`ನಮಸ್ತೆ ಇಂಡಿಯಾ’ ಹೆಸರಿಟ್ಟುಕೊಂಡೇ ದೇಶದ್ರೋಹದ ಕೆಲಸ ಮಾಡ್ತಿದ್ದ ರವಿಪೂಜಾರಿ..!

Public TV
1 Min Read

ಬೆಂಗಳೂರು: ಆಫ್ರಿಕಾದ ಸೆನೆಗಲ್ ನಲ್ಲಿ ಸೆರೆ ಸಿಕ್ಕ ಮೋಸ್ಟ್ ವಾಂಟೆಡ್ ಗ್ಯಾಂಗ್‍ಸ್ಟರ್ ರವಿಪೂಜಾರಿ ತಾನು ಮಾಡುತ್ತಿದ್ದ ದಂಧೆಗೆ ಭಾರತದ ಹೆಸರನ್ನು ಬಳಸಿಕೊಳ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಸೆನೆಗಲ್‍ನಲ್ಲಿ ಬೀಡುಬಿಟ್ಟಿದ್ದ ಭೂಗತ ಪಾತಕಿ ರವಿ ಪೂಜಾರಿ ಅಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆದಿದ್ದನು. ಇದಕ್ಕೆ `ನಮಸ್ತೆ ಇಂಡಿಯಾ’ ಅನ್ನೋ ಹೆಸರಿಟ್ಟಿದ್ದನು. ಇಲ್ಲಿಂದಲೇ ಎಲ್ಲಾ ಬಾಲಿವುಡ್ ನಟರಿಗೆ, ಬಿಲ್ಡರ್‍ಗಳಿಗೆ ಬೆದರಿಕೆ ಹಾಕುತ್ತಿದ್ದನು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಡಾನ್ ರವಿ ಪೂಜಾರಿ ಬಂಧನದಿಂದ ನಿಟ್ಟಿಸಿರು ಬಿಟ್ಟ ಮಲ್ಪೆಯ ಕುಟುಂಬ

ಭೂಗತ ಪಾತಕಿ ರವಿ ಪೂಜಾರಿ ಬಗ್ಗೆ ಸುಳಿವು ನೀಡಿದ್ದು ಮುಂಬೈನ ರೌಡಿ ಆಕಾಶ್ ಶೆಟ್ಟಿ. ವಾರದ ಹಿಂದೆ ಸಿನಿಮೀಯ ರೀತಿಯಲ್ಲಿ ಮುಂಬೈ ಪೊಲೀಸರಿಂದ ಮಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ರೌಡಿ ಆಕಾಶ್ ಶೆಟ್ಟಿ, ರವಿಪೂಜಾರಿ ಬಗ್ಗೆ ಬಾಯಿಬಿಟ್ಟಿದ್ದನು. ಇದನ್ನೂ ಓದಿ: ಮುಂಬೈನ ರೌಡಿ ನೀಡಿದ್ದ ರವಿ ಪೂಜಾರಿಯ ಸುಳಿವು!

ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ರವಿ ಪೂಜಾರಿ ಕಳೆದ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು, ಬಿಲ್ಡರ್ ಗಳಿಗೆ ಫೋನ್ ಮೂಲಕ ಧಮ್ಕಿ ಹಾಕ್ತಿದ್ದನು. 60ಕ್ಕೂ ಹೆಚ್ಚು ಕೇಸ್‍ಗಳಲ್ಲಿ ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ ಚೋಟಾ ರಾಜನ್ ಜೊತೆ ಸೇರಿಕೊಂಡು ಅಂಡರ್ ವರ್ಲ್ಡ್ ಡಾನ್ ಆಗಿ ದುಬೈ, ಮಲೇಷ್ಯಾ, ಆಸ್ಟ್ರೇಲಿಯಾದಲ್ಲಿ ತಲೆ ಮರೆಸಿಕೊಳ್ತಿದ್ದನು. ಸದ್ಯ ಸೆನಗಲ್‍ನ ಸ್ಥಳೀಯ ಪೊಲೀಸರು ಭೂಗತ ಪಾತಕಿ ರವಿಪೂಜಾರಿಯನ್ನು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *