ಕೇಂದ್ರ ಬಜೆಟ್ ಮುಖ್ಯಾಂಶಗಳು – LIC ಷೇರು ಮಾರಾಟ

Public TV
7 Min Read

ನವದೆಹಲಿ: ಆರ್ಥಿಕತೆಯ ಕಠಿಣ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ 2ರ ಮೊದಲ ಬಜೆಟ್ ಮಂಡನೆಯಾಗಿದೆ.  ವೈಯಕ್ತಿಕ ಆದಾಯ ತೆರಿಗೆಯಲ್ಲಿ ಭಾರೀ ಇಳಿಕೆ, ಎಲ್ ಐಸಿ ಷೇರುಗಳ ಮಾರಾಟ ಮಾಡುವ ಅಂಶ ಬಜೆಟ್ ಪ್ರಸ್ತಾಪದಲ್ಲಿದೆ. ಸುಮಾರು 2 ಗಂಟೆ 40 ನಿಮಿಷಗಳ ಕಾಲ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಈ ಮೂಲಕ ದೀರ್ಘ ಅವಧಿ ಭಾಷಣ ಮಾಡಿದ ಹಣಕಾಸು ಸಚಿವೆ ಎಂಬ ದಾಖಲೆಯನ್ನು ಸೀತಾರಾಮನ್ ಬರೆದಿದ್ದಾರೆ.

ಬಜೆಟ್ ಪ್ರಮುಖ ಅಂಶಗಳು

ಆದಾಯ ತೆರಿಗೆ ಭಾರೀ ಇಳಿಕೆ –  0.2.5 ಲಕ್ಷದವರೆಗೆ ತೆರಿಗೆ ಇಲ್ಲ. 2.5 ಲಕ್ಷ ದಿಂದ 5 ಲಕ್ಷದವರೆಗೆ ಶೇ.5 ತೆರಿಗೆ. 5ರಿಂದ 7.5 ಲಕ್ಷದವರೆಗೆ ಶೇ.10 ತೆರಿಗೆ, 7.5 ಲಕ್ಷದಿಂದ 10 ಲಕ್ಷದವರೆಗೆ ಶೇ.15 ತೆರಿಗೆ,  10 ಲಕ್ಷದಿಂದ 12 ಲಕ್ಷದವರೆಗೆ ಶೇ. 20 ತೆರಿಗೆ, 12.5 ಲಕ್ಷದಿಂದ 15 ಲಕ್ಷದವರೆಗೆ ಶೇ. 25 ತೆರಿಗೆ, 15 ಲಕ್ಷಕ್ಕಿಂತ ಮೇಲ್ಪಟ್ಟು ಶೇ.30 ತೆರಿಗೆ

ಎಲ್ ಐಸಿ ಖಾಸಗೀಕರಣ?: ಎಲ್ಐಸಿ ಷೇರುಗಳ ಮಾರಾಟ ಘೋಷಣೆ. ವಿದೇಶಗಳ ಜೊತೆ ರೂಪಾಯಿಯಲ್ಲಿ ವ್ಯವಹಾರಕ್ಕೆ ಒತ್ತು. ಸರ್ಕಾರಿ ಕಂಪನಿಗಳಿಂದ ಬಂಡವಾಳ ಹಿಂತೆಗೆತ.

ಸಣ್ಣ ಕೈಗಾರಿಕೆಗೆ ನೆರವು: ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹಣ ಹೂಡಿಕೆ ದೊಡ್ಡ ಸಮಸ್ಯೆ. ಈ ಸಮಸ್ಯೆ ನಿವಾರಣೆಗೆ ವಿಶೇಷ ಸಾಲ ಯೋಜನೆ ಘೋಷಣೆ.

ಬ್ಯಾಂಕ್ ಗಳ ಮೇಲೆ ನಿಗಾ: ಠೇವಣಿದಾರರ ಹಣ ಭದ್ರ. ಠೇವಣಿ ವಿಮಾ ಮೊತ್ತ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ. ಐಡಿಬಿಐ ಬ್ಯಾಂಕಿನಲ್ಲಿರುವ ಸರ್ಕಾರಿ ಷೇರುಗಳನ್ನು ಖಾಸಗಿಯವರಿಗೆ ಮಾರಾಟ

