ಐದನೇ ವಿಶ್ವಕಪ್ ಮೇಲೆ ಚೋಟಾ ಬ್ಲೂ ಬಾಯ್ಸ್ ಕಣ್ಣು

Public TV
2 Min Read

– ವಿಶ್ವದಾಖಲೆ ಬರೆಯೋಕೆ ಕಿರಿಯರ ತಂಡದಲ್ಲಿ ರಣೋತ್ಸಾಹ

ಪೊಷೆಫ್‍ಸ್ಟ್ರೂಮ್: ದಕ್ಷಿಣ ಆಫ್ರಿಕಾದಲ್ಲಿ ಅಜೇಯ ನಾಗಾಲೋಟದೊಂದಿ ವಿಜಯದ ರಥದಲ್ಲಿ ಸಾಗುತ್ತಿರುವ ಭಾರತ ಕಿರಿಯರ ತಂಡಕ್ಕೆ ವಿಶ್ವ ದಾಖಲೆ ನಿರ್ಮಿಸಲು ಇನ್ನೊದೇ ಹೆಜ್ಜೆ ಬಾಕಿ. ಬದ್ಧ ಕಟುವೈರಿ ಪಾಕಿಸ್ತಾನ ವನ್ನ 10 ವಿಕೆಟ್‍ಗಳಿಂದ ಸದೆಬಡಿದ ಭಾರತದ ಕಿರಿಯರ ತಂಡವು ಫೈನಲ್ ಗೆಲ್ಲೋ ಉತ್ಸಾಹದಲ್ಲಿದೆ.

ಸೂಪರ್ ಸಂಡೇ ದಕ್ಷಿಣ ಆಫ್ರಿಕಾದ ಸೆನ್‍ವೇಸ್ ಕ್ರೀಡಾಂಗಣದಲ್ಲಿ ಅಂಡರ್ 19 ವಿಶ್ವಕಪ್ ಫೈನಲ್ ಮಹಾಯುದ್ಧ ನಡೆಯಲಿದೆ. ಬಾಂಗ್ಲಾದೇಶ ವಿರುದ್ಧ ರಣಕಹಳೆ ಊದಲು ಕಣಕ್ಕಿಳಿಲಿರುವ ಬ್ಲೂಬಾಯ್ಸ್ ಐದನೇ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಡಿಫೆಂಡಿಂಗ್ ಚಾಂಪಿಯನ್ ಆಗಿರುವ ಕ್ಯಾಪ್ಟನ್ ಪ್ರಿಯಾಮ್ ಗಾರ್ಗ್ ನೇತೃತ್ವದ ಯುವಪಡೆ ಬಾಂಗ್ಲಾ ಆಟಗಾರರನ್ನು ಹೆಡೆಮುರಿ ಕಟ್ಟಿ ವಿಶ್ವದಾಖಲೆ ಬರೆಯೋಕೆ ರಣೋತ್ಸಾಹದಲ್ಲಿದ್ದಾರೆ.

ಟೂರ್ನಿಯುದ್ದಕ್ಕೂ ಅತ್ಯಮೋಘ ಪ್ರದರ್ಶನ ನೀಡುತ್ತಾ ಬಂದಿರುವ ಕಿರಿಯರ ತಂಡದಲ್ಲಿ ಮ್ಯಾಚ್ ವಿನ್ನರ್ಸ್ ದಂಡೇ ಇದೆ. ಓಪನಿಂಗ್ ಆರ್ಡರ್‌ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ದಿವ್ಯಾಂಶ್ ಸಕ್ಸೇನಾ ಬಲಿಷ್ಠವಾಗಿದ್ದರೆ, ಕ್ಯಾಪ್ಟನ್ ಪ್ರಿಯಾಮ್ ಗಾರ್ಗ್, ತಿಲಕ್ ವರ್ಮಾ, ಸಿದ್ದೇಶ್ ವೀರ್ ತಂಡದಲ್ಲಿರುವ ಬ್ಯಾಟಿಂಗ್ ಆನೆ ಬಲ.

ಜ್ಯೂನಿಯರ್ ಟೀಂ ಇಂಡಿಯಾ ಬೌಲಿಂಗ್ ಅಸ್ತ್ರಗಳು ಬಲಾಢ್ಯವಾಗಿದೆ. ಕಿರಿಯರ ತಂಡ ಫೈನಲ್ ತಲುಪಲು ಬೌಲರ್‌ಗಳ ಪಾತ್ರವೂ ದೊಡ್ಡದು. ಎದುರಾಳಿಗಳನ್ನ ಸಲೀಸಾಗಿ ತಮ್ಮ ಖೆಡ್ಡಾಗೆ ಕೆಡವೂ ಬೌಲಿಂಗ್ ಸಾಮರ್ಥ್ಯ ತಂಡದಲ್ಲಿದೆ. ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ರವಿ ಬಿಷ್ಣೋಯಿ, ಎ.ವಿ. ಅಂಕೊಲೇಕರ್ ವಿಕೆಟ್ ಕೀಳೋದನ್ನ ಕರಗತ ಮಾಡಿಕೊಂಡ ಬೌಲಿಂಗ್ ಬ್ರಹ್ಮಸ್ತ್ರಗಳು.

ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಸೋಲುಣಿಸಿ ಮೊದಲ ಬಾರಿಗೆ ಕಿರಿಯರ ವಿಶ್ವಕಪ್‍ನಲ್ಲಿ ಬಾಂಗ್ಲಾದೇಶ ಟ್ರೋಫಿ ಗೆಲ್ಲುವ ತವಕದಲ್ಲಿದೆ. ಬಾಂಗ್ಲಾ ತಂಡದಲ್ಲೂ ಭಾರತಕ್ಕೆ ಸವಾಲೊಡ್ಡುವ ಆಟಗಾರರಿದ್ದಾರೆ. ಫೈನಲ್ ತಲುಪಲು ಸಾಕ್ಷಿಯಾದ ಮೊಹಮದ್ದುಲ್ಲಾ ಹಸನ್ ಜಾಯ್, ಶಹದಾತ್ ಹುಸೈನ್, ತೌಹಿದ್ ಹಿರಿದೋಯ್ ಬ್ಯಾಟಿಂಗ್ ಫಾರ್ಮ್ ನಲ್ಲಿದ್ದಾರೆ. ಶೋರಿಫುಲ್ ಇಸ್ಲಾಂ, ಹಸಮ್ ಮುರಾದ್, ಶಮಿಮ್ ಹುಸೈನ್ ಭಾರತ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ರೆಡಿಯಾಗಿದ್ದಾರೆ. ಇದರೊಂದಿಗೆ ಚೊಚ್ಚಲ ವಿಶ್ವಕಪ್ ಗೆಲ್ಲುವ ವಿಶ್ವಾದಲ್ಲಿದ್ದಾರೆ. ಹರಿಣಗಳ ನಾಡಲ್ಲಿ ಟೀಂ ಇಂಡಿಯಾ ಕಿರಿಯರ ತಂಡ ಗೆಲ್ಲುವ ಫೇವರೆಟ್ ತಂಡವಾಗಿದೆ. ಇಲ್ಲಿ ನಡೆಯಲಿರುವ ಮೆಘಾ ಫೈಟ್ ಸಾಕಷ್ಟು ರೋಚಕ, ಕುತೂಹಲಗಳಿಗೆ ಸಾಕ್ಷಿ ಆಗಿಲಿದೆ.

ಭಾರತ ಕಿರಿಯರ ತಂಡ ಫೈನಲ್ ಹಾದಿ:
* ಲೀಗ್ ಮ್ಯಾಚ್- ಶ್ರೀಲಂಕಾ ವಿರುದ್ಧ 90 ರನ್‍ಗಳ ಜಯ
* ಲೀಗ್ ಮ್ಯಾಚ್- ಜಪಾನ್ ವಿರುದ್ಧ 10 ವಿಕೆಟ್‍ಗಳ ಗೆಲುವು
* ಲೀಗ್ ಮ್ಯಾಚ್- ನ್ಯೂಜಿಲೆಂಡ್ ವಿರುದ್ಧ 44 ರನ್‍ಗಳ ಜಯ (ಡಿಎಲ್‍ಎಸ್)
* ಕ್ಯಾಟರ್ ಫೈನಲ್ ಮ್ಯಾಚ್- ಆಸ್ಟ್ರೇಲಿಯಾ ವಿರುದ್ಧ 74 ರನ್‍ಗಳ ಜಯ
* ಸೆಮಿಫೈನಲ್ ಮ್ಯಾಚ್- ಪಾಕಿಸ್ತಾನ ವಿರುದ್ಧ 10 ವಿಕೆಟ್‍ಗಳ ಗೆಲುವು

ಬಾಂಗ್ಲಾ ಕಿರಿಯರ ತಂಡ ಫೈನಲ್ ಹಾದಿ:
* ಲೀಗ್ ಮ್ಯಾಚ್- ಜಿಂಬಾಬ್ವೆ ವಿರುದ್ಧ 9 ವಿಕೆಟ್‍ಗಳ ಜಯ (ಡಿಎಲ್‍ಎಸ್)
* ಲೀಗ್ ಮ್ಯಾಚ್- ಸ್ಕಾಟ್‍ಲೆಂಡ್ ವಿರುದ್ಧ 7 ವಿಕೆಟ್‍ಗಳ ಗೆಲುವು
* ಲೀಗ್ ಮ್ಯಾಚ್- ಪಾಲಿಸ್ತಾನ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿ-ಫಲಿತಾಂಶ ಇಲ್ಲ
* ಕ್ಯಾಟರ್ ಫೈನಲ್ ಮ್ಯಾಚ್- ದಕ್ಷಿಣ ಆಫ್ರಿಕಾ ವಿರುದ್ಧ 104 ರನ್‍ಗಳ ಜಯ
* ಸೆಮಿಫೈನಲ್ ಮ್ಯಾಚ್- ನ್ಯೂಜಿಲೆಂಡ್ ವಿರುದ್ಧ 6 ವಿಕೆಟ್‍ಗಳ ಗೆಲುವು

Share This Article
Leave a Comment

Leave a Reply

Your email address will not be published. Required fields are marked *