ಕುಡಿಯಲು ನೀರು ತರಲು ಹೋದಾಗ ಕೆರೆಯಲ್ಲಿ ಮುಳುಗಿ ಚಿಕ್ಕಪ್ಪ, ಮಗ ಸಾವು

Public TV
1 Min Read

ರಾಯಚೂರು: ಕುಡಿಯಲು ನೀರು ತರಲು ಹೋಗಿ ಕೆರೆಯಲ್ಲಿ (Lake) ಮುಳುಗಿ ಚಿಕ್ಕಪ್ಪ (Uncle) ಹಾಗೂ ಮಗ (Son) ಸಾವನ್ನಪ್ಪಿರುವ ಘಟನೆ ರಾಯಚೂರು (Raichur) ತಾಲೂಕಿನ ಕೊರ್ತಕುಂದಾ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಚಿಕ್ಕಪ್ಪ ಸಲೀಂ ಹುಸೇನಸಾಬ್ (32) ಹಾಗೂ ಅಣ್ಣನ ಮಗ ಯಾಸೀನ್ ರಫಿ (13) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನರೇಗಾ ಕೆಲಸಕ್ಕೆ ಚಿಕ್ಕಪ್ಪನ ಜೊತೆಯಲ್ಲಿ ಹೋಗಿದ್ದ ಬಾಲಕ ಕೆರೆಯಲ್ಲಿ ಕುಡಿಯಲು ನೀರು ತುಂಬಿಕೊಂಡು ಬರಲು ಹೋಗಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ. ಬಾಲಕನ ಚೀರಾಟ ಕೇಳಿ ರಕ್ಷಣೆಗೆ ಹೋದ ಚಿಕ್ಕಪ್ಪನೂ ಕೆರೆಯಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಶವವನ್ನು ಕಾರಿನಲ್ಲೇ ತಂದಿದ್ದ ಪಾಪಿ ತಂದೆ!

ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: 20 ಟನ್ ಅಕ್ಕಿ ಕದ್ದೊಯ್ದ ಪ್ರಕರಣ – ಕಳುವಾದ ಲಾರಿಯಲ್ಲಿ ಇರಲೇ ಇಲ್ಲ GPS

Share This Article