ಸೆಮಿಕಂಡಕ್ಟರ್ ಮಿಷನ್ ವಿಸ್ತರಣೆ – 40 ಸಾವಿರ ಕೋಟಿ ರೂ. ಮೀಸಲು, ಹೆಚ್ಚುವರಿ 10 ಸಾವಿರ ಕೋಟಿ ಘೋಷಣೆ

1 Min Read

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಬಜೆಟ್‌ನಲ್ಲಿ ಸೆಮಿಕಂಡಕ್ಟರ್ ವಲಯಕ್ಕೆ ಬಂಪರ್‌ ಕೊಡುಗೆ ಘೋಷಿಸಿದ್ದಾರೆ.

ಸೆಮಿಕಂಡಕ್ಟರ್ ಮಿಷನ್ 2.0ಗೆ ಚಾಲನೆ ಸಿಕ್ಕಿದ್ದು, ಈ ವಲಯಕ್ಕೆ 40 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಇದರ ಜತೆಗೆ ಹೆಚ್ಚುವರಿ 10 ಸಾವಿರ ಕೋಟಿ ಘೋಷಣೆ ಮಾಡಲಾಗಿದೆ. ಈ ಮೂಲಕ ಭಾರತದಲ್ಲಿ ಕೈಗಾರಿಕಾ ವಲಯದಲ್ಲಿ ಸಂಶೋಧನೆ, ಕೌಶಲ್ಯ ತರಬೇತಿ ಆಧಾರಿತ ಕೇಂದ್ರಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ಉತ್ಪಾದನೆ ಮತ್ತು ಪೂರೈಕೆ ಸರಪಳಿ ಬಲ ಪಡಿಸಲು ಮಹತ್ವ ನೀಡಿದಂತಾಗಿದೆ.

ಮುಂದಿನ ಐದು ವರ್ಷಗಳ ಕಾಲ ಸೆಮಿಕಂಡಕ್ಟರ್ ವಲಯಕ್ಕೆ ಹೆಚ್ಚಿನ ಬೆಂಬಲ ದೊರೆಯಲಿದೆ. ಸೆಮಿಕಂಡಕ್ಟರ್ ವಲಯದಲ್ಲಿ ಸಾಮರ್ಥ್ಯ ಹೆಚ್ಚಳ, ಚಿಪ್‍ಗಳ ತಯಾರಿಕೆಯಲ್ಲಿನ ಪ್ರಗತಿಗೆ ಇನ್ನಷ್ಟು ಹೆಚ್ಚಿಸಲು ಆದ್ಯತೆ ದೊರೆಯಲಿದೆ. ಸಣ್ಣ, ಮಧ್ಯಮ ಹಂತದ ಕೈಗಾರಿಕೆಗಳಿಗೆ, ಉದ್ಯೋಗ ಸೃಷ್ಟಿಗೆ 10 ಸಾವಿರ ಕೋಟಿ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: Union Budget 2026: ರೈತರಿಗೆ AI ಸಹಕಾರಿ; ‘ಭಾರತ್‌ ವಿಸ್ತಾರ್‌’ ಘೋಷಿಸಿದ ನಿರ್ಮಲಾ ಸೀತಾರಾಮನ್‌

ಸೆಮಿಕಂಡಕ್ಟರ್ ಮಿಷನ್ ಹಾಗೂ ಇತರ ಉದ್ಯಮಗಳಿಗೆ ಬಹಳ ಅಗತ್ಯವಾಗಿರುವ ವಿರಳ ಭೂಖನಿಜಗಳಿಗಾಗಿ ಸರ್ಕಾರ ಹೊಸ ಪ್ಲಾನ್ ಮಾಡಿದೆ. ಈ ವಸ್ತುಗಳಿಗಾಗಿ ಭಾರತ ಬಹುತೇಕ ಆಮದು ಮೇಲೆ ಅವಲಂಬಿತವಾಗಿದೆ. ಇದನ್ನು ತಪ್ಪಿಸಲು ದೇಶೀಯವಾಗಿ ಇವುಗಳ ಉತ್ಪಾದನೆಗೆ ಸರ್ಕಾರ ಯೋಜಿಸಿದೆ. ಬಜೆಟ್​ನಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದ್ದು, ರೇರ್ ಅರ್ಥ್ ಕಾರಿಡಾರ್ ನಿರ್ಮಿಸುತ್ತಿರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಒಡಿಶಾ, ಕೇರಳ ಮತ್ತು ಆಂಧ್​ರಪ್ರದೇಶದಂತಹ ಖನಿಜ ಸಮೃದ್ಧ ರಾಜ್ಯಗಳನ್ನೊಳಗೊಂಡ ರೇರ್ ಅರ್ಥ್ ಕಾರಿಡಾರ್ ನಿರ್ಮಿಸಲಾಗುತ್ತದೆ. ಇಲ್ಲಿ ಸಂಶೋಧನೆ ಮತ್ತು ಮೈನಿಂಗ್​ಗೆ ಉತ್ತೇಜನ ಕೊಡಲಾಗುತ್ತದೆ.‌ ಇದನ್ನೂ ಓದಿ: ಕೇಂದ್ರ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ: ಪರಮೇಶ್ವರ್‌

Share This Article