ಲವ್ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ಉಮೇಶ್ ಕತ್ತಿ

Public TV
3 Min Read

ಬೆಂಗಳೂರು: ಸಚಿವ ಉಮೇಶ್ ಕತ್ತಿ(Umesh Katti) ಅವರನ್ನು ಪಬ್ಲಿಕ್ ಟಿವಿ ಈ ಹಿಂದೆ ಸಂದರ್ಶನ ನೀಡಿದ್ದಾಗ ಅವರು ತಮ್ಮ ಕಾಲೇಜಿನ ದಿನಗಳನ್ನು ಮೆಲಕು ಹಾಕುತ್ತಾ, ತಮ್ಮ ವರ್ಣರಂಜಿತ ಜೀವನ ಬಗ್ಗೆ ಹಾಗೂ ಲವ್ ಸ್ಟೋರಿಯ(Love Story) ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.

ಐ ಲವ್ ಯೂ ಎಂದು ನಾನು ಯಾರಿಗೂ ಹೇಳಿರಲಿಲ್ಲ. ಹಾಗೇ ಆಗಿನ ಕಾಲದಲ್ಲಿ ಯಾರೂ ಐ ಲವ್ ಯು ಎಂದು ಹೇಳಲು ಹೋಗುತ್ತಿರಲಿಲ್ಲ. ಆಗಿನ ಕಾಲದಲ್ಲಿ ಆ ರೀತಿ ಇರಲಿಲ್ಲ. ಆಗಿನ ಕಾಲದಲ್ಲಿ ಆ ರೀತಿ ಹೇಳಿದ್ದರೆ ಅವರ ತಂದೆ ತಾಯಿ ಹಾಗೂ ನಮ್ಮ ತಂದೆ ತಾಯಿಯರು ಸೀರಿಯಸ್ ಆಗುತ್ತಿದ್ದರು ಜೊತೆಗೆ ಬೈಯುತ್ತಿದ್ದರು. ಅದಕ್ಕೆ ಐ ಲವ್ ಯೂ ಹೇಳುವ ಪ್ರಶ್ನೆಯೇ ಬರುತ್ತಿರಲಿಲ್ಲ. ಈ ರೀತಿಯ ಪರಿಸರದಲ್ಲಿ ನಾವು ಬೆಳೆದು ಬಂದಿದ್ದೆವು ಎಂದು ಹೇಳಿದರು.

ಇವತ್ತಿನ ದಿನಮಾನದಲ್ಲಿ ನಾವು ನೋಡುತ್ತಿದ್ದೇವೆ. ಕೆಲವರು ಐ ಲವ್ ಯೂ ಎಂದು ಸುತ್ತಾಟವನ್ನೆಲ್ಲಾ ಮಾಡುತ್ತಾರೆ. ಆದರೆ ಅವತ್ತಿನ ದಿನಗಳಲ್ಲಿ ಇದೆಲ್ಲಾ ಇರಲಿಲ್ಲ. ಅವಕಾಶವಿತ್ತು, ಆದರೆ ಹುಡುಗಿಯರು ಕಾಲೇಜಿಗೆ(College) ಬರುತ್ತಿರಲಿಲ್ಲ. ಹಾಗಾಗಿ ತೊಂದರೆ ಆಗುತ್ತಿತ್ತು ಎಂದು ತಮಾಷೆ ಮಾಡಿದ್ದರು.

ನನ್ನ ಸಹೋದರ ಅಕ್ಕನ ಮಗಳನ್ನೇ ನಾನು ಮದುವೆ(marriage) ಆಗಿದ್ದೇನೆ. ಅವಳು ಇಲ್ಲೇ ಕಲಿಯುತ್ತಿದ್ದಳು. ಇಲ್ಲೇ ಮದುವೆಯೂ ಆಯಿತು. ಆದರೆ ಲೈನ್ ಎಲ್ಲಾ ನಾನು ಹೊಡೆದಿಲ್ಲ. ರಜೆಯಿದ್ದಾಗ ಅವಳು ಇಲ್ಲಿ ಬರುತ್ತಿದ್ದಳು, ನಾನು ಅಲ್ಲಿ ಹೋಗುತ್ತಿದ್ದೆ. ಹಾಗಾಗಿ ಸಂಬಂಧಗಳು ಬಂದಿಲ್ಲ ಎಂದು ಹಳೆಯದ್ದನ್ನು ನೆನಪು ಮಾಡಿಕೊಂಡಿದ್ದರು.

ಅಕ್ಕನ ಮಗಳ ಪರಿಚಯವಿತ್ತು. ಆದರೆ ಆಗೆಲ್ಲಾ ಲವ್ ಯೂ ಅನ್ನೊದು ಅವಳಿಗೂ ಹೇಳಲು ಬರುತ್ತಿರಲಿಲ್ಲ. ನನಗೂ ಹೇಳಲು ಬರುತ್ತಿರಲಿಲ್ಲ. ಈಗ ಹೇಳಲು ದುಡ್ಡು ಕಾಸಿನ ಪ್ರಶ್ನೆ ಬರುವುದಿಲ್ಲ, ಬದಲಿಗೆ ಲವ್ ಯೂ ಹೇಳುವ ಆ ವಯಸ್ಸು ನಮ್ಮಿಬ್ಬರಿಗೂ ಮುಗಿದಿದೆ ಎಂದು ನೆನಪು ಮಾಡಿಕೊಂಡಿದ್ದರು.