ತೆರಿಗೆ ಕಿರುಕುಳದಿಂದ ಮುಕ್ತಿ:  ತೆರಿಗೆದಾರರ ಚಾರ್ಟರ್ ಓಪನ್ ಮಾಡುತ್ತೇವೆ. ಸರ್ಕಾರಿ ನೇಮಕಾತಿಗಳಲ್ಲಿ ಬದಲಾವಣೆ. ಆನ್ ಲೈನ್ ಮೂಲಕ ಸರ್ಕಾರಿ ಪರೀಕ್ಷೆಗೆ ಒತ್ತು. ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪನೆ

ರಾಷ್ಟ್ರೀಯ ಭದ್ರತೆ: ಭ್ರಷ್ಟಾಚಾರ ಮುಕ್ತ ಸರ್ಕಾರವಾಗಿದ್ದು, ಆರೋಗ್ಯ, ಸಂಪತ್ತು. ಸಂತೋಷ, ಭದ್ರತೆ ದೇಶದ ಅಭಿವೃದ್ಧಿಗೆ ಮುಖ್ಯ. ರಾಷ್ಟ್ರೀಯ ಭದ್ರತೆಯೇ ನಮ್ಮ ನಮ್ಮ ಮೊದಲ ಆದ್ಯತೆಯಾಗಿದೆ.

ಪಾರಂಪರಿಕಾ ತಾಣಗಳ ಅಭಿವೃದ್ಧಿ: 5 ಪಾರಂಪರಿಕಾ ತಾಣಗಳ ಅಭಿವೃದ್ಧಿಗೆ ಒತ್ತು. ಸಂಸ್ಕೃತಿ ಇಲಾಖೆಗೆ 3,150 ಕೋಟಿ ಮೀಸಲು. ವಿಶ್ಚ ಪ್ರವಾಸೋದ್ಯಮದಲ್ಲಿ 2014ರಲ್ಲಿ 65ನೇ ಸ್ಥಾನದಲ್ಲಿದ್ದ ನಾವು 2019ರಲ್ಲಿ 34ನೇ ಸ್ಥಾನಕ್ಕೆ ಏರಿದ್ದೇವೆ.

ಬೇಟಿ ಬಚಾವೋದಿಂದ ಲಾಭ: ಬೇಟಿ ಬಚಾವೋ ಬೇಟಿ ಬಡವೋದಿಂದ ಲಾಭವಾಗಿದ್ದು ಶಿಕ್ಷಣದಲ್ಲಿ ಸುಧಾರಣೆಯಾಗಿದೆ. ಈಗ ಶಾಲೆಗೆ ಹೋಗುವ ಹುಡುಗರಿಗಿಂತ ಹುಡುಗಿಯರ ಸಂಖ್ಯೆ ಜಾಸ್ತಿಯಾಗಿದೆ. ಪ್ರಾಥಮಿಕ ಶಾಲೆಯಲ್ಲಿ ಶೇ.93 ರಷ್ಟು ಹುಡುಗಿಯರಿದ್ದರೆ ಶೇ.89 ರಷ್ಟು ಹುಡುಗರಿದ್ದಾರೆ. ಸೆಕೆಂಡರಿ ಶಾಲೆಯಲ್ಲಿ ಶೇ.81ರಷ್ಟು ಬಾಲಕಿಯರಿದ್ದರೆ ಶೇ.72 ರಷ್ಟು ಬಾಲಕರು ಓದುತ್ತಿದ್ದಾರೆ. ಹೈಯರ್ ಸೆಕೆಂಡರಿ ಶಿಕ್ಷಣದಲ್ಲಿ ಶೇ.59.7ರಷ್ಟು ವಿದ್ಯಾರ್ಥಿನಿಯರಿದ್ದರೆ ಶೇ.57.54ರಷ್ಟು ವಿದ್ಯಾರ್ಥಿಗಳು ಓದುತ್ತಿದ್ದಾರೆ.

 ಡಿಜಿಟಲ್ ಇಂಡಿಯಾ: ಅಂಗನವಾಡಿಗೂ ಡಿಜಿಟಲ್ ಸೌಲಭ್ಯ, 1 ಲಕ್ಷ ಗ್ರಾಮ ಪಂಚಾಯತ್ ಗಳಿಗೆ ಕೇಬಲ್ ಸಂಪರ್ಕ. ಭಾರತ್ ನೆಟ್ ಗೆ 6 ಸಾವಿರ ಕೋಟಿ ಮೀಸಲು.

ಸ್ಮಾರ್ಟ್ ಮೀಟರ್ : ವಿದ್ಯುತ್ ಬಳಕೆದಾರರಿಗೆ ಅನುಕೂಲವಾಗಲು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆ, 2024ರ ವೇಳಗೆ 100 ಹೊಸ ವಿಮಾನ ನಿಲ್ದಾಣ ಸ್ಥಾಪನೆ, ರಾಷ್ಟ್ರೀಯ ಅನಿಲ ಗ್ರಿಡ್ ವಿಸ್ತರಣೆ

ರೈಲು ಯೋಜನೆ: ಪ್ರವಾಸಿ ತಾಣಗಳಿಗೆ ತೇಜಸ್ ರೈಲು ಸಂಪರ್ಕ, ಬೆಂಗಳೂರಿಗೆ ಸಬ್ ಅರ್ಬನ್ ರೈಲು ಘೋಷಣೆ. ಶೇ.20 ರಷ್ಟು ಹಣ ಕೇಂದ್ರ ಸರ್ಕಾರ ನೀಡಲಿದೆ.

ಎಕ್ಸ್ ಪ್ರೆಸ್ ವೇ: ಚೆನ್ನೈ ಬೆಂಗಳೂರು ಎಕ್ಸ್ ಪ್ರೆಸ್ ವೇ ಶೀಘ್ರವೇ ಶೀಘ್ರವೇ ಘೋಷಣೆ. ದೆಹಲಿ ಮುಂಬೈ ಎಕ್ಸ್ ಪ್ರೆಸ್ ವೇ 2023ಕ್ಕೆ ಮುಕ್ತಾಯ.

ನಿರ್ವಿಕ್ ಯೋಜನೆ – ಪ್ರತಿ ಜಿಲ್ಲೆಯೂ ರಫ್ತು ಹಬ್ ಆಗಿ ಪರಿವರ್ತನೆ. ಸಣ್ಣ ರಫ್ತುದಾರರಿಗೆ ಡಿಜಿಲಟ್ ಮೂಲಕ ಹಣ ಪಾವತಿ. ಕೈಗಾರಿಕಾ ಅಭಿವೃದ್ಧಿಗೆ 27,300 ಕೋಟಿ ರೂ. ಮೀಸಲು

ಉದ್ಯಮ ಭಾರತದ ಶಕ್ತಿ – ಸರಸ್ವತಿ, ಸಿಂಧೂ ನಾಗರಿಕತೆಯ ಸಂದರ್ಭದಲ್ಲೇ ಭಾರತ ವ್ಯಾಪಾರ ವಹಿವಾಟುಗಳನ್ನು ನಡೆಸುತಿತ್ತು. ಕೈಗಾರಿಕೆಗಳಿಗೆ ಭೂಮಿ ನೀಡುವ ಸಂಬಂಧ ಕೈಗಾರಿಕಾ ಅನುಮತಿ ಘಟಕ ಸ್ಥಾಪನೆ. ಮೊಬೈಲ್ ಫೋನ್, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಸೆಮಿ ಕಂಡಕ್ಟರ್, ಮೆಡಿಕಲ್ ಉಪಕರಣ ಉತ್ಪಾದನೆಗೆ ಶೀಘ್ರವೇ ಯೋಜನೆ ಪ್ರಕಟ.

ಶಿಕ್ಷಣ:  2030ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಉದ್ಯೋಗಿಗಳು ಇರುವ ದೇಶವಾಗಿ ಭಾರತ ಹೊರ ಹೊಮ್ಮಲಿದೆ. 150 ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪನೆ. ಶಿಕ್ಷಣದಲ್ಲಿ ವಿದೇಶಿ ಹೂಡಿಕೆ. ಸದ್ಯದಲ್ಲೇ ಹೊಸ ಶಿಕ್ಷಣ ನೀತಿಗೆ ಜಾರಿಗೆ ಕ್ರಮ. 1 ವರ್ಷ ನಗರ- ಸ್ಥಳಿಯ ಸಂಸ್ಥೆಗಳಲ್ಲಿ ತರಬೇತಿ. ರಾಷ್ಟ್ರೀಯು ಪೊಲೀಸ್ ವಿವಿ ಸ್ಥಾಪನೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೂಲಕ ಆನ್ ಲೈನ್ ಶಿಕ್ಷಣ. ಎಲ್ಲ ಜಿಲ್ಲೆಗಳಿಗೆ ವೈದ್ಯಕೀಯ ಶಿಕ್ಷಣ ಸಂಸ್ಥೆ.

ಫಿಟ್ ಇಂಡಿಯಾ: 12 ರೋಗಗಳಿಗೆ ಇಂದ್ರಧನುಷ್ ವಿಸ್ತರಣೆ, ಆಯುಷ್ಮಾನ್ ಭಾರತ್ ವಿಸ್ತರಣೆ. ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆ ನಿರ್ಮಾಣ. ಎಲ್ಲ ಜಿಲ್ಲೆಗಳಲ್ಲಿ ಜನೌಷಧಿ ಕೇಂದ್ರ ವಿಸ್ತರಣೆ. ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ಮೀಸಲು

ನರೇಗಾ ವಿಸ್ತರಣೆ: ಹೈನುಗಾರಿಕೆಗೂ ನರೇಗಾ ವಿಸ್ತರಣೆ ಮಾಡಲಾಗುವುದು. ಮೀನುಗಾರಿಕೆಗಾಗಿ ಸಾಗರ ಮಿತ್ರ ಯೋಜನೆ ಜಾರಿ. ಕೃಷಿ ಕ್ಷೇತ್ರಕ್ಕೆ 2.83 ಲಕ್ಷ ಕೋಟಿ ಮೀಸಲು

ಕಿಸಾನ್ ರೈಲು ಘೋಷಣೆ: 2020ರಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ನಾವು ಬದ್ಧರಾಗಿದ್ದೇವೆ. ಆರ್ಥಿಕತೆಯಲ್ಲಿ ಭಾರತ ವಿಶ್ವದ 5ನೇ ಅತಿ ದೊಡ್ಡ ರಾಷ್ಟ್ರವಾಗಿದ್ದು ರೈತರ ಉತ್ಪನ್ನಗಳನ್ನು ಸಾಗಿಸಲು ಕಿಸಾನ್ ರೈಲು ಘೋಷಣೆ.

ಸಾಲ ಇಳಿಕೆ: ಕೇಂದ್ರ ಸರ್ಕಾರದ ಸಾಲ ಕಡಿಮೆಯಾಗಿದೆ. 2004ರ ಮಾರ್ಚ್ ನಲ್ಲಿ ಶೇ52.2 ರಷ್ಟು ಇದ್ದರೆ 2019ರ ಮಾರ್ಚ್ ವೇಳೆಗೆ ಇದು ಶೇ.48.7ಕ್ಕೆ ಇಳಿಕೆಯಾಗಿದೆ.

ಜಾಗತಿಕ ಮನ್ನಣೆ: ಈ ಹಣಕಾಸು ವರ್ಷದಲ್ಲಿ 40 ಕೋಟಿ ಜಿಎಸ್ ಟಿ ರಿಟರ್ನ್ಸ್ ಫೈಲ್ ಆಗಿದೆ. ಮೋದಿ ಅವಧಿಯಲ್ಲಿ ಹಲವು ಮೈಲಿಗಲ್ಲು ಸ್ಥಾಪನೆಯಾಗಿದ್ದು ಭಾರತಕ್ಕೆ ಜಾಗತಿಕ ಮನ್ನಣೆ ಸಿಕ್ಕಿದೆ. 2006-16ರ 10 ವರ್ಷದ ಅವಧಿಯಲ್ಲಿ 27.1 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆ ಎತ್ತಲಾಗಿದೆ.

ಜಿಎಸ್ ಟಿಯಿಂದ ಲಾಭ: ಜಿಎಸ್ ಟಿಯಿಂದ ದೇಶಕ್ಕೆ ಲಾಭವಾಗಿದೆ. ನಾವು 16 ಲಕ್ಷ ಮಂದಿ ಹೊಸ ತೆರಿಗೆದಾರರನ್ನು ಸೃಷ್ಟಿಸಿದ್ದೇವೆ. ಸಬ್ ಕಾ ಸಾಥ್, ಸಬ್ ಕಾ ವಿಕಾಶ್, ಸಬ್ ಕಾ ವಿಶ್ವಾಸ್ ಮೂಲಕ ಸರ್ಕಾರದ ಯೋಜನೆಗಳು ನೇರವಾಗಿ ಫಲಾನುಭವಿಗಳನ್ನು ತಲುಪಿದೆ.

ಅರುಣ್ ಜೇಟ್ಲಿಗೆ ಗೌರವ: ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಜೇಟ್ಲಿ ಅವಧಿಯಲ್ಲಿ ಜಿಎಸ್ ಟಿ ಬಂದಿದೆ.

ಮೋದಿಗೆ ಬಹುಮತ: 2019ರ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಮೋದಿ ಸರ್ಕಾರ ಪ್ರಚಂಡ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದುಮ ದೇಶದ ಜನರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ.

ಕುಟುಂಬ ಸದಸ್ಯರ ಆಗಮನ: ಬಜೆಟ್ ಮಂಡನೆ ವೀಕ್ಷಿಸಲು  ನಿರ್ಮಲಾ ಸೀತಾರಾಮನ್ ಕುಟುಂಬದ ಸದಸ್ಯರು ಸಂಸತ್ ಗೆ ಆಗಮಿಸಿದ್ದಾರೆ.

11 ಗಂಟೆಗೆ ಭಾಷಣ: ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯ ಸ್ಪೀಕರ್ ಅವರ ಅನುಮತಿ ಪಡೆದು ಬಜೆಟ್ ಓದಲಿದ್ದಾರೆ. ಸಾಧಾರಣವಾಗಿ ಬಜೆಟ್ ಭಾಷಣ 90 ರಿಂದ 120 ನಿಮಿಷದ ಒಳಗಡೆ ಇರುತ್ತದೆ.

ಬಜೆಟಿಗೆ ಅನುಮೋದನೆ:  ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಜೆಟಿಗೆ ಅನುಮೋದನೆ,  ಸಂಸತ್ತಿನ ಅಂಗಳ ತಲುಪಿದ ಬಜೆಟ್ ಪ್ರತಿಗಳು

ಶ್ವಾನಗಳಿಂದ ಪರಿಶೀಲನೆ: ಸಂಸತ್ತಿಗೆ ತಂದ ಬಜೆಟ್ ಪ್ರತಿಗಳನ್ನು ಪರಿಶೀಲಿಸುತ್ತಿರುವ ಭದ್ರತಾ ಪಡೆಯ ಶ್ವಾನ

ರಾಷ್ಟ್ರಪತಿಗಳ ಜೊತೆ ಭೇಟಿ: ಸಂಪ್ರದಾಯಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಬಜೆಟ್ ಮಂಡನೆಗೂ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿಯಾದರು.

ಬಜೆಟ್ ನಿರೀಕ್ಷೆ ಏನು?
ವಿಧವೆ, ಹಿರಿಯ ನಾಗರಿಕರು, ಅಂಗವಿಕಲರ ಪಿಂಚಣಿ ಏರಿಕೆ?
> 80 ವರ್ಷ ಮೀರಿದ ಹಿರಿಯರಿಗೆ ಸದ್ಯ 500 ರೂ. ಮಾಸಿಕ ಪಿಂಚಣಿ
> 1 ಸಾವಿರ ರೂಪಾಯಿಗೆ ಏರಿಸಲು ಚಿಂತನೆ
> ವಿಧವೆಯರ ಪಿಂಚಣಿ ಕೂಡ ಹೆಚ್ಚಿಸಲು ಆಲೋಚನೆ

ರೈತರಿಗೆ ಹೆಚ್ಚಾಗುತ್ತಾ ಸಹಾಯಧನ?
> ಕಿಸಾನ್ ಸಮ್ಮಾನ್ ಯೋಜನೆಯಡಿ ಈಗ ವಾರ್ಷಿಕ 6 ಸಾವಿರ ರೂ. ನೀಡಲಾಗುತ್ತಿದೆ.
> 6 ಸಾವಿರದಿಂದ 9 ಸಾವಿರಕ್ಕೆ ಹೆಚ್ಚಳ ಸಾಧ್ಯತೆ

ರೈತರಿಗೂ ಸಿಗುತ್ತಾ ಪಿಂಚಣಿ…?
> ಮಾಸಿಕ 3 ಸಾವಿರ ರೂಪಾಯಿ ಪಿಂಚಣಿಗೂ ಚಿಂತನೆ
> 60 ವರ್ಷ ದಾಟಿದವರಿಗೆ ಪಿಂಚಣಿ.?

ಬಿಪಿಎಲ್ ಕಾರ್ಡ್‍ದಾರಿಗೆ ಗಿಫ್ಟ್!
> ಮನೆಯಿಲ್ಲದ ಬಡವರಿಗೆಲ್ಲಾ ಮನೆ ಭಾಗ್ಯ
> 2020ಕ್ಕೆ 1.95 ಕೋಟಿ ಮನೆಗಳ ನಿರ್ಮಾಣ ಗುರಿ

ಆದಾಯ ತೆರಿಗೆಯಲ್ಲಿ ವಿನಾಯ್ತಿ
> 5 ಲಕ್ಷ ಆದಾಯಕ್ಕೆ ತೆರಿಗೆ ವಿನಾಯ್ತಿ ಸಾಧ್ಯತೆ

ಕಪ್ಪುಹಣ ಕಕ್ಕಿಸಲು ಡೇಂಜರಸ್ ರೂಲ್ಸ್ ಜಾರಿ?
> ಕಪ್ಪುಕುಳಗಳನ್ನು ಹಿಡಿಯಲು ಘೋಷಣೆ ಸಾಧ್ಯತೆ
> ಡಿಜಿಟಲ್ ಪಾವತಿಗೆ ಉತ್ತೇಜನ
> ದೊಡ್ಡಮಟ್ಟದ ಹಣಕಾಸು ವ್ಯವಹಾರಕ್ಕೆ ನಿಬಂಧನೆ

ಚಿನ್ನಕ್ಕೂ ಹಾಕುತ್ತಾರಾ ಟ್ಯಾಕ್ಸ್?
> ನೋಟು ಬ್ಯಾನ್ ವೇಳೆ ಅಪಾರ ಚಿನ್ನ ಖರೀದಿ ಶಂಕೆ
> ಚಿನ್ನಕ್ಕೆ ಲೆಕ್ಕ ಕೇಳುವ ವಿಶಿಷ್ಠ ಯೋಜನೆ ಜಾರಿ ಸಾಧ್ಯತೆ
> ಇಂತಿಷ್ಟೇ ಚಿನ್ನ ಹೊಂದಿರಬೇಕೆಂಬ ನಿಯಮ ಜಾರಿ?
> ಐಟಿ ಮುಂದೆ ಸ್ವಯಂ ಘೋಷಣೆಗೆ ಕಾನೂನು
> ಹೆಚ್ಚು ಚಿನ್ನ ಹೊಂದಿದ್ದರೆ ಕ್ಷಮಾದಾನ ಕಾನೂನು?
> ತೆರಿಗೆ ರೂಪದಲ್ಲಿ ದಂಡ ಸಂಗ್ರಹ ಪ್ಲಾನ್

ಸ್ವಿಸ್‍ಬ್ಯಾಂಕ್ ಅಕೌಂಟ್ ಬೇಟೆ
> ಕಪ್ಪು ಹಣದಾರರಿಗೆ ಬಜೆಟ್‍ನಲ್ಲಿ ಬಿಗ್ ಶಾಕ್
> ಮೋದಿ ಕೈಯಲ್ಲಿ ಸ್ವಿಸ್ ಖಾತೆದಾರರ ಪಟ್ಟಿ
> ಹಣ ಘೋಷಿಸಿಕೊಂಡು ದಂಡ ಕಟ್ಟಲು ಸೂಚಿಸಬಹುದು

ನಿರ್ಮಲಾ ಮುಂದಿನ ಸವಾಲುಗಳೇನು?
ಸವಾಲು#1 – ಆರ್ಥಿಕತೆ ಮೇಲೆತ್ತಬೇಕು
ಸವಾಲು#2 – ವಿತ್ತೀಯ ಕೊರತೆ
ಸವಾಲು#3 – ಉದ್ಯೋಗ ಸೃಷ್ಟಿ
ಸವಾಲು#4 – ರಫ್ತು, ಉತ್ಪಾದನಾ ನೀತಿಯ ಪರಾಮರ್ಶೆ
ಸವಾಲು#5 – ರೈತರ ಆದಾಯ ದ್ವಿಗುಣ
ಸವಾಲು#6 – ನಿರ್ಮಾಣ ವಲಯದ ಕುಸಿತ

ನಿರ್ಮಲಾ ಮೇಲಿನ ನಿರೀಕ್ಷೆಗಳು..!
ನಿರೀಕ್ಷೆ#1 – ವೈಯಕ್ತಿಕ ಆದಾಯ ತೆರಿಗೆ ಕಡಿತ
ನಿರೀಕ್ಷೆ#2 – ಹೂಡಿಕೆದಾರರಿಗೆ ರಿಲೀಫ್
ನಿರೀಕ್ಷೆ#3 – ನವಭಾರತಕ್ಕೆ ಹೆಚ್ಚಿನ ಖರ್ಚು
ನಿರೀಕ್ಷೆ#4 – ಗ್ರಾಮೀಣ ಭಾರತಕ್ಕೆ ಹಣದ ಹರಿವು
ನಿರೀಕ್ಷೆ#5 – ಬಡ್ಡಿ ಕಡಿತ

Share This Article
Leave a Comment

Leave a Reply

Your email address will not be published. Required fields are marked *