ಕ್ರಿಕೆಟ್ ಪಂದ್ಯದ ವೇಳೆ ಜೇನು ದಾಳಿಗೆ ಅಂಪೈರ್ ಸಾವು

1 Min Read

ಲಕ್ನೋ: ಉತ್ತರ ಪ್ರದೇಶದ (Uttar Pradesh) ಉನ್ನಾವೊದ ಸಪ್ರು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಜೇನು ದಾಳಿಯಿಂದ (Bee Attack) ಅನುಭವಿ ಕ್ರಿಕೆಟ್ ಅಂಪೈರ್ ಮಾಣಿಕ್ ಗುಪ್ತಾ ಸಾವನ್ನಪ್ಪಿದ್ದಾರೆ.

ಮಾಣಿಕ್ ಕಾನ್ಪುರ ಕ್ರಿಕೆಟ್ ಸರ್ಕ್ಯೂಟ್‌ನಲ್ಲಿ ಗಣ್ಯ ಅಂಪೈರ್ (Umpire) ಆಗಿದ್ದರು. ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ಸಹ ಸಂಬಂಧ ಹೊಂದಿದ್ದರು. ಪಂದ್ಯ ಮುಗಿಸಿದ ನಂತರ, ಮಾಣಿಕ್ ಪಾನೀಯ ವಿರಾಮದ ಸಮಯದಲ್ಲಿ ಸಹ ಅಂಪೈರ್ ಅವರನ್ನು ಭೇಟಿ ಮಾಡಲು ಹೋದಾಗ, ಜೇನು ಹಿಂಡು ಇದ್ದಕ್ಕಿದ್ದಂತೆ ಅಲ್ಲಿದ್ದ ಎಲ್ಲರ ಮೇಲೆ ದಾಳಿ ಮಾಡಿತು. ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ, ಮಾಣಿಕ್ ಆಯತಪ್ಪಿ ಬಿದ್ದರು. ಅವರಿಗೆ ಜೇನು ಮುತ್ತಿಕೊಂಡು ಕಚ್ಚಿವೆ. ಇದನ್ನೂ ಓದಿ: 11 ವರ್ಷದ ಬಳಿಕ ರಣಜಿ ಫೈನಲ್‌ಗೆ ಕರ್ನಾಟಕ – ಹುಬ್ಬಳ್ಳಿಯಲ್ಲಿ ಪಂದ್ಯ

ಮಾಣಿಕ್ ಸುಮಾರು 30 ವರ್ಷಗಳಿಂದ ಅಂಪೈರ್ ಆಗಿದ್ದರು. ರಾಜ್ಯ ಸಮಿತಿಯ ಅಂಪೈರ್ ಕೂಡ ಆಗಿದ್ದರು. ಅಂಪೈರ್ ಮಾಣಿಕ್ ಗುಪ್ತಾ ಅವರ ನೆರೆಯ ಭರತೇಂದು ಪುರಿ, ಮಾಣಿಕ್ ಗುಪ್ತಾ ತಮ್ಮ ಇಡೀ ಜೀವನವನ್ನು ಅಂಪೈರಿಂಗ್ ಮತ್ತು ಕುಟುಂಬಕ್ಕಾಗಿ ಮುಡಿಪಾಗಿಟ್ಟರು ಎಂದು ನೆನಪಿಸಿಕೊಂಡಿದ್ದಾರೆ. ಅವರು ಕ್ರಿಕೆಟ್‌ಗೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದರು. ಈ ಘಟನೆ ದುರದೃಷ್ಟಕರ ಎಂದು ಎಂದಿದ್ದಾರೆ.

ಮಾಣಿಕ್‌ ಅವರು ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯರಾಗಿದ್ದರು. ಕಾನ್ಪುರದಲ್ಲಿ ಒಬ್ಬ ವಿಶಿಷ್ಟ ಅಂಪೈರ್ ಆಗಿದ್ದರು ಎಂದು ಭರತೇಂದು ಪುರಿ ತಿಳಿಸಿದ್ದಾರೆ. ಇದನ್ನೂ ಓದಿ: ಜಿಂಬಾಬ್ವೆಯಿಂದ ಲಂಕಾದಹನ – ಕೊನೆಯ ಓವರ್‌ನಲ್ಲಿ ರೋಚಕ ಜಯ

Share This Article