ಶಾಲೆಯ ನೆನಪು ಮಾಡಿಕೊಂಡಿದ್ದ ಅವರು, ಶಾಲೆಗೆ ಹೋಗುತ್ತಿದ್ದೆವು. ಆದರೆ ನಮಗೆ ಶಾಲೆ ಕಲಿತು ಕೆಲಸ ಮಾಡಬೇಕು ಎಂಬುದಿರಲಿಲ್ಲ. ತಂದೆ ತಾಯಿಯರು ಶಾಲೆಗೆ ಕಳುಹಿಸುತ್ತಾರೆ. ನಾವು ಶಾಲೆಗೆ ಹೋಗಬೇಕು ಎನ್ನೋದಷ್ಟೇ ಇತ್ತು. ಮದುವೆ ಆದಾಗ ಶಾಲೆ ಬಿಟ್ಟೆವು ಎಂದು ತಿಳಿಸಿದರು.

ಆಗಿನ ಚುಡುಯಿಸುವುದಕ್ಕೂ ಈಗ ಚುಡಾಯಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಈಗ ಹುಡುಗಿಯರೇ ಹುಡುಗರನ್ನು ಚುಡಾಯಿಸುತ್ತಿದ್ದಾರೆ. ಆಗೆಲ್ಲ ನಾವು ಹುಡುಗಿಯರನ್ನು ಚುಡಾಯಿಸುತ್ತಿದ್ದೆವು. ಮನೆ ಹತ್ತಿರ ಒಂದು ಆಲದ ಮರವಿದೆ. ಮರದ ಮೇಲೆ ಕೂತು ಅಲ್ಲಿಂದ ಕಾಯಿ ಒಗೆಯೋದು. ಕಲ್ಲು ಒಗೆಯೋದು ಎಲ್ಲಾ ಮಾಡುತ್ತಿದ್ದೆವು. ಆಗೆಲ್ಲಾ ಅವರು ಅಲ್ಲಿ ಕೂಗಾಡಿ, ನೇರವಾಗಿ ನಮ್ಮ ಮನೆಗೆ ಬಂದು ನನ್ನ ತಂದೆ ತಾಯಿಗೆ ದೂರು ಹೇಳುತ್ತಿದ್ದರು. ಆಗ ತಂದೆ ತಾಯಿಯರು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆಗೆಲ್ಲಾ ನಮಗೆ ಅರ್ಥವಾಗುತ್ತಿರಲಿಲ್ಲ. ಆದರೂ ಈ ರೀತಿ ಮಾಡಿ ಮಜ ಮಾಡುತ್ತಿದ್ದೆವು ಎಂದು ನೆನಪು ಮಾಡಿಕೊಂಡರು. ಇದನ್ನೂ ಓದಿ: ದೇವರು ಇನ್ನೊಮ್ಮೆ ದೊಡ್ಡಪ್ಪನಿಗೆ ಜೀವ ಕೊಡಲಿ: ಪೃಥ್ವಿ ಕತ್ತಿ ಕಣ್ಣೀರು

ಆಗಿನ ಕಾಲದಲ್ಲಿ 1 ತಿಂಗಳ ರಜೆ ಇರುತ್ತಿತ್ತು. ಹಬ್ಬ ಆಚರಣೆ ಮಾಡಲು ತಾಯಿ ಮನೆಗೆ ಹೋಗುತ್ತಿದ್ದೆವು. ಇದು ಇರೋದು ಚಿಕ್ಕೊಡಿ ತಾಲೂಕಿನ ಖಡಗ ಊರು ನಮ್ಮ ತಾಯಿ ಊರು ಆಗಿದೆ. ಹಬ್ಬ, ಹುಣ್ಣಿಮೆ, ಬೇಸಿಗೆಯಲ್ಲಿ ತಾಯಿ ಮನೆಗೆ ಹೋಗಿ ಮಜಾ ಮಾಡುತ್ತಿದ್ದೆವು. ಆಗ ಎಲ್ಲರೂ ಒಟ್ಟಿಗೆ ಕೂಡಿ ಹಬ್ಬ ಮಾಡುತ್ತಿದ್ದೆವು. ಇತ್ತೀಚೆಗೆ ಕುಟುಂಬ ಒಗ್ಗಟಿಲ್ಲದಿದ್ದರಿಂದ ನಾವು ಇಲ್ಲೇ ಹಬ್ಬ ಆಚರಿಸುತ್ತೇವೆ. ಅವರು ಅಲ್ಲೇ ಹಬ್ಬ ಮಾಡುತ್ತಾರೆ. ತಾಯಿ ಮಾಡುತ್ತಿರುವ ರೊಟ್ಟಿ, ಕಾಯಿ ಪಲ್ಯ ತುಂಬಾ ರುಚಿಕರವಾಗಿರುತ್ತಿತ್ತು ಎಂದು ಹೇಳಿದ್ದರು. ಇದನ್ನೂ ಓದಿ: ಸಕ್ಕರೆ ಉದ್ಯಮಕ್ಕೆ ಉಮೇಶ್ ಕತ್ತಿ ಕೊಡುಗೆ ಮರೆಯುವಂತಿಲ್ಲ: ಡಿ.ಕೆ ಶಿವಕುಮಾರ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *