 ಗ್ರಾಮಗಳು ಮತ್ತು ಸುಮಾರು 15 ಲಕ್ಷ ಜನರಿಗೆ ಸುಧಾರಿತ ಸಂಪರ್ಕ ಕಲ್ಪಿಸಲಿದೆ.

ಯೋಜನೆಯಿಂದ 18.9 ಮಿಲಿಯನ್ ಟನ್ ಸಿಓ2 ಉತ್ಪಾದನೆಯನ್ನು ತಗ್ಗಿಸುತ್ತದೆ (4 ಕೋಟಿ ಮರಗಳನ್ನು ನೆಡುವುದರ ಮೂಲಕ) ಮತ್ತು ಪ್ರತಿ ವರ್ಷ 20 ಕೋಟಿ ಲೀಟರ್ ಡೀಸೆಲ್ ಉಳಿಯುತ್ತದೆ.ಇದನ್ನೂ ಓದಿ: ಹಳಬರು ಜಿಡ್ಡು ಹಿಡಿದು ಹೋಗಿದ್ದಾರೆ, ಹೊಸಬರಿಗೆ ಸಚಿವ ಸ್ಥಾನ ಕೊಟ್ರೆ ಕೆಲಸ ಮಾಡ್ತಾರೆ: ಶಿವಗಂಗಾ ಬಸವರಾಜ್

Share This Article