Union Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ, ಹೋಗಿದ್ದು ಎಲ್ಲಿಗೆ?

Public TV
1 Min Read

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಮಂಗಳವಾರ ಸತತ ಏಳನೇ ಬಜೆಟ್‌ ಮಂಡಿಸಿದ್ದಾರೆ. ಸೀತಾರಾಮನ್ ತಮ್ಮ ಬಜೆಟ್ (Union Budget 2024) ಭಾಷಣದಲ್ಲಿ, ವಿತ್ತೀಯ ಕೊರತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ GDPಯ 4.9% ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ. ಮುಂಬರುವ ವರ್ಷದಲ್ಲಿ ವಿತ್ತೀಯ ಕೊರತೆಯನ್ನು 4.5% ಗಿಂತ ಕಡಿಮೆ ಮಾಡಲು ಸರ್ಕಾರ ಯೋಜಿಸಿದೆ. ಜಿಡಿಪಿಯ ಶೇಕಡಾವಾರು ವಿತ್ತೀಯ ಕೊರತೆಯ ಕುಸಿತದ ಪಥವನ್ನು ನಿರ್ವಹಿಸುವ ಗುರಿಯನ್ನು ಬಜೆಟ್ ಹೊಂದಿದೆ.

ಸರ್ಕಾರಕ್ಕೆ ಒಂದು ರೂಪಾಯಿ ಬರುವುದು ಎಲ್ಲಿಂದ ಮತ್ತು ಹೋಗುವುದು ಎಲ್ಲಿಗೆ ಎಂಬ ಖರ್ಚು, ವೆಚ್ಚಗಳ ವಿವರ ಇಲ್ಲಿದೆ. ಇದನ್ನೂ ಓದಿ: ಆಭರಣ ಪ್ರಿಯರಿಗೆ ಸಿಹಿ ಸುದ್ದಿ – ಕಡಿಮೆಯಾಗಲಿದೆ ಚಿನ್ನ, ಬೆಳ್ಳಿ ದರ

ರೂಪಾಯಿ ಬರುವುದು ಎಲ್ಲಿಂದ?
(ಪೈಸೆಗಳಲ್ಲಿ ನೀಡಲಾಗಿದೆ)

ರೂಪಾಯಿ ಹೋಗಿದ್ದು ಎಲ್ಲಿಗೆ?
ಬಡ್ಡಿ ಪಾವತಿ – 19 ಪೈಸೆ
ತೆರಿಗೆಯಲ್ಲಿ ರಾಜ್ಯಗಳ ಪಾಲು – 21 ಪೈಸೆ
ಸೆಂಟ್ರಲ್‌ ಸೆಕ್ಟರ್‌ ಸ್ಕೀಮ್‌ – 16 ಪೈಸೆ
ಸಬ್ಸಿಡಿ – 6 ಪೈಸೆ
ರಕ್ಷಣಾ ವಲಯ – 8 ಪೈಸೆ
ಹಣಕಾಸು ಆಯೋಗ – 9 ಪೈಸೆ
ಕೇಂದ್ರ ಪ್ರಾಯೋಜಿತ ಯೋಜನೆ – 8 ಪೈಸೆ
ಇತರೆ ಖರ್ಚುಗಳು – 9 ಪೈಸೆ
ಪೆನ್ಶನ್‌ – 4 ಪೈಸೆ

ರೂಪಾಯಿ ಬಂದಿದ್ದು ಎಲ್ಲಿಂದ?
* ಸಾಲಗಳು ಮತ್ತು ಇತರೆ ಹೊಣೆಗಾರಿಕೆಗಳು – 27 ಪೈಸೆ
* ಆದಾಯ ತೆರಿಗೆ – 19 ಪೈಸೆ
* ತೆರಿಗೆಯೇತರ ಆದಾಯ – 9 ಪೈಸೆ
* ನಾನ್‌ ಡೆಬಿಟ್‌ ಕ್ಯಾಪಿಟನ್‌ – 1 ಪೈಸೆ
* ಕಸ್ಟಮ್ಸ್‌ – 4 ಪೈಸೆ
* ಕಾರ್ಪೊರೇಷನ್‌ ತೆರಿಗೆ – 17 ಪೈಸೆ
* ಜಿಎಸ್‌ಟಿ & ಇತರೆ ತೆರಿಗೆ – 18 ಪೈಸೆ
* ಕೇಂದ್ರ ಅಬಕಾರಿ ಸುಂಕ – 5 ಪೈಸೆ

Share This Article