– ಸರ್ಕಾರದಲ್ಲಿ ಮೆಂಟಲ್ ಕೇಸ್ ಜಾಸ್ತಿ ಇವೆ
ಬೆಂಗಳೂರು: ಸುರಿಮಳೆಯ ಬಜೆಟ್ ಕೊಡಿಸಿದ್ದಕ್ಕೆ ನಮ್ಮ ರಾಜ್ಯದ 25 ಜನ ಎಂಪಿಗಳಿಗೆ ಹಾಗೂ ಸಿಎಂ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ನರೇಗಾ ಹಣವನ್ನು ಕಡಿಮೆ ಮಾಡಿದ್ರು. 2 ಕೋಟಿ ಉದ್ಯೋಗ ಕೊಡ್ತೇವೆ ಎಂದ್ರು ಅದನ್ನೂ 60 ಲಕ್ಷಕ್ಕೆ ಇಳಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಹಲವು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ರೈತರಿಗೆ ಬೆಂಬಲ ಬೆಲೆ ಸಿಗ್ತಿಲ್ಲ. ರೈತರಿಗೆ ಏನಾದ್ರೂ ಸಹಾಯವಾಗಿದ್ಯಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ
ವೇತನದವರಿಗೂ ರಿಲೀಫ್ ಇಲ್ಲ. 40 ವರ್ಷದಿಂದ ಇಂತಹ ಪೇಶೆಂಟ್ ಬಜೆಟ್ ನೋಡಿಲ್ಲ. ಸಿಮೆಂಟ್, ಕಬ್ಬಿಣದ ಬೆಲೆ ಕಡಿಮೆಯಾಗಿಲ್ಲ. ಮನೆಯನ್ನ ಎಲ್ಲಿ ಕಟ್ಟಿಕೊಳ್ಳೋದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಪೋರೇಟ್ ಲಾಬಿಗೆ ಮಣಿದು ಅವರಿಗೆ ಅವಕಾಶ ನೀಡಲಾಗಿದೆ. ಈ ಬಜೆಟ್ ಎಲ್ಲರ ಜೇಬನ್ನ ಪಿಕ್ ಪಾಕೆಟ್ ಮಾಡಿದೆ ಎಂದು ಟೀಕಿಸಿದ್ದಾರೆ.
ನದಿ ಜೋಡಣೆ ವಿಚಾರವಾಗಿ ಮಾತನಾಡಿದ ಅವರು, ಪೆನ್ನಾರ್ ನದಿ ಎಲ್ಲಿದೆ? ನಮ್ಮ ರಾಜ್ಯಕ್ಕೇನಾದ್ರೂ ಲಾಭವಾಗುತ್ತಾ? ಮೇಕೆದಾಟು ಯೋಜನೆಯಂತವನ್ನ ಕೊಡಲಿ. ಬಡ್ಡಿರಹಿತ ಸಾಲ ರಾಜ್ಯಕ್ಕೆ ಕೊಟ್ಟಿದ್ದಾರೆ. ಬಡ್ಡಿರಹಿತ ಸಾಲ ಜನರಿಗೆ ಕೊಡ್ತಿದ್ದಾರಾ? ಎಂದು ವಾಗ್ದಾದ ಮಾಡಿದ್ದಾರೆ. ಇದನ್ನೂ ಓದಿ: ಮಾಜಿ ಪೊಲೀಸ್ ಅಧಿಕಾರಿ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಸಿಬಿಐ
ಡಿಜಿಟಲ್ ವಿವಿಯನ್ನು ರಾಜ್ಯದಲ್ಲಿ ಮಾಡಿ ಬಿಡಲಿ. ವಿವಿ ಮಾಡಲು ಜಮೀನನ್ನ ನಾವೇ ಕೊಡಿಸ್ತೇವೆ. ಸಿಎಂ ಡಿಜಿಟಲ್ ವಿವಿ ರಾಜ್ಯಕ್ಕೆ ತರಲಿ ಎಂದಿದ್ದಾರೆ. ನಿಮ್ಹಾನ್ಸ್ ಗೆ ನೂಡಲ್ ಏಜೆನ್ಸಿ ವಿಚಾರ, ಸರ್ಕಾರದಲ್ಲಿ ಮೆಂಟಲ್ ಕೇಸ್ ಜಾಸ್ತಿ ಇವೆ. ಅದಕ್ಕೆ ಅದನ್ನ ಕೊಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